ಭಕ್ತಿ-ಭವಿಷ್ಯ

Horoscope Today: ಬನ್ನಿ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳೋಣ.

Horoscope Today: Let's know the future today

ರಾಶಿ ಫಲಗಳು

ಮೇಷ
ನಿಮ್ಮ ಪರಿಶ್ರಮಕ್ಕೆ ತಕ್ಕಂತಹ ಫಲಿತಾಂಶ ನಿಮಗೆ ದೊರೆಯುತ್ತದೆ. ನಿಮ್ಮ ಕುಟುಂಬದ ಒಳಗೆ ಮತ್ತು ಸಮಾಜದಲ್ಲಿ ನಿರೀಕ್ಷೆಗೂ ಮೀರಿದ ಗೌರವವನ್ನು ಪಡೆಯುವಿರಿ. ನಿಮ್ಮ ಮುಂಜಾಗರೂಕತೆಯಿಂದ ನಿಮ್ಮ ತಾಯಿಯವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿಮಾಡುವಿರಿ. ದಿನವಿಡೀ ಶಾಂತಿ ಸಂತಸದಿಂದ ಇರುವಿರಿ. ಹೊಸ ವಾಹನ ಕೊಳ್ಳುವಿರಿ. ನಿಮ್ಮ ಕ್ರಿಯಾಶೀಲ ವ್ಯಕ್ತಿತ್ವ ಎಲ್ಲರ ಗಮನ ಸೆಳೆಯುತ್ತದೆ. ಅನವಶ್ಯಕ ಖರ್ಚನ್ನು ನಿಯಂತ್ರಿಸಿ. ಶ್ರೀ ಸರ್ಪ ಸೂಕ್ತ ಪಠಿಸುವುದರಿಂದ ಅಥವ ಕೇಳುವುದರಿಂದ ಮನದಲ್ಲಿನ ಆತಂಕ ದೂರವಾಗುವುದು.

ವೃಷಭ
ನಿಮ್ಮ ಹಠದ ಗುಣ ಬೇರೆಯವರ ಬೇಸರಕ್ಕೆ ಕಾರಣವಾಗಬಹುದು. ನಿಮ್ಮ ಕುಲದೇವಿಗೆ ವಿಶೇಷವಾದ ಪೂಜೆ ಸಲ್ಲಿಸುವಿರಿ. ವಿವಾಹಯೋಗವಿದೆ. ನೀವು ಕೃಷಿಕರಾದಲ್ಲಿ ಆದಾಯ ಹೆಚ್ಚಿಸಿಕೊಳ್ಳಲ್ಲು ಹೈನುವ್ಯಾಪಾರ ಮಾಡುವಿರಿ. ನಿಮ್ಮ ಮಕ್ಕಳಿಗೆ ಅಧಿಕಾರ ಯೋಗವಿದೆ. ಬೇಕರಿ ಅಥವ ಹೋಟೆಲ್ ವ್ಯಾಪಾರವಿದ್ದಲ್ಲಿ ನಿಮಗೆ ಹೆಚ್ಚಿನ ಆದಾಯ ದೊರೆಯುತ್ತದೆ. ನಿಮಗೆ ಸಂಘ-ಸಂಸ್ಠೆಯೊಂದರ ನೇತೃತ್ವ ವಹಿಸುವ ಅವಕಾಶ ದೊರೆಯುತ್ತದೆ. ನಿಮ್ಮ ಮಕ್ಕಳಿಗೆ ವಿದೇಶದಲ್ಲಿ ಉಧ್ಯೋಗ ದೊರೆಯುತ್ತದೆ. ನಿಮ್ಮ ಮಧ್ಯಸ್ಥಿಕೆಯಿಂದ ಹಣಕಾಸಿನ ವಿವಾದ ಬಗೆಹರಿಯುತ್ತದೆ. ಹನುಮಂತರ ಪೂಜೆಯಿಂದ ಶುಭಫಲಗಳು ದೊರೆಯುತ್ತವೆ.

ಮಿಥುನ
ನಿಮಗೆ ಖರ್ಚು ವೆಚ್ಚಗಳು ಅಧಿಕವಾಗಿರುತ್ತವೆ. ನಿಮ್ಮ ತಾಯಿಯ ಧೈರ್ಯದ ಗುಣ ನಿಮಗೆ ಶ್ರೀರಕ್ಷೆ ಆಗಲಿದೆ. ವಿನಾ ಕಾರಣ ವಿವಾದವೊಂದನ್ನು ನೀವು ಎದುರಿಸಬೇಕಾಗುತ್ತದೆ. ನೀವು ನೀರಿನಿಂದಾಗಿ ತೊಂದರೆಯನ್ನು ಎದುರಿಸಾಬೇಕಾಗುತ್ತದೆ ಎಚ್ಚರಿಕೆಯಿಂದಿರಿ. ಸಮಾನಭಾವನೆಯಿಂದ ನಿಮ್ಮ ಮನದಲ್ಲಿ ಇರುವ ವಿಚಾರವನ್ನು ಎಲ್ಲರಿಗೂ ತಿಳಿಸುವಿರಿ. ನಿಮಗೆ ನಿಮ್ಮ ತಾಯಿಯಿಂದ ಹಣದ ಸಹಾಯ ದೊರೆಯುತ್ತದೆ. ನಿಮಗೆ ಕಣ್ಣಿನ ತೊಂದರೆ ಇರುತ್ತದೆ ವೈಧ್ಯರಿಗೆ ವಿಶೇಷವಾದ ದಿನವಾಗಲಿದೆ. ಪತ್ನಿಯೊಂದಿಗೆ ಮನಸ್ತಾಪ ಇರುತ್ತದೆ. ಶ್ರೀ ದುರ್ಗೆಯ ಔಪಾಸನೆಯಿಂದ ಅಡ್ಡಿ ಆತಂಕಗಳು ದೂರವಾಗಲಿವೆ.

ಕಟಕ
ನಿಮಗೆ ಹೊಸ ಮನೆಯನ್ನು ಕೊಳ್ಳುವ ಆಸೆ ಇಂದು ಕಾರ್ಯರೂಪಕ್ಕೆ ಬರಲಿದೆ. ಹಣದ ಬಗ್ಗೆ ದುರಾಸಿ ಇರದೆ ಅಲ್ಪ ತೃಪ್ತಿ ಹೊಂದುವಿರಿ. ಗಿಟ್ಟಾಗಿ ಹಣ ಸಂಪಾದಿಸುವಿರಿ. ಅಶುಚಿ ಭೂಜನದಿಂದ ಉದರ ಶೂಲೆ ಉಂಟಾಗುತ್ತದೆ. ಭೂ ಸಂಭದಿತ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಆದಾಯ ಇರುತ್ತದೆ. ನದಿ ಅಥವಾ ಸಮುದ್ರದ ಬಳಿ ತೊಂದರೆ ಆಗಬಹುದು ಎಚ್ಚರಿಕೆ ಇರಲಿ. ಸಂಬದಿಕರೊಂದಿಗೆ ವಿನಾಕಾರಣ ವಾದ ವಿವಾದದಲ್ಲಿ ತೊಡಗುವಿರಿ. ಶಾಂತಿ ಸಂಯಮದಿಂದ ವರ್ತಿಸಿ. ಗೋಪೂಜೆ ಅಥವ ಗೋದಾನದಿಂದ ಶುಭವಿದೆ.

ಸಿಂಹ
ನೀವಿಂದು ಕೊಂಚ ಅಧೀರರಾಗಿ ವರ್ತಿಸುವಿರಿ. ನಿಮ್ಮ ಕುಟುಂಬದ ಸ್ತ್ರೀಯೊಬ್ಬರಿಂದ ವಿವಾದವೊಂದನ್ನು ಎದುರಿಸಬೇಕಾಗುತ್ತದೆ. ಸಂಬಧಿಕರಿಂದ ದೂರ ಉಳಿಯಬಯಸುವಿರಿ. ನಿಮ್ಮ ಸೋದರನ ಪಾಲುಗಾರಿಕೆಯಲ್ಲಿ ಹೊಸ ವ್ಯಾಪಾರವನ್ನು ಆರಂಬಿಸುವಿರಿ. ನಿಮ್ಮ ಒಳ್ಳೆಯ ಅಭ್ಯಾಸದಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆಭರಣಗಳ ತಯಾರಿಕೆಯ ಉದ್ಯೋಗ ಲಾಭದಾಯಕ. ಕಣ್ಣಿನ ತೊಂದರೆ ಉಂಟಾಗಬಹುದು. ನಿಮಗೆ ಹಾರ್ಮೋನಿನ ತೊಂದರೆ ಇದ್ದಲ್ಲಿ ವೈಧ್ಯರನ್ನು ಬೇಟಿಮಾಡುವುದು ಉತ್ತಮ. ದುರಾಸೆ ಇರದು. ನಿಮ್ಮ ತಾಯಿಯವರ ಮಾತು ನಿಮ್ಮಲ್ಲಿ ಹೊಸ ಹುಮ್ಮಸ್ಸು ತುಂಬುತ್ತದೆ. ಶ್ರೀಸುಬ್ರಹ್ಮಣ್ಯಸ್ವಾಮಿಗೆ ಪಂಚಾಮೃತಾಭಿಷೇಕ ಮಾಡಿಸಿ.

ಕನ್ಯಾ
ನಿಮ್ಮ ತಾಯಿಯವರ ಆಶೀರ್ವಾದ ಇಲ್ಲದೆ ಯಾವುದೇ ಕೆಲಸ ಆರಂಭಿಸದಿರಿ. ದುರಾಸೆ ಇರದು. ಸಂತಾನ ಭಾಗ್ಯವಿದೆ. ಅದೃಷ್ಠವಂತರು. ನಿಮ್ಮ ವಿಶಾಲವಾದ ಮನಸ್ಸು ಜನಮನ ಗೆಲ್ಲುತ್ತದೆ. ನಿಮಗೆ ಶೀತ ಕಫದ ತೊಂದರೆ ಇರುತ್ತದೆ. ವಿಧ್ಯಾರ್ಥಿಗಳು ದೊಡ್ಡ ಸಾಧನೆ ಮಾಡುತ್ತಾರೆ. ಎಲ್ಲರನ್ನೂ ಗೌರವದಿಂದ ನೋಡುವ ನಿಮಗೆ ಹೊಸ ಅವಕಾಶವೊಂದು ದೊರೆಯ್ಕುತ್ತದೆ. ತೋಟಗಾರಿಕೆಯ ಉತ್ಪನ್ನಗಳ ಮಾರಾಟದಲ್ಲಿ ಲಾಭವಿದೆ. ನಿಮ್ಮ ಸಹಾಯದಿಂದ ಸೋದರಿಯು ಉನ್ನತ ವಿದ್ಯಾಭ್ಯಾಸ ಆರಂಭಿಸುತ್ತಾರೆ. ಸರ್ಕಾರಿ ಉಧ್ಯೋಗಿಗಳಿಗೆ ಬಡ್ತಿ ದೊರೆಯಬಹುದು. ಶ್ರೀಗುರುರಾಯರ ಪೂಜೆಯಿಂದ ಶುಭವಿದೆ.

ತುಲಾ
ನಿಮ್ಮ ಆತುರದ ಮನಸ್ಸು ನೆಮ್ಮದಿಯಿಂದ ಇರಲು ಬಿಡದು. ಏನಾರೊಂದು ವಿಚಾರಕ್ಕೆ ಯೋಚನಾಮಗ್ನರಾಗುವಿರಿ. ನಿಮ್ಮ ಸೋದರನ ಉದ್ಯೋಗದಲ್ಲಿ ತೊಂದರೆ ಉಂಟಾಗಬಹುದು. ಆತ್ಮೀಯರೊಬ್ಬರ ಸಹಾಯ ನಿಮ್ಮ ಜೀವನದ ಶೈಲಿಯನ್ನೇ ಬದಲಾಯಿಸಲಿದೆ. ನಿಮ್ಮ ಕಷ್ಟದ ದಿನದಲ್ಲಿಯೂ ಬೇರೆಯವರಿಗೆ ಸಹಾಯ ಮಾಡುವುದು ನಿಮ್ಮ ಹೆಗ್ಗಳಿಕೆ. ಹಣದ ಕೊರತೆ ದೂರಾಗುತ್ತದೆ. ಸೋಲೊಪ್ಪದ ನೀವು ಅವಿರತ ಪ್ರಯತ್ನದಿಂದ ಕೈಹಿಡಿದ ಕೆಲಸ ಕಾರ್ಯದ್ದಲ್ಲಿ ಯಶಸ್ಸನ್ನು ಗಳಿಸುವಿರಿ. ಗುರಿ ತಲುಪುವವರೆಗೂ ನಿಮ್ಮ ಕಾರ್ಯಯೋಜನೆಯನ್ನು ಯಾರಿಗೂ ಹೇಳದಿರಿ. ಶ್ರೀ ಸೂರ್ಯಾರಾದನೆಯಿಂದ ಮನೋಧೈರ್ಯ ಹೆಚ್ಚುತ್ತದೆ.

ವೃಶ್ಚಿಕ
ನಿಮಗೆ ತೊಂದರೆ ನೀಡುವವರಿಗು ಸಹಾಯ ಮಾಡುವ ಒಳ್ಳೆಯತನ ನಿಮ್ಮಲ್ಲಿರುತ್ತದೆ. ಸುಲಭದಲ್ಲಿ ಅಧಿಕಾರವೊಂದು ನಿಮಗೆ ದೊರೆಯಲಿದೆ. ಅನಿರೀಕ್ಷಿತ ಧನಲಾಭವಿದೆ. ವಿದ್ಯಾರ್ಥಿಗಳು ವಿಶೇಷ ಸಾಧನೆಯನ್ನು ಮಾಡುತ್ತಾರೆ. ದುಡುಕುತನ ಇಲ್ಲದೆ ಮನದಲ್ಲಿಯೇ ಲೆಕ್ಕಾಚಾರ ಮಾಡಿ ನಂತರ ಕಾರ್ಯರೂಪಕ್ಕೆ ತರುವಿರಿ. ನೀವು ರಕ್ಷಣಾ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಲ್ಲಿ ಬಡ್ತಿ ದೊರೆಯುತ್ತದೆ. ನಿಮಗೆ ಕೋಪ ಬಂದಷ್ಟೇ ಬೇಗ ಶಾಂತಚಿತ್ತರಾಗುವಿರಿ. ಸ್ತ್ರೀಯರು ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಅಶಕ್ತರಿಗೆ ತೀರ್ಥಯಾತ್ರೆ ಮಾಡಲು ಧನಸಹಾಯ ಮಾಡಿದಲ್ಲಿ ವಿಶೇಷವಾದ ಫಲವೊಂದು ಲಭಿಸಲಿದೆ.

ಧನಸ್ಸು
ದಿನಾರಂಭದಲ್ಲಿಯೇ ಕೋಪ ತಾಪದಿಂದ ವರ್ತಿಸುವಿರಿ. ಇಂದು ಉತ್ತಮ ಆದಾಯ ವಿರುತ್ತದೆ. ಆದರೆ ಅದರ ಬೆನ್ನ ಹಿಂದೆಯೇ ಖರ್ಚುಇರುತ್ತದೆ. ನಿಮ್ಮ ತಾಯಿಯವರ ಮಾತನ್ನು ಕೇಳಿದಲ್ಲಿ ಸಹಜಸ್ಥಿತಿಗೆ ಮರಳುವಿರಿ. ಬಣ್ಣಗಳ ತಯಾರಿಕೆ ಮತ್ತು ವ್ಯಾಪಾರದಲ್ಲಿ ಹೇರಳ ಆದಾಯವಿದೆ. ನೀವು ಕಾರ್ಯಕ್ರಮಗಲ ಆಯೋಜಕರಾದಲ್ಲಿ ಹೊಸ ಅವಕಾಶವೊಂದು ನಿಮಗೆ ದೊರೆಯಲಿದೆ. ಚರ್ಮದತೊಂದರೆ ಇರುವವರು ಆಯುರ್ವೇದದ ಚಿಕಿತ್ಸೆಯಿಂದ ಗುಣಹೊಂದುವರು. ಆಹಾರ ಸಂಸ್ಕರಣೆಯ ವ್ಯಾಪಾರ ಲಾಭ ನೀಡುತ್ತದೆ. ದುಡುಕುತನ ಬೇಡ. ನಿಮ್ಮ ಮನೆದೇವರ ಪೂಜೆಯಿಂದ ಶುಭ ಫಲಗಳು ದೊರೆಯುತ್ತವೆ.

ಮಕರ
ನಿಮ್ಮ ಧೈರ್ಯದ ಗುಣ ಕಷ್ಟದ ಕೆಲಸವನ್ನೂ ಸುಲಭವಾಗಿಸುತ್ತದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ನೀವು ಹೆಚ್ಚಿನ ಮೊತ್ತದ ಹಣವನ್ನು ನಿರೀಕ್ಷಿಸುವಿರಿ. ಶಾಂತಿ ವಿಶ್ರಾಂತಿಗಾಗಿ ದೂರದೂರಿಗೆ ಪ್ರಯಾಣ ಮಾಡುವಿರಿ. ನಿಮ್ಮ ಮನದಲ್ಲಿನ ವಿಚಾರವನ್ನು ಎಲ್ಲರಲ್ಲೂ ಹಂಚಿಕೊಂಡಲ್ಲಿ ಮನದ ಚಿಂತೆ ಕಡಿಮೆ ಆಗುತ್ತದೆ. ಸಾಮಾಜಿಕ ಸೇವೆಯಲ್ಲಿ ಇರುವವರು ಜನರ ಮತ್ತು ಅಧಿಕಾರಿಗಳ ಪ್ರಶಂಸೆಗೆ ಒಳಗಾಗುತ್ತಾರೆ. ಬೇಕರಿ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಮಹಾಮೃತ್ಯುಂಜಯಮಂತ್ರದ ಜಪದಿಂದ ಎಲ್ಲಾ ವಿಧದ ಅಡೆತಡೆಗಳು ದೂರವಾಗುತ್ತವೆ.

ಕುಂಭ
ನಿಮ್ಮ ಒಳ್ಳೆಯ ಹವ್ಯಾಸಗಳಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ವೈಧ್ಯಕೀಯ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಕ್ಕೆ ಅಂತರಾಷ್ಟ್ರೀಯ ಮಟ್ಟದ ಗೌರವವನ್ನು ಪಡೆಯುವಿರಿ. ನೀವು ರಾಜಕೀಯ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರತಿಫಲ ಪಡೆಯುವಿರಿ. ನಿಮಗೆ ಕಣ್ಣಿನ ತೊಂದರೆ ಇರುತ್ತದೆ. ಗಣ್ಯವ್ಯೆಕ್ತಿಗಳು ನಿಮ್ಮ ಸ್ನೇಹವನ್ನು ಅರಸಿ ಬರುತ್ತಾರೆ. ಯಂತ್ರೋಪಕರಣಗಳ ವ್ಯಾಪಾರದಿಂದ ಉತ್ತಮ ಆದಾಯ ಇರುತ್ತದೆ. ಗೃಹಾಲಂಕಾರಕ್ಕೆ ಬೇಕಾದ ವಸ್ತುಗಳ ಮಾರಾಟದಲ್ಲಿ ಲಾಭವಿದೆ. ಸಂಘ ಸಂಸ್ಥೆ ಆರಂಬಿಸಲು ಸುಸಮಯ. ಶ್ರೀ ಮಹಾಸುದರ್ಶನ ಮಂತ್ರವನ್ನು ಜಪಿಸಿದು ಒಳಿತು.

ಮೀನ
ನೀವು ತಾಳ್ಮೆಯಿಂದ ವರ್ತಿಸಿದಲ್ಲಿ ಜೀವನದಲ್ಲಿ ದೊಡ್ಡ ಪರಿವರ್ತನೆಯೊಂದು ಉಂಟಾಗುತ್ತದೆ. ನೀವು ಅದೃಷ್ಟವಂತರು. ನಿಮ್ಮ ಪ್ರತಿ ಕೆಲಸದಲ್ಲಿಯೂ ಬಂದುವರ್ಗದ ಬೆಂಬಲ ದೊರೆಯುತ್ತದೆ. ಇದರಿಂದಾಗಿ ನಿಮಗೆ ಯಾವ ಕೆಲಸವೂ ಕಷ್ಟ ಎನಿಸದು. ಸುಲಭ ರೀತಿಯಲ್ಲಿ ಹೇರಳ ಹಣ ಸಂಪಾದನೆ ಇರುತ್ತದೆ. ಕಮೀಷನ್ ಆಧಾರದಲ್ಲಿ ನಡೆಸುವ ವ್ಯಾಪಾರ ವ್ಯವಹಾರದಲ್ಲಿಉತ್ತಮ ಆಧಾಯ ಇರುತ್ತದೆ. ಎಕ್ಸ್ ರೇ,ಸ್ಕ್ಯಾನಿಂಗ್ ಅಂತಹ ಪರೋಕ್ಷ ವೈಧ್ಯಕೀಯ ಸೇವೆಯಲ್ಲಿನ ಆದಾಯದಲ್ಲಿ ಏರಿಳಿತ ಇರುತ್ತದೆ. ಶ್ರೀರಾಮರಕ್ಷಾ ಸ್ತೋತ್ರ ಪಠಣೆಯಿಂದ ನಿರೀಕ್ಷಿಸಿದ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ.

ಇದನ್ನೂ ಓದಿ...

Back to top button
>