ಪ್ಯಾನ್ ಇಂಡಿಯಾದಲ್ಲಿ ದೊಡ್ಡ ಹೈಪ್ ಕ್ರಿಯೇಟ್ ಮಾಡಿದ ಆರ್.ಚಂದ್ರು ಅವರ ʼಕಬ್ಜʼ ಚಿತ್ರ ಥಿಯೇಟರ್ ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
R. Chandru's movie 'Kabja' which has created huge hype in pan India is showing successfully in theatres.
ಪ್ಯಾನ್ ಇಂಡಿಯಾದಲ್ಲಿ ದೊಡ್ಡ ಹೈಪ್ ಕ್ರಿಯೇಟ್ ಮಾಡಿದ ಆರ್.ಚಂದ್ರು ಅವರ ʼಕಬ್ಜʼ ಚಿತ್ರ ಥಿಯೇಟರ್ ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಕಂಡಿರುವ ಸಿನಿಮಾ ಇದೀಗ ಒಟಿಟಿಗೆ ಬರಲು ಸಜ್ಜಾಗಿದೆ ಎಂದು ವರದಿಯೊಂದು ಹೊರ ಬಿದ್ದಿದೆ.
ಗ್ಯಾಂಗ್ ಸ್ಟರ್ ಕಥಾಹಂದರವನ್ನು ಒಳಗೊಂಡಿರುವ ʼಕಬ್ಜʼದಲ್ಲಿ ಉಪ್ಪಿ ಲಾಂಗ್ ಹಿಡಿದು ಮಾಸ್ ಅವತಾರ ಎತ್ತಿದ್ದಾರೆ. ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಅವರ ಪಾತ್ರವೂ ಸಿನಿಮಾದಲ್ಲಿ ಗಮನ ಸೆಳೆದಿದೆ.
ಮಾ.17 ರಂದು ಪ್ಯಾನ್ ಇಂಡಿಯಾ ʼಕಬ್ಜʼ ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾಕ್ಕೆ ಉಪ್ಪಿ ಫ್ಯಾನ್ಸ್ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗಲೂ ಸಿನಿಮಾ ಯಶಸ್ವಿಯಾಗಿ ಥಿಯೇಟರ್ ನಲ್ಲಿ ರನ್ನಿಂಗ್ ಆಗುತ್ತಿದೆ. ಈ ನಡುವೆಯೇ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ವೊಂದು ವೈರಲ್ ಆಗಿದೆ.
ಅಮೇಜಾನ್ ಪ್ರೈಮ್ ಸಿನಿಮಾದ ಓಟಿಟಿ ಹಕ್ಕನ್ನು ಭಾರೀ ದೊಡ್ಡ ಮೊತ್ತಕ್ಕೆ ಖರೀದಿಸಿರುವುದು ಗೊತ್ತೇ ಇದೆ. ಇದೀಗ ಏ. 14 ರಂದು ʼಕಬ್ಜʼ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ ಎನ್ನುವ ಪೋಸ್ಟರ್ ವೊಂದು ವೈರಲ್ ಆಗಿದೆ.
ಅಲ್ಪ ವಿರಾಮದ ನಂತರ ‘ಕಬ್ಜಾ 2’
ಇದೇ ವೇಳೆ ಕಬ್ಡಾ 2 ಕುರಿತು ಮಾತನಾಡಿದ ಚಂದ್ರು, ನಾನು ಸ್ವಲ್ಪ ವಿರಾಮ ತೆಗೆದುಕೊಂಡು ಕಬ್ಜಾ 2 ನಲ್ಲಿ ಗಮನಹರಿಸುತ್ತೇನೆ. ಸ್ಕ್ರಿಪ್ಟ್‌ನ ಕೆಲಸ ಪ್ರಾರಂಭವಾಗಿದೆ. ಕಬ್ಜಾ 2 ಮೊದಲ ವರ್ಷನ್ ಗಿಂತ ದೊಡ್ಡದಾಗಿರಲಿದೆ ಮತ್ತು ಉತ್ತಮವಾಗಿರುತ್ತದೆ ಎಂದು ನಾನು ಭರವಸೆ ನೀಡಬಲ್ಲೆ ಎಂದು ಹೇಳಿದರು.