Updated By: Priyalachhi

ಬೆಳಗಾವಿ: ರಾಜ್ಯದಲ್ಲಿ 2014-15ರಿಂದ 2022-23ರವರೆಗಿನ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (ಐಪಿಡಿಎಸ್) ಅನುಷ್ಠಾನ ಅವಧಿಯಲ್ಲಿ ಕೇಂದ್ರ ಇಂಧನ ಇಲಾಖೆ ಅನುಮೋದಿಸಿದ್ದ ಮೊತ್ತಕ್ಕಿಂತ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) 110.89 ಕೋಟಿ ರೂ. ಅಧಿಕ ವೆಚ್ಚ ಮಾಡಿರುವುದು ಸಿಎಜಿ ವರದಿಯಲ್ಲಿ ಬಹಿರಂಗಗೊಂಡಿದೆ.

ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳ ಪರವಾಗಿ ಸಚಿವ ಕೃಷ್ಣಬೈರೇಗೌಡ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (ಐಪಿಡಿಎಸ್‌) ಅನುಷ್ಠಾನದ ಮೇಲಿನ ಭಾರತದ ಲೆಕ್ಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರ ವರದಿಯನ್ನು ಮಂಡಿಸಿದರು. ಪ್ರಮುಖವಾಗಿ ಎಸ್ಕಾಂಗಳು ಯೋಜನೆ ಅನುಷ್ಠಾನ ಮಾಡುವಲ್ಲಿ ಅನುಮೋದಿತ ವೆಚ್ಚಕ್ಕಿಂತ 110.89 ಕೋಟಿ ರೂ. ಮೊತ್ತದಷ್ಟು ಅಧಿಕ ವೆಚ್ಚವನ್ನು ಭರಿಸಿದ್ದವು.‌ ಈ ಪೈಕಿ 38.52 ಕೋಟಿ ರೂ. ಮೊತ್ತವು ಮಾರ್ಗಸೂಚಿ ದರ ಮೀರಿ ಅಧಿಕ ದರಗಳಲ್ಲಿ ಖರೀದಿಸಿರುವುದರಿಂದ ಆಗಿದೆ.‌

ಈ ಯೋಜನೆಯಡಿ ಒಟ್ಟಾರೆ ವೆಚ್ಚದ ಶೇ.60ರಷ್ಟು ಕೇಂದ್ರದ ಸರ್ಕಾರದ ಬಂಡವಾಳ ಅನುದಾನ, ಶೇ.30ರಷ್ಟು ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲ ಹಾಗೂ ಶೇ.10ರಷ್ಟು ಸ್ವಂತ ಹಣಕಾಸಿನಿಂದ ಭರಿಸುವ ಅವಕಾಶ ಕೊಟ್ಟಿದೆ. ಅಲ್ಲದೆ, ಕಾಮಗಾರಿಯ ಪ್ರಗತಿ ಆಧರಿಸಿ ವಿಸ್ತೃತ ಯೋಜನಾ ವರದಿಯ ಶೇ.15ರಷ್ಟು ಹೆಚ್ಚುವರಿ ಅನುದಾನ ಪಡೆಯಲೂ ಅವಕಾಶವಿದೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version