ಆರೋಗ್ಯ

ಮೆದುಳಿನ ಆರೋಗ್ಯ ಸುಧಾರಣೆಯ ಬಗ್ಗೆ ತಜ್ಞರ ಸಲಹೆ ಇಲ್ಲಿದೆ

Here's expert advice on improving brain health

ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯ ರಕ್ಷಣೆಗೂ ಜೀವಸತ್ವಗಳು ಹಾಗೂ ಖನಿಜಾಂಶಗಳು ಅಗತ್ಯ. ಇವು ಉತ್ತಮ ನಿದ್ದೆಗೆ ಸಹಕರಿಸುತ್ತವೆ. ಉತ್ತಮ ನಿದ್ದೆಯಿಂದ ಹಲವು ರೀತಿಯ ಮಾನಸಿಕ ಸಮಸ್ಯೆಗಳಿಂದ ದೂರ ಇರಬಹುದು. ಇದು ಆತಂಕ, ತಳಮಳ, ಮನಃಸ್ಥಿತಿಯ ಗೊಂದಲಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

(1 / 6)
ನಾವು ಸೇವಿಸುವ ಆಹಾರ ಮತ್ತು ನಮ್ಮ ಜೀವನಶೈಲಿಯು ಮೆದುಳಿನ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ʼಆಹಾರವು ದೇಹ ಮತ್ತು ಮೆದುಳನ್ನು ಪೋಷಿಸುತ್ತದೆ. ಅಸಮರ್ಪಕ ಆಹಾರ ಸೇವನೆಯಿಂದ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ. ಇದ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ದೇಹದಲ್ಲಿ ವಿಟಮಿನ್ ಮತ್ತು ಖನಿಜಗಳ ಕೊರತೆಯಿಂದ ನೆನಪಿನ ಶಕ್ತಿಯ ಕುಂಠಿತ ಮತ್ತು ಏಕಾಗ್ರತೆಯ ಕೊರತೆ, ಚಂಚಲ ಮನಸ್ಸು, ಸ್ವಾಭಿಮಾನದ ಕೊರತೆಯ ಭಾವನೆ ಇಂತಹ ಸಮಸ್ಯೆಗಳು ಎದುರಾಗಬಹುದುʼ ಎನ್ನುತ್ತಾರೆ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ.

(2 / 6)
ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಟಮಿನ್‌ ಹಾಗೂ ಮಿನರಲ್ಸ್‌ಗಳು ಸಹಾಯ ಮಾಡುತ್ತವೆ. ಉತ್ತಮ ನಿದ್ದೆಗೂ ಇವು ಸಹಕಾರಿ. ಸಮರ್ಪಕ ನಿದ್ದೆ ಮನುಷ್ಯನಿಗೆ ಬಹಳ ಅವಶ್ಯ, ಆ ಕಾರಣದಿಂದ ವಿಟಮಿನ್‌ ಹಾಗೂ ಮಿನರಲ್ಸ್‌ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು.

(3 / 6)
ಸೇಂಟ್ ಜಾನ್ಸ್ ವೋರ್ಟ್ ಅಥವಾ ಇದನ್ನು ಚಿನ್ನದಾವರೆ ಎಂದೂ ಕರೆಯುತ್ತಾರೆ. ಇದು ಚಿಕ್ಕ ತಾವರೆ ಹೂವಿನಂತಿದ್ದು, ಹಳದಿ ಬಣ್ಣದಲ್ಲಿರುತ್ತದೆ. ಇದು ಖಿನ್ನತೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಏಕೆಂದರೆ ಈ ಮೂಲಿಕೆ ಹೈಪರ್ಸಿನ್ ಅನ್ನು ಹೊಂದಿರುತ್ತದೆ. ಇದು ಖಿನ್ನತೆ-ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ.

(4 / 6)
ಕಾವಾ ಒತ್ತಡ ಮತ್ತು ಆತಂಕದ ಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ನರಗಳನ್ನು ಶಾಂತಗೊಳಿಸಲು ಮತ್ತು ಉತ್ತಮ ನಿದ್ರೆಗೆ ಇದು ಸಹಕಾರಿ.

 

(5 / 6)
ಗಿಂಕ್ಗೊ ಬಿಲೋಬ, ಇದನ್ನು ಮೈಡೆನ್ಹೇರ್ ಮರ ಎಂದೂ ಕರೆಯುತ್ತಾರೆ. ಇದು ಸಿರೊಟೋನಿನ್ ಹಾರ್ಮೋನ್‌ ವರ್ಧಿಸುವ ಗುಣವನ್ನು ಹೊಂದಿದೆ. ಇದು ಮನುಷ್ಯನ ಮಾನಸಿಕ ಚೈತನ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಖಿನ್ನತೆಯ ಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

(6 / 6)
ಈ ಮೆದುಳಿನ ಆರೋಗ್ಯ-ಉತ್ತೇಜಿಸುವ ಗಿಡಮೂಲಿಕೆಗಳನ್ನು ಇತರ ಗಿಡಮೂಲಿಕೆಗಳೊಂದಿಗೆ ಸಂಯೋಜಿಸಬೇಕು, ಪೌಷ್ಟಿಕ ಆಹಾರ ಸೇವನೆ ಮತ್ತು ಆಪ್ತಸಮಾಲೋಚನೆಗಳ ಮೂಲಕ ಮೆದುಳಿನ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ಇದನ್ನೂ ಓದಿ...

Back to top button
>