Updated By: Priyalachhi 

ದಾವಣಗೆರೆ: ಸತೀಶ್ ರೆಡ್ಡಿ ಗನ್​ಮ್ಯಾನ್​ಗಳು ಫೈರಿಂಗ್ ಮಾಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿರುವುದು, ಈ ಪ್ರಕರಣದಲ್ಲಿ ಪೋಲಿಸರ ವೈಫಲ್ಯ ಹೆಚ್ಚಿದೆ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಬಿಝಡ್ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಮಾತನಾಡಿದ ಅವರು ಮಧ್ಯಾಹ್ನ 2.30ಕ್ಕೆ ಗಲಾಟೆ ಶುರುವಾಗಿದೆ, ತಡೆಯಬಹುದಿತ್ತು ಎಂದರು.

ಶಾಸಕ ನಾರಾ ಭರತ್ ರೆಡ್ಡಿ ಬಂಧನಕ್ಕೆ ಬಿಜೆಪಿ ಒತ್ತಾಯ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಭರತ್ ರೆಡ್ಡಿ ಸ್ಥಳಕ್ಕೆ ಬಂದಿರಲಿಲ್ಲ ಅಂದ್ರೆ ಇನ್ನೂ ಹೆಚ್ಚು ಸಮಸ್ಯೆ ಆಗ್ತಿತ್ತು. ಐಜಿಯವರು ನನಗೆ ಹಾಗೂ ಡಿಸಿಎಂಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭರತ್ ರೆಡ್ಡಿ 7 ಗಂಟೆ ಮೇಲೆ ಘಟನಾ ಸ್ಥಳಕ್ಕೆ ಬಂದಿರೋದು. ಐಜಿ ವರ್ಗಾವಣೆ ಬಗ್ಗೆ ಸಿಎಂ ಅವರನ್ನೇ ಕೇಳಬೇಕು ಎಂದರು.‌

ಇನ್ನು ಸತೀಶ್ ರೆಡ್ಡಿ ಸಂಜೆ 4.30ಕ್ಕೆ ಸ್ಥಳಕ್ಕೆ ಹೋಗಿರೋದು. ಎಸ್‌ಪಿ, ಐಜಿ ಅಲ್ಲಿಯವರೆಗೂ ಘಟನಾ ಸ್ಥಳಕ್ಕೆ ಹೋಗಿಲ್ಲ. ಸತೀಶ್ ರೆಡ್ಡಿ ಗನ್​ಮ್ಯಾನ್‌ ಗುಂಡಿನಿಂದಲೇ ರಾಜಶೇಖರ ಸತ್ತಿರೋದು. ಸತೀಶ್ ರೆಡ್ಡಿ ಅವರನ್ನು ಹೀನಾಯವಾಗಿ ಹೊಡೆದಿದ್ದಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದ ಜಮೀರ್ ಅಹ್ಮದ್​ ಖಾನ್​ ತಿಳಿಸಿದರು. ‌

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version