ಸಿನಿಮಾಸಿನಿಮಾ ಸುದ್ದಿ

ಸಿನಿಮಾ ಡೈಲಾಗ್‌ ಮಾತ್ರವಲ್ಲ ಕ್ರಿಕೆಟ್‌ ಕಾಮೆಂಟರಿಗೂ ಸೈ.. ಐಪಿಎಲ್‌ನಲ್ಲಿ ಬಾಲಯ್ಯ ವೀಕ್ಷಕ ವಿವರಣೆಕಾರ!

Not only movie dialogue but also cricket commentary.. Balayya is an observer commentator in IPL!

ನನಗೆ ಕ್ರಿಕೆಟ್‌ ಎಂದರೆ ಬಹಳ ಇಷ್ಟ. ಶಾಲೆ-ಕಾಲೇಜುಗಳಲ್ಲಿ ಕೂಡಾ ಈ ಆಟ ಆಡುತ್ತಿದ್ದೆ. ಈಗ ನಾನು ಕಾಮೆಂಟರಿ ಮಾಡುತ್ತಿರುವುದು ಕ್ರಿಕೆಟ್‌ ಆಡಿದಷ್ಟೇ ಸಂತೋಷವಾಗುತ್ತಿದೆ. ಎಲ್ಲರೂ ಐಪಿಎಲ್‌ ಮ್ಯಾಚ್‌ಗಳನ್ನು ನೋಡಿ” ಎಂದು ಬಾಲಯ್ಯ ಹೇಳಿದ್ದಾರೆ.
ಖ್ಯಾತ ತೆಲುಗು ನಟ ನಂದಮೂರಿ ಬಾಲಕೃಷ್ಣ ನಟನಾಗಿ ಮಾತ್ರವಲ್ಲದೆ ‘ಅನ್‌ಸ್ಟಾಪಬಲ್‌’ ಕಾರ್ಯಕ್ರಮದ ಮೂಲಕ ನಿರೂಪಕರಾಗಿ ಕೂಡಾ ಹೆಸರು ಗಳಿಸಿದ್ದಾರೆ. ಇದೀಗ ಅವರು ಕ್ರಿಕೆಟ್‌ ಕಾಮೆಂಟರಿ ಮಾಡಲು ಮುಂದಾಗಿದ್ಧಾರೆ. ಮುಂಬರುವ ಐಪಿಎಲ್‌ 16ನೇ ಸೀಸನ್‌ನಲ್ಲಿ ಅಭಿಮಾನಿಗಳು ಬಾಲಯ್ಯ ಕಾಮೆಂಟರಿ ಕೇಳಬಹುದು.

ಮಾರ್ಚ್‌ 31ರಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾಗುತ್ತಿದೆ. ಸಿನಿಮಾ, ಕ್ರೀಡಾ ಸೆಲಬ್ರಿಟಿಗಳು ಪಂದ್ಯದ ಉದ್ಘಾಟನೆಗೆ ಆಗಮಿಸಲಿದ್ದಾರೆ. ಕ್ರಿಕೆಟ್‌ ಪ್ರೇಮಿಗಳು ಕೂಡಾ ಐಪಿಎಲ್‌ ನೋಡಲು ಕಾಯುತ್ತಿದ್ದಾರೆ. ಐಪಿಎಲ್‌ ಮೊದಲ ಪಂದ್ಯ ಗುಜರಾತ್‌ ಟೈಟಾನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಅಹಮದಾಬಾದ್‌ನಲ್ಲಿ ನಡೆಯುತ್ತಿದೆ. ಈ ಮ್ಯಾಚ್‌ನಲ್ಲಿ ಬಾಲಕೃಷ್ಣ ಕಾಮೆಂಟರಿ ಮಾಡಲಿದ್ದಾರೆ. ಬಾಲಕೃಷ್ಣ ಅಭಿಮಾನಿಗಳು ಸೋಷಿಯಲ್‌ ಮೀಡಿಯಾ ಮೂಲಕ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ ತೆಲುಗು, ಖ್ಯಾತ ಸಿನಿಮಾ ವಿಮರ್ಶಕ ರಮೇಶ್‌ ಬಾಲಾ ಕೂಡಾ ತಮ್ಮ ಟ್ವಿಟ್ಟರ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ”ಲೆಜೆಂಡರಿ ಆಕ್ಟರ್‌ ನಂದಮೂರಿ ಬಾಲಕೃಷ್ಣ ಸ್ಟಾರ್‌ ಸ್ಪೋರ್ಟ್ಸ್‌ ತೆಲುಗು ಜೊತೆ ಕೈ ಜೋಡಿಸಿದ್ದು ಐಪಿಎಲ್‌ ಮ್ಯಾಚ್‌ಗಳಲ್ಲಿ ಅವರ ಕಾಮೆಂಟರಿ ಕೇಳಬಹುದು. ಮಾರ್ಚ್‌ 31 ರಿಂದ ಮೇ 28ವರೆಗೆ ಸ್ಟಾರ್‌ ಸ್ಪೋರ್ಟ್ಸ್‌ ತೆಲುಗು ವಾಹಿನಿಯಲ್ಲಿ ಪಂದ್ಯಗಳನ್ನು ನೋಡಿ” ಎಂದು ಬರೆಯಲಾಗಿದೆ. ಇಷ್ಟು ದಿನ ಬಾಲಯ್ಯ ಸಿನಿಮಾ ಡೈಲಾಗ್‌ಗಳನ್ನು ಕೇಳುತ್ತಿದ್ದ ಅಭಿಮಾನಿಗಳು ಈಗ ಅವರ ಬಾಯಿಂದ ಕ್ರಿಕೆಟ್‌ ಕಾಮೆಂಟರಿ ಕೇಳಲು ಕಾಯುತ್ತಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಕೈ ಜೋಡಿಸಿದ ಬಾಲಯ್ಯ
ಸ್ಟಾರ್ ಸ್ಟೋರ್ಟ್ಸ್ ತೆಲುಗು ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದನ್ನು ಚಿತ್ರೀಕರಣ ಮಾಡಿದೆ. ಬಾಲಯ್ಯ 108ನೇ ಸಿನಿಮಾದಲ್ಲಿ ಬ್ಯುಸಿ ಇದ್ದು, ಬಿಸಿಸಿಐ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್, ಹಾಗೂ ವೇಣುಗೋಪಾಲ ರಾವ್ ಶೂಟಿಂಗ್‌ ಸ್ಥಳಕ್ಕೆ ತೆರಳಿ ಬಾಲಯ್ಯ ಅವರಿಗೆ ಬ್ಯಾಟ್‌ ನೀಡಿದ್ದಾರೆ. ”ನನಗೆ ಕ್ರಿಕೆಟ್‌ ಎಂದರೆ ಬಹಳ ಇಷ್ಟ. ಶಾಲೆ-ಕಾಲೇಜುಗಳಲ್ಲಿ ಕೂಡಾ ಈ ಆಟ ಆಡುತ್ತಿದ್ದೆ. ಈಗ ನಾನು ಕಾಮೆಂಟರಿ ಮಾಡುತ್ತಿರುವುದು ಕ್ರಿಕೆಟ್‌ ಆಡಿದಷ್ಟೇ ಸಂತೋಷವಾಗುತ್ತಿದೆ. ಎಲ್ಲರೂ ಐಪಿಎಲ್‌ ಮ್ಯಾಚ್‌ಗಳನ್ನು ನೋಡಿ” ಎಂದು ಬಾಲಯ್ಯ ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗುತ್ತಿದ್ದು ಬಾಲಯ್ಯ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

ಬಾಲಕೃಷ್ಣ ಸಿನಿಮಾ ವಿಚಾರಕ್ಕೆ ಬರುವುದಾದರೆ ಇದೇ ವರ್ಷ ಜನವರಿಯಲ್ಲಿ ತೆರೆ ಕಂಡ ‘ವೀರಸಿಂಹರೆಡ್ಡಿ’ ಸೂಪರ್‌ ಹಿಟ್‌ ಆಗಿತ್ತು. ಇದೀಗ ಅವರ ಮುಂದಿನ ಸಿನಿಮಾಗೆ NBK 108 ಟೈಟಲ್‌ನೊಂದಿಗೆ ಚಿತ್ರೀಕರಣ ಆರಂಭಿಸಲಾಗಿದೆ. ಈ ಚಿತ್ರದಲ್ಲಿ ಬಾಲಯ್ಯ ಪುತ್ರಿಯಾಗಿ ಶ್ರೀಲೀಲಾ ನಟಿಸುತ್ತಿದ್ದು, ಖ್ಯಾತ ಡಾನ್ಸರ್‌ ನೋರಾ ಫತೇಹಿ ಕೂಡಾ ಇರಲಿದ್ದಾರೆ ಎನ್ನಲಾಗಿದೆ.

ಕನ್ನಡದಲ್ಲಿ ಕಾಮೆಂಟರಿ ಮಾಡಲಿದ್ದಾರೆ ರೂಪೇಶ್‌ ಶೆಟ್ಟಿ
ಇದೇ ಮೊದಲ ಬಾರಿಗೆ 12 ಸ್ಥಳಗಳಲ್ಲಿ ಐಪಿಎಲ್‌ ಪಂದ್ಯಗಳು ನಡೆಯುತ್ತಿದ್ದು, ಹೆಚ್ಚು ವೀಕ್ಷಕ ವಿವರಣೆಕಾರರ ಅಗತ್ಯವಿದೆ. ಕನ್ನಡ ಕಾಮೆಂಟರಿ ಪ್ಯಾನೆಲ್‌ನಲ್ಲಿ ಭಾರತದ ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್, ಶ್ರೀನಿವಾಸ ಮೂರ್ತಿ (ಜಾನಿ), ಕರ್ನಾಟಕದ ಮಾಜಿ ಕೋಚ್ ಜಿ.ಕೆ ಅನಿಲ್ ಕುಮಾರ್, ಮಾಜಿ ಆರ್‌ಸಿಬಿ ಆಟಗಾರರಾದ ಬಾಲಚಂದ್ರ ಅಖಿಲ್, ಭರತ್ ಚಿಪ್ಲಿ ಮತ್ತು ಪವನ್ ದೇಶಪಾಂಡೆ ಅವರೊಂದಿಗೆ ಕರ್ನಾಟಕದ ದಂತಕಥೆ ಗುಂಡಪ್ಪ ವಿಶ್ವನಾಥ್ ಕಾಮೆಂಟರಿ ಮಾಡಲಿದ್ದಾರೆ. ಈ ಬಾರಿಯ ವಿಶೇಷ ಆಕರ್ಷಣೆ ಬಿಗ್ ಬಾಸ್ ವಿನ್ನರ್‌ ರೂಪೇಶ್ ಶೆಟ್ಟಿ. ಇದೇ ಮೊದಲ ಬಾರಿಗೆ ರೂಪೇಶ್‌ ಕ್ರೀಡಾ ಕಾರ್ಯಕ್ರಮಕ್ಕೆ ಪದಾರ್ಪಣೆ ಮಾಡುತ್ತಿದ್ದು ಅವರ ಕಾಮೆಂಟರಿ ಕೇಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ...

Back to top button
>