Author: Sub Editor
ಬೆಂಗಳೂರು (ಸಂಭ್ರಮಪ್ರಭಾ ಡೆಸ್ಕ್): ರಾಜ್ಯದ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾಕಾಂಕ್ಷಿ ಯುವಜನತೆಗೆ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂಪೂರ್ಣ ‘ಉಚಿತ ಬಸ್ ಪಾಸ್’ ನೀಡುವ ಐತಿಹಾಸಿಕ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಫ್ರೀ ಬಸ್ ಪಾಸ್ ಈ ಹಿಂದೆ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣ ಕಲ್ಪಿಸಲಾಗಿತ್ತು, ನಮಗೇನು ಸೌಲಭ್ಯವಿದೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಶಾಲಾ ಹಂತದಿಂದ ಹಿಡಿದು ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ (ಪಿಜಿ) ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ತೀರ್ಮಾನಿಸಿದೆ. “ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಇದೇ ಮೊದಲ ಬಾರಿಗೆ ಇಂಥದ್ದೊಂದು ದೊಡ್ಡ ತೀರ್ಮಾನ ಕೈಗೊಂಡಿದೆ. ಈ ಪಾಸ್‌ಗಾಗಿ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ. ಸಾರಿಗೆ ಇಲಾಖೆ ಜೊತೆ ಚರ್ಚಿಸಿ ಶೀಘ್ರದಲ್ಲೇ ಅರ್ಜಿಗಳನ್ನು ಆಹ್ವಾನಿಸಲಾಗುವುದು.…
ಬೆಂಗಳೂರು: ವಿದ್ಯುತ್ ಬಿಲ್‌ನ ದಂಡದ ಮೊತ್ತವನ್ನು ಕಡಿಮೆ ಮಾಡಿಕೊಡಲು ಬರೋಬ್ಬರಿ 15 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ರಾಜಾಜಿನಗರ ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಬಸವರಾಜಯ್ಯ ಬಂಧಿತ ಆರೋಪಿ. ಎಲೆಕ್ಟ್ರಿಸಿಟಿ ಬಿಲ್‌ನಲ್ಲಿ ವಿಧಿಸಲಾಗಿದ್ದ ದಂಡದ ಮೊತ್ತವನ್ನು ಕಡಿತಗೊಳಿಸಿಕೊಡುವಂತೆ ಕೋರಿ ಬಂದಿದ್ದ ವ್ಯಕ್ತಿಯ ಬಳಿ ಆರೋಪಿ ಎಇಇ ಬಸವರಾಜಯ್ಯ ಅವರು ಆರಂಭದಲ್ಲಿ 18 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ಮಾತುಕತೆ ನಡೆದು 15 ಲಕ್ಷ ರೂಪಾಯಿ ನೀಡಲು ಒಪ್ಪಂದವಾಗಿತ್ತು. ಈ ಕುರಿತು ಸಲ್ಲಿಕೆಯಾದ ಖಚಿತ ದೂರಿನ ಮೇರೆಗೆ ಕಾರ್ಯಾಚರಣೆಗಿಳಿದ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದ ತಂಡ, ಆರೋಪಿ ಬಸವರಾಜಯ್ಯ ಅವರು ದೂರುದಾರರಿಂದ 15 ಲಕ್ಷ ರೂ. ಲಂಚ ಸ್ವೀಕರಿಸುವಾಗ ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ತಕ್ಷಣವೇ ಆರೋಪಿ ಎಇಇ ಬಸವರಾಜಯ್ಯ ಅವರನ್ನು ಬಂಧಿಸಿರುವ ಲೋಕಾಯುಕ್ತ ಅಧಿಕಾರಿಗಳು, ಅವರಿಂದ ಲಂಚದ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ…
ಬೆಂಗಳೂರು: ರಾಜಧಾನಿ ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆ (MSW) ಯೋಜನೆಗೆ ಸಂಬಂಧಿಸಿದಂತೆ ಟಿಪ್ಪಿಂಗ್ ಶುಲ್ಕ ನಿಗದಿಯಲ್ಲಿ ಭಾರೀ ಅಕ್ರಮವೊಂದು ಬೆಳಕಿಗೆ ಬಂದಿದೆ. ಈ ಕುರಿತು ಸಮಗ್ರ ತನಿಖಾ ವರದಿ ಪ್ರಕಟಿಸಿರುವ ದಿ ಫೈಲ್ ಕನ್ನಡ ತನಿಖಾ ನ್ಯೂಸ್ ಪೋರ್ಟಲ್ ಪ್ರಕರಣದ ಗಂಭೀರತೆಯನ್ನು ಜನರ ಮುಂದಿಟ್ಟಿದೆ. ಆರ್ಥಿಕ ಇಲಾಖೆಯ ಕಟ್ಟುನಿಟ್ಟಿನ ಎಚ್ಚರಿಕೆ ಹಾಗೂ ವಿರೋಧದ ನಡುವೆಯೂ ರಾಜ್ಯ ಸಚಿವ ಸಂಪುಟವು ಸದ್ದಿಲ್ಲದೇ 39,437.37 ಕೋಟಿ ರೂಪಾಯಿಗಳ ಪರಿಷ್ಕೃತ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ತ್ಯಾಜ್ಯವನ್ನು ಸಾಗಾಣಿಕೆ ಕೇಂದ್ರಗಳಿಂದ ನಿಗದಿತ ಸಂಸ್ಕರಣೆ ಕೇಂದ್ರಗಳಿಗೆ ದ್ವಿತೀಯ ಸಾಗಾಣಿಕೆ, ಸಂಸ್ಕರಣೆ ಮತ್ತು ವಿಲೇವಾರಿ ಮಾಡುವ ಕಾರ್ಯಕ್ಕಾಗಿ ಬರೋಬ್ಬರಿ 30 ವರ್ಷಗಳ ದೀರ್ಘಾವಧಿಗೆ ಈ ಟೆಂಡರ್ ನೀಡಲಾಗಿದ್ದು, ವಾರ್ಷಿಕ ಶೇ.5 ರಷ್ಟು ಶುಲ್ಕ ಏರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಹಣಕಾಸು ಇಲಾಖೆಯ ಎಚ್ಚರಿಕೆ ಕಡೆಗಣನೆ ಒಬ್ಬರೇ ವೆಂಡರ್‌ಗೆ 30 ವರ್ಷಗಳ ಕಾಲ ಗುತ್ತಿಗೆ ನೀಡಿದರೆ, ಸರ್ಕಾರವು ಕೇವಲ ಅವರೊಬ್ಬರನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ಆರ್ಥಿಕ ಇಲಾಖೆ ಎಚ್ಚರಿಸಿತ್ತು. ಅಲ್ಲದೆ,…
ಪಶ್ಚಿಮ ಬಂಗಾಳದಲ್ಲಿ ಈಗ ಒಂದು ವಿಲಕ್ಷಣ ದೃಶ್ಯ ನಡೆಯುತ್ತಿದೆ. ಮುಸ್ಲಿಂ ಯುವಕರು ರಸ್ತೆಯಲ್ಲಿ ಜಾನುವಾರು ತರುತ್ತಿರುವ ಹಿಂದೂ ರೈತರನ್ನು ತಡೆದು, “ನಿಮ್ಮ ತಾಯಿಯನ್ನು ಮಾರುತ್ತೀರಾ? ಮನೆಗೆ ಕರೆದೊಯ್ಯಿರಿ” ಎಂದು ಹೇಳಿ ವಾಪಸ್ ಕಳಿಸುತ್ತಿದ್ದಾರೆ. ಇನ್ನೊಂದೆಡೆ ಆ ಹಿಂದೂ ರೈತರು, “ಹಸು ಮಾರದಿದ್ದರೆ ನಾವು ಸಾಯಬೇಕಾಗುತ್ತದೆ” ಎಂದು ಕಣ್ಣೀರು ಸುರಿಸುತ್ತಿದ್ದಾರೆ. ಇದು ಯಾವುದೋ ಸಿನೆಮಾ ಕಥೆಯಲ್ಲ — ಬಕ್ರೀದ್ ಹಬ್ಬಕ್ಕೆ ಕೆಲವೇ ದಿನಗಳಿರುವಾಗ ಬಂಗಾಳದ ನೆಲದಲ್ಲಿ ನಡೆಯುತ್ತಿರುವ ವಾಸ್ತವ. ಎಲ್ಲದಕ್ಕೂ ಕಾರಣ ಆ ಒಂದು ಸರ್ಕಾರಿ ಅಧಿಸೂಚನೆ ಮೇ 13 ರಂದು ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ‘ಪಶ್ಚಿಮ ಬಂಗಾಳ ಪ್ರಾಣಿ ವಧೆ ನಿಯಂತ್ರಣ ಕಾಯ್ದೆ-1950’ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಘೋಷಿಸಿತು. ನಿಯಮದ ಪ್ರಮುಖ ಅಂಶಗಳು ಹೀಗಿವೆ: 14 ವರ್ಷ ತುಂಬಿದ ಅಥವಾ ಶಾಶ್ವತವಾಗಿ ಕೆಲಸಕ್ಕೆ ಬಾರದ ಪ್ರಾಣಿಗಳನ್ನು ಮಾತ್ರ ಅಧಿಕೃತ ಪ್ರಮಾಣಪತ್ರದ ಆಧಾರದ ಮೇಲೆ ವಧೆ ಮಾಡಬಹುದು ಸರ್ಕಾರ ಅನುಮೋದಿಸಿದ ಕಸಾಯಿಖಾನೆಗಳಲ್ಲಿ ಮಾತ್ರ ವಧೆಗೆ ಅವಕಾಶ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿವಧೆ…
ಕರ್ನಾಟಕ ರಾಜ್ಯ ವಸತಿ ಇಲಾಖೆ ಹಾಗೂ ಕರ್ನಾಟಕ ಗೃಹ ಮಂಡಳಿ ವತಿಯಿಂದ ಬೆಂಗಳೂರಿನ ಆನೆಕಲ್ ತಾಲ್ಲೂಕು ಇಂಡ್ಲವಾಡಿಯಲ್ಲಿ ದೇಶದ 2ನೇ ಅತಿದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರೊಂದಿಗೆ ಪಾಲ್ಗೊಂಡು, ಶಿಲಾನ್ಯಾಸವನ್ನು ನೆರವೇರಿಸಲಾಯಿತು. ಇದೇ ವೇಳೆ, ಮುಖ್ಯಮಂತ್ರಿಗಳ ‘ನಮ್ಮ ಮನೆ’ ಯೋಜನೆಗೆ ಚಾಲನೆ, ‘ಸೂರ್ಯಶೈನ್’ ಮತ್ತು ‘ಸೂರ್ಯ ಡಿವೈನ್’ ವಸತಿ ಸಮುಚ್ಛಯಗಳ ಶಂಕುಸ್ಥಾಪನೆ ಹಾಗೂ ವಸತಿ ಯೋಜನೆಗೆ ಭೂಮಿ ನೀಡಿದ ಭೂ ಮಾಲೀಕರಿಗೆ ಸಾಂಕೇತಿಕವಾಗಿ ನಿವೇಶನ ಹಂಚಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ವಸತಿ ಮತ್ತು ವಕ್ಫ್ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಬಿ.ಝಡ್.ಜಮೀರ್ ಅಹ್ಮದ್ ಖಾನ್, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ಕೆ.ಎಂ.ಶಿವಲಿಂಗೇಗೌಡ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಶಾಸಕರಾದ ಡಿ.ಶಿವಣ್ಣ, ಕೃಷ್ಣಪ್ಪ, ಪ್ರಸಾದ್ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯರಾದ ರಾಮೋಜಿಗೌಡ, ಬೆಂಗಳೂರು ಹಾಲು ಒಕ್ಕೂಟ…
ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ಹಾಗೂ ಕೋಮು ಗಲಭೆಯಲ್ಲಿ ಭಾಗಿಯಾದವರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಅಪ್ಪಟ “ವೋಟ್ ಬ್ಯಾಂಕ್ ಮತ್ತು ಓಲೈಕೆ ರಾಜಕಾರಣ” ಎಂದು ಅವರು ಕಿಡಿಕಾರಿದ್ದಾರೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, “ಈ ಸರ್ಕಾರವನ್ನು ಸರ್ಫ್ ಅಥವಾ ಡೆಟಾಲ್ ಹಾಕಿ ತೊಳೆದರೂ ಇವರ ಬುದ್ಧಿ ಬದಲಾಗುವುದಿಲ್ಲ. ಕೇಂದ್ರ ಸಚಿವರ ಕಚೇರಿ, ಸಾರ್ವಜನಿಕರು ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ, ದರ್ಗಾ ಹೆಸರಿನಲ್ಲಿ ಕೋಮು ಗಲಭೆ ಸೃಷ್ಟಿಸಿದ ಕ್ರಿಮಿನಲ್‌ಗಳ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆದಿರುವುದು ಅಕ್ಷಮ್ಯ ಅಪರಾಧ” ಎಂದು ಗುಡುಗಿದ್ದಾರೆ. ಪಿಎಫ್‌ಐ ಕೇಸ್ ಮತ್ತು ಕುಕ್ಕರ್ ಬ್ಲಾಸ್ಟ್ ಉಲ್ಲೇಖ: ಸರ್ಕಾರದ ಈ ನಿರ್ಧಾರವನ್ನು ಹಿಂದಿನ ಪಿಎಫ್‌ಐ (PFI) ಪ್ರಕರಣಗಳಿಗೆ ಹೋಲಿಸಿದ ಆರ್. ಅಶೋಕ್, “ಹಿಂದೆ ಇದೇ ರೀತಿ 150ಕ್ಕೂ ಹೆಚ್ಚು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರೀ ಕೆ.ವಿ. ಪ್ರಭಾಕರ್ ಅವರೊಂದಿಗೆ ಮಾಧ್ಯಮ ಸಂವಾದ ಏರ್ಪಡಿಸಲಾಗಿತ್ತು. ಇದೇ ವೇಳೆ ಸಂಘದ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ವಿ. ಪ್ರಭಾಕರ್, “ಸ್ಥಳೀಯ ಪತ್ರಿಕೆಗಳು ಮುಖ್ಯಮಂತ್ರಿಗಳ ಆದ್ಯತೆಯಾಗಿವೆ. ನಿಯಮಿತವಾಗಿ ಶ್ರಮಪಟ್ಟು ಪತ್ರಿಕೆ ಮುದ್ರಿಸುತ್ತಿರುವವರಿಗೆ ಸರ್ಕಾರದ ಹೊಸ ಜಾಹೀರಾತು ನೀತಿಯಿಂದ ನೆರವಾಗಲಿದೆ,” ಎಂದು ಭರವಸೆ ನೀಡಿದರು. ತಮ್ಮ ಜವಾಬ್ದಾರಿಯ ಬಗ್ಗೆ ಮಾತನಾಡಿದ ಅವರು, “ಮಾಧ್ಯಮ ಸಲಹೆಗಾರರ ಹೊಣೆಗಾರಿಕೆ ಎನ್ನುವುದು ಹೂವಿನ ಹಾದಿಯಲ್ಲ, ಅದೊಂದು ಮುಳ್ಳಿನ ಹಾಸಿಗೆ,” ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನುಮ ಹಾಗೂ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು: ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬಂದಿಲ್ಲ ಎಂಬ ಆತಂಕದಲ್ಲಿದ್ದ ರಾಜ್ಯದ ಮಹಿಳೆಯರಿಗೆ ಈಗ ನಿರಾಳ ಸುದ್ದಿ ಬಂದಿದೆ. ಶಾಸಕ ಬಸವರಾಜ ರಾಯರೆಡ್ಡಿ ಅವರು ವಿಳಂಬಕ್ಕೆ ನಿಖರ ಕಾರಣ ಬಹಿರಂಗಪಡಿಸಿದ್ದು, ಜೂನ್ 1ರಂದು ಮೂರು ತಿಂಗಳ ಹಣ ಒಟ್ಟಿಗೆ ಜಮೆಯಾಗಲಿದೆ ಎಂದು ಖಚಿತಪಡಿಸಿದ್ದಾರೆ. ಗೃಹಲಕ್ಷ್ಮಿ ಹಣ ಏಕೆ ತಡವಾಯಿತು? ಹೊಸ ಆರ್ಥಿಕ ವರ್ಷ ಏಪ್ರಿಲ್ 1ರಿಂದ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರಿ ಲೆಕ್ಕಪತ್ರಗಳ ಹೊಂದಾಣಿಕೆ (Book Adjustment) ಕಡ್ಡಾಯವಾಗಿ ನಡೆಯಬೇಕಾಗುತ್ತದೆ. ಮೊದಲ ತ್ರೈಮಾಸಿಕದಲ್ಲಿ ಈ ತಾಂತ್ರಿಕ ಕಾರಣಗಳಿಂದಾಗಿ DBT (Direct Benefit Transfer) ವಿತರಣೆ ವಿಳಂಬವಾಗಿದೆ ಎಂದು ರಾಯರೆಡ್ಡಿ ವಿವರಿಸಿದ್ದಾರೆ. “ಇದು ರಾಜ್ಯದ ಆರ್ಥಿಕ ಸಮಸ್ಯೆ ಅಲ್ಲ — ಇದು ಹಣಕಾಸು ವರ್ಷ ಬದಲಾವಣೆಯ ಸ್ವಾಭಾವಿಕ ತಾಂತ್ರಿಕ ಪ್ರಕ್ರಿಯೆ” — ಬಸವರಾಜ ರಾಯರೆಡ್ಡಿ ಜೂನ್ 1ರಂದು ಎಷ್ಟು ಹಣ ಬರಲಿದೆ? ರಾಜ್ಯದಲ್ಲಿ ಸುಮಾರು 1 ಕೋಟಿ 25 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಿದ್ದಾರೆ. ಪ್ರತಿ ತಿಂಗಳು…
ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ಸುತ್ತ ಮತ್ತೊಮ್ಮೆ ರಾಜಕೀಯ ಬಿಸಿ ಏರಿದೆ. ಈ ಯೋಜನೆಗೆ ರೈತರ ವಿರೋಧವಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ ಮರುಕ್ಷಣದಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಕ್ತ ಚರ್ಚೆಯ ಸವಾಲೆಸೆದಿದ್ದಾರೆ. “ದಿನಾಂಕ, ಸಮಯ, ಸ್ಥಳ ಅವರೇ ಹೇಳಲಿ. ಮೂರು ದಿನ ಮುಂಚೆ ತಿಳಿಸಿದರೆ ಸಾಕು, ನಾನು ಅಲ್ಲಿಗೆ ಬರುತ್ತೇನೆ” ಎಂದು ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿ ತಮ್ಮ ಜೊತೆ ದೊಡ್ಡ ತಂಡ ತಂದರೂ ತಾವು ಒಬ್ಬರೇ ಬರುತ್ತೇನೆ, ಸ್ಥಳೀಯ ಶಾಸಕನಾಗಿ ರೈತರ ಪರವಾಗಿ ನೇರವಾಗಿ ಉತ್ತರ ಕೊಡುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ. ಚರ್ಚೆ ಗೌರವಯುತವಾಗಿ ನಡೆಯಲಿದೆ, ಯಾವ ಅಸಭ್ಯ ಭಾಷೆಯೂ ಬಳಕೆಯಾಗದು ಎಂದೂ ಅವರು ಭರವಸೆ ನೀಡಿದ್ದಾರೆ. ಸಿಮೆಂಟ್-ಸ್ಟೀಲ್ ಬೆಲೆ ಪ್ರಶ್ನೆ: ಕೇಂದ್ರ ಸರ್ಕಾರದ ಮೇಲೆಯೂ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಸ್ಟೀಲ್ ಮತ್ತು ಸಿಮೆಂಟ್ ಬೆಲೆ ಟನ್‌ಗೆ ಸಾವಿರಾರು ರೂಪಾಯಿ ಹೆಚ್ಚಾಗಿದ್ದರ ಬಗ್ಗೆ ಮೊದಲು ಕುಮಾರಸ್ವಾಮಿಯವರನ್ನೇ ಕೇಳಬೇಕು ಎಂದು ರೈತರು ಸಲಹೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಹೈಕಮಾಂಡ್ ಕರೆದರೆ…
ಧರ್ಮಸ್ಥಳದ ವೀರೇಂದ್ರ ಹೆಗಡೆ & ಅವರ ಕುಟುಂಬಸ್ಥರ ವಿರುದ್ಧ ಮಾನಹಾನಿ ವಿಡಿಯೋ ಪ್ರಸಾರ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಯೂಟ್ಯೂಬರ್ ಸಮೀರ್ ಎಂ.ಡಿ ಗೆ ಕೋರ್ಟ್ ಬಿಗ್ ಶಾಕ್ ನೀಡಿದೆ. ಮಿಲಿಯನ್ ವೀವ್ಸ್ ಪಡೆದಿರುವ ಮಾನ ಹಾನಿ ಆಧಾರದ ವಿಡಿಯೋ ಡಿಲೀಟ್ ಮಾಡಲು ಕೋರ್ಟ್ ಆದೇಶ ನೀಡಿದೆ. ಸಮೀರ್, ಅಂಚನ್ & ಶ್ರೀನಾಥ ಶೆಟ್ಟಿ ಸೇರಿದಂತೆ ಗಿರೀಶ್ ಮಟ್ಟಣ್ಣನವರಿಗೆ ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ 3 ದಿನದಲ್ಲಿ ವಿಡಿಯೋ ಡಿಲೀಟ್ ಮಾಡಲು ಆದೇಶ ಹೊರಡಿಸಿದೆ.
Subscribe to Updates
Get the latest creative news from FooBar about art, design and business.