ರಾಜ್ಯವಾಹನ

ಸಬ್‌ ಕಾ ಪ್ರಯಾಸ್'(ಎಲ್ಲರ ಪ್ರಯತ್ನ)ದ ಫಲವಾಗಿ ಭಾರತ ಇಂದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಹೆಜ್ಜೆ ಇಟ್ಟಿದೆ: ಪ್ರಧಾನಿ ಮೋದಿ ಅಭಿಮತ

As a result of 'Sab Ka Prayas' (Efforts of All), India has taken steps towards becoming a developed nation: PM Modi Abhima

ಚಿಕ್ಕಬಳ್ಳಾಪುರ: ‘ಸಬ್‌ ಕಾ ಪ್ರಯಾಸ್'(ಎಲ್ಲರ ಪ್ರಯತ್ನ)ದ ಫಲವಾಗಿ ಭಾರತ ಇಂದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಹೆಜ್ಜೆ ಇಟ್ಟಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಕರ್ನಾಟಕ ನೀಡುತ್ತಿರುವ ಕೊಡುಗೆ ಅನನ್ಯವಾದುದು ಎಂದು ನುಡಿದರು.
ಗುಣಮಟ್ಟದ ಮತ್ತು ಕೈಗೆಟುಕುವ ವೈದ್ಯಕೀಯ ಸೌಲಭ್ಯಗಳ ಮೂಲಕ, ಬಡ ಮತ್ತು ಮಧ್ಯಮ ವರ್ಗದವರನ್ನು ಸಬಲೀಕರಣಗೊಳಿಸಲು ನಾವು ಕೆಲಸ ಮಾಡಿದ್ದೇವೆ. ನಮ್ಮ ದೇಶವು ಸುಮಾರು 10,000 ಔಷಧಿ ಕೇಂದ್ರಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ 1,000ಕ್ಕೂ ಹೆಚ್ಚು ಔಷಧಿ ಕೇಂದ್ರಗಳು ಕರ್ನಾಟಕದಲ್ಲೇ ಇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಬಡವರ ಪರವಾದ ನಮ್ಮ ಸರ್ಕಾರ, ಶಿಕ್ಷಣದ ಮೂಲಕ ಜನರನ್ನು ಸಬಲೀಕರಣಗೊಳಿಸಲು ಶ್ರಮಿಸುತ್ತಿದೆ. ವೈದ್ಯಕೀಯ ಶಿಕ್ಷಣವನ್ನು ಈಗ ಕನ್ನಡ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.

ದಶಕಗಳಿಂದ ಬಡವರನ್ನು ಕೇವಲ ‘ವೋಟ್ ಬ್ಯಾಂಕ್’ ಆಗಿ ಬಳಸಲಾಗುತ್ತಿತ್ತು, ಆದರೆ ಬಿಜೆಪಿ ಸರ್ಕಾರವು ಬಡವರ ಸೇವೆಯನ್ನು ತನ್ನ ಅತ್ಯುನ್ನತ ಮತ್ತು ಪ್ರಾಥಮಿಕ ಗುರಿಯನ್ನಾಗಿ ಮಾಡುವ ಮೂಲಕ, ಅವರನ್ನು ನಿಜವಾಗಿಯೂ ಸಬಲಗೊಳಿಸಿದೆ. ಇದು ಬಡವರ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಪ್ರಧಾನಿ ಮೋದಿ ನುಡಿದರು.

ಸಾಮೂಹಿಕ ಪ್ರಯತ್ನಗಳು ಭಾರತದ ಅಭಿವೃದ್ಧಿಯ ಕಡೆಗೆ ಅದ್ಭುತ ಫಲಿತಾಂಶಗಳನ್ನು ತರಬಹುದು. ಬಿಜೆಪಿಯು ‘ಜನ ಭಾಗಿದಾರಿ’ಯ ಮೇಲೆ ಕೇಂದ್ರೀಕರಿಸಿದೆ. ಭಾರತದ ಅಭಿವೃದ್ಧಿ ಪಯಣದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತವೆ.

ಭಾರತವು ತನ್ನ ‘ಆಜಾದಿ ಕಾ ಅಮೃತ್ ಮಹೋತ್ಸವ’ದಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗುವ ಹಾದಿಯಲ್ಲಿ ನಡೆಯಲು ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರದ ನಾಡು ಜನರಿಗೆ ಶಿಕ್ಷಣ ಮತ್ತು ಆರೋಗ್ಯವನ್ನು ನೀಡುವ ಮೂಲಕ ಮಾನವೀಯತೆಯ ಸೇವೆಯ ಧ್ಯೇಯವನ್ನು ಪೋಷಿಸಿದೆ. ಈ ಸಾಧನೆಗಳು ಅದ್ಭುತವಾಗಿವೆ. ಇಂದು ಇಲ್ಲಿ ಉದ್ಘಾಟನೆಗೊಳ್ಳುತ್ತಿರುವ ವೈದ್ಯಕೀಯ ಕಾಲೇಜು ಈ ಮಹಾನ್ ಧ್ಯೇಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಅಭಿವೃದ್ಧಿಯೇ ನಮ್ಮ ಸರ್ಕಾರದ ಏಕೈಕ ಗುರಿಯಾಗಿದ್ದು, ಈ ಪ್ರಯತ್ನದಲ್ಲಿ ಎಲ್ಲರ ಭಾಗೀಧಾರಿಕೆಯನ್ನು ನಾವು ಬಯಸುತ್ತೇವೆ. ಎಲ್ಲರ ಸಹಕಾರ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಹಾಗೂ ಎಲ್ಲರ ಪ್ರಯತ್ನದ ಮೂಲಕ, ನಾವು ಭಾರತವನ್ನು ಜಾಗತಿಕ ಭೂಪಟದಲ್ಲಿ ಒಂದು ಸರ್ವಶಕ್ತ ರಾಷ್ಟ್ರವನ್ನಾಗಿ ಮಾಡೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಇದಕ್ಕೂ ಮೊದಲು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೂತನವಾಗಿ ಸಿದ್ಧಗೊಂಡಿರುವ ವೈಟ್‌ಫೀಲ್ಡ್‌ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ, ವೈಟ್‌ಫೀಲ್ಡ್ (ಕಾಡುಗೋಡಿ)-ಕೆ.ಆರ್.ಪುರಂ ಮೆಟ್ರೋ ಮಾರ್ಗಕ್ಕೆ ಹಸಿರು ನಿಶಾನೆ ತೋರಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಅವರಿಗೆ ಸಾಥ್‌ ನೀಡಿದರು.

 

ಇದನ್ನೂ ಓದಿ...

Back to top button
>