Updated By: Priyalachhi

ಮಂಡ್ಯ: “ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಆದರೆ ಯಾವ ಶಕ್ತಿಯಿಂದಲೂ ಈ ಸಮಾಜವನ್ನು ಒಡೆಯಲು ಸಾಧ್ಯವಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಮಂಡ್ಯದ ಮಳವಳ್ಳಿಯಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದ್ದು, ನಿನ್ನೆ(ಶನಿವಾರ) 5ನೇ ದಿನದ ಮಹೋತ್ಸವಕ್ಕೆ ಚಾಲನೆ ಸಿಕ್ಕಿತು. ಜ್ಯೋತಿ ಬೆಳಗುವ ಮೂಲಕ ಮಹೋತ್ಸವವನ್ನು ಶ್ರೀಗಳು ಉದ್ಘಾಟಿಸಿದರು.

ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, “ರಾತ್ರಿಯಾದರೂ ಭಕ್ತರು ಇಷ್ಟೊಂದು ಸಂಖ್ಯೆಯಲ್ಲಿ ಕುಳಿತಿರುವುದು ಸಂತಸ ಮೂಡಿಸಿದೆ. ರಾಜ್ಯದಲ್ಲಿ ಕುರ್ಚಿ ಕಾಳಗ ನಡೆಯುತ್ತಿದೆ. ಆದರೆ ಈ ಕಾರ್ಯಕ್ರಮದಲ್ಲಿ ಒಂದು ಕುರ್ಚಿ ಕೂಡ ಖಾಲಿ ಇಲ್ಲ. ಜಗದ್ಗುರುಗಳು ಅನ್ನದಾಸೋಹ, ಅಕ್ಷರದಾಸೋಹ ಮೂಲಕ ಸಮಾಜ ಕಟ್ಟಿದರು. ಆದಿಗುರುಗಳ ಪರಂಪರೆಯನ್ನು ಸುತ್ತೂರು ಶ್ರೀಗಳು ಮುಂದುವರೆಸುತ್ತಿದ್ದಾರೆ. ಜನಸಾಮಾನ್ಯರ ಹೃದಯದಲ್ಲಿ ಸುತ್ತೂರು ಮಠ ಆಧ್ಯಾತ್ಮದ ದೀಪ ಹಚ್ಚಿದೆ. ನೊಂದವರ ಪಾಲಿಗೆ ಅನ್ನ, ಅಕ್ಷರ ನೀಡುತ್ತಿದೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಎಲ್ಲ ಮಠಗಳಿಗೆ ಅನುದಾನ ನೀಡಿದರು. ಅನುಭವ ಮಂಟಪ ನಿರ್ಮಾಣಕ್ಕೆ ಯಡಿಯೂರಪ್ಪನವರು ಅನುದಾನ ನೀಡಿದ್ದಾರೆ. ಬಸವಣ್ಣನವರ ಸಮ ಸಮಾಜದ ಕನಸು ನನಸಾಗಬೇಕು” ಎಂದರು.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version