ಸಿನಿಮಾಸಿನಿಮಾ ಸುದ್ದಿ

ಪ್ರಭಾಸ್ ಅಭಿನಯದ Kalki 2898 AD ಬಿಡುಗಡೆ ದಿನಾಂಕ ಕೊನೆಗೂ ಫಿಕ್ಸ್; ರಿಲೀಸ್ ಯಾವಾಗ ಗೊತ್ತಾ?

Prabhas Starrer Kalki 2898 AD Release Date Finally Fixed; Do you know when the release is?

  • ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಮುಂಬೈ: ನಟ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ Kalki 2898 AD ಕೊನೆಗೂ ತನ್ನ ಬಿಡುಗಡೆ ದಿನಾಂಕ ಫಿಕ್ಸ್ ಮಾಡಿದ್ದು, ಜೂನ್ 27 ರಂದು ಸಿನಿಮಾ ರಿಲೀಸ್ ಆಗಲಿದೆ.

ಪ್ರಭಾಸ್  ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಮೇ 9ರಂದು ರಿಲೀಸ್ ಆಗಲಿದೆ ಎಂದು ತಂಡ ಈ ಮೊದಲು ಹೇಳಿಕೊಂಡಿತ್ತು. ಆದರೆ, ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಭಾಗಿ ಆಗಿಲ್ಲ. ಲೋಕಸಭೆ ಚುನಾವಣೆ ಮತ್ತು ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿತ್ತು.

ಇದೀಗ ಚಿತ್ರ ಬಿಡುಗಡೆಯ ಹೊಸ ದಿನಾಂಕ ನಿಗದಿಯಾಗಿದ್ದು, ಚಿತ್ರ ಜೂನ್ 27 ರಂದು ಬಿಡುಗಡೆಯಾಗಲಿದೆ.

ಈ ಬಗ್ಗೆ ಚಿತ್ರತಂಡ ಇಂದು ಸಂಜೆ ಅಧಿಕೃತವಾಗಿ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಜೂನ್ 27 ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಮಾತ್ರವಲ್ಲದೇ ಹಿಂದಿಯ ದೀಪಿಕಾ ಪಡುಕೋಣೆ, ದಿಶಾ ಪಟಾಣಿ, ಅಮಿತಾಭ್​ ಬಚ್ಚನ್, ತಮಿಳಿನ ಕಮಲ್ ಹಾಸನ್ ಸೇರಿದಂತೆ ದೊಡ್ಡ ಕಲಾವಿದರ ಬಳಗವೇ ಇದೆ. ಈ ಬಹು ನಿರೀಕ್ಷಿತ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಸಿದ್ದು, ಚಿತ್ರ ತನ್ನ ದೊಡ್ಡ ಬಜೆಟ್ ಮೂಲಕವೇ ಭಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ...

Back to top button
>