Uncategorizedರಾಜ್ಯವಾಹನ

ದೆಹಲಿ-ಬೆಂಗಳೂರು ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಆ ಪ್ರಯಾಣಿಕನ ವಿರುದ್ಧ ದೂರು ದಾಖಲಿಸಲಾಗಿದೆ.

The incident took place on a Delhi-Bangalore Indigo flight and a complaint has been registered against the passenger

ಬೆಂಗಳೂರು: ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 40 ವರ್ಷದ ಪಾನಮತ್ತ ಪ್ರಯಾಣಿಕನೊಬ್ಬರು ವಿಮಾನದ ತುರ್ತು ನಿರ್ಗಮನದ ಬಾಗಿಲಿನ ಫ್ಲಾಪ್ ತೆರೆಯಲು ಯತ್ನಿಸಿದ ಘಟನೆ ವರದಿಯಾಗಿದೆ. ದೆಹಲಿ-ಬೆಂಗಳೂರು ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಆ ಪ್ರಯಾಣಿಕನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ವಿಮಾನ ಸಂಸ್ಥೆಯ ಅಧಿಕೃತ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

“ಪಾನಮತ್ತ ಪ್ರಯಾಣಿಕನ ಈ ಕೃತ್ಯವನ್ನು ಗಮನಿಸಿದ ತಕ್ಷಣ ವಿಮಾನದ ಸಿಬ್ಬಂದಿಯು ಕ್ಯಾಪ್ಟನ್‌ಗೆ ಮಾಹಿತಿ ನೀಡಿದರು. ಆ ಪ್ರಯಾಣಿಕನಿಗೆ ಎಚ್ಚರಿಕೆ ನೀಡಲಾಯಿತು. ಸುರಕ್ಷಿತ ಪ್ರಯಾಣಕ್ಕೆ ಯಾವುದೇ ತೊಂದರೆ ಇಲ್ಲವೆನ್ನುವುದನ್ನು ಖಾತ್ರಿಪಡಿಸಿಕೊಂಡು ವಿಮಾನ ಹಾರಾಟ ಮುಂದುವರೆಸಿದೆ” ಎಂದು ಇಂಡಿಗೊ ಏರ್‌ಲೈನ್ಸ್‌ ತಿಳಿಸಿದೆ.

ಆ ಪ್ರಯಾಣಿಕ ಬೆಂಗಳೂರಿನಲ್ಲಿ ಇಳಿಯುತ್ತಿದ್ದಂತೆ, ಆತನನ್ನು ಸಿಐಎಸ್‌ಎಫ್‌ ವಶಕ್ಕೆ ನೀಡಲಾಯಿತು. ಈ ಕುರಿತು ತನಿಖೆ ಪ್ರಗತಿಯಲ್ಲಿದೆ.

ಭಾರತದ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಅಶಿಸ್ತಿನ ವರ್ತನೆಯನ್ನು ನಿಭಾಯಿಸುವ ಸವಾಲನ್ನು ಎದುರಿಸುತ್ತಿವೆ. ಕಳೆದ ಮೂರು ತಿಂಗಳಿನಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದು, ಶೌಚಾಲಯದಲ್ಲಿ ಧೂಮಪಾನ ಮಾಡಿರುವುದು ಸೇರಿದಂತೆ ಹಲವು ಅಶಿಸ್ತಿನ ಘಟನೆಗಳು ವರದಿಯಾಗಿವೆ.

ಈ ವರ್ಷ ಒಟ್ಟು ಹತ್ತು ಪ್ರಯಾಣಿಕರನ್ನು ನೋ ಫ್ಲೈ ಲಿಸ್ಟ್‌ಗೆ ಸೇರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿ ಕೆ ಸಿಂಗ್ ಮಾಹಿತಿ ನೀಡಿದ್ದಾರೆ. 2021 ಮತ್ತು 2022 ರಲ್ಲಿ ಕ್ರಮವಾಗಿ 66 ಮತ್ತು 63 ಪ್ರಯಾಣಿಕರ ಮೇಲೆ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.

 

ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿಇನ್ನೇನು ಹಾರಾಟಕ್ಕೆ ಸಜ್ಜಾಗುತ್ತಿದ್ದ ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದು ಪ್ರಯಾಣಿಕರಿಗೆ ಆತಂಕ ಉಂಟು ಮಾಡಿದ್ದರು. ಈ ಘಟನೆಯು ಇಂಡಿಗೋ ವಿಮಾನದಲ್ಲಿ (6ಇ-7339) 2022ರ ಡಿ. 10ರಂದು ನಡೆದಿದ್ದರು. ಈ ಸಮಯದಲ್ಲಿ ಇಂಡಿಗೊ ಇವರಿಂದ ಕ್ಷಮಾಪಣಾ ಪತ್ರ ಬರೆಸಿಕೊಂಡಿತ್ತು. ಈ ವಿಷಯವು ರಾಜಕೀಯವಾಗಿಯೂ ಸುದ್ದಿ ಮಾಡಿತ್ತು.

ಇತ್ತೀಚೆಗೆ ಬ್ಯಾಂಕಾಕ್‌ನಿಂದ ಮುಂಬೈಗೆ ಬರುತ್ತಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನದೊಳಗೆ ಗಗನಸಖಿಗೆ ಪ್ರಯಾಣಿಕನೊಬ್ಬ ಕಿರುಕುಳ ನೀಡಿದ್ದು, ಸಹ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದ. ಮಾರ್ಚ್ 30 ರಂದು 6E-1052 ಇಂಡಿಗೋ ಫ್ಲೈಟ್‌ನಲ್ಲಿ ಈ ಘಟನೆ ನಡೆದಿದ್ದು, ಮುಂಬೈಗೆ ವಿಮಾನ ಬಂದಿಳಿಯುತ್ತಿದ್ದಂತೆಯೇ ಆರೋಪಿ ಪ್ರಯಾಣಿಕನನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ವಿಮಾನದಲ್ಲಿ ಆಹಾರವಿಲ್ಲ ಎಂದು ಫ್ಲೈಟ್ ಅಟೆಂಡೆಂಟ್ ಹೇಳಿದ್ದಕ್ಕೆ ಕೋಪಗೊಂಡ ಎರಿಕ್ ಹೆರಾಲ್ಡ್ ಜೊನಾಸ್ ವೆಸ್ಟ್‌ಬರ್ಗ್ ಅಶಿಸ್ತಿನಿಂದ ವರ್ತಿಸಿದ್ದಾನೆ. ಈ ವರದಿ ಇಲ್ಲಿದೆ.

ಬೆಂಗಳೂರು-ಅಸ್ಸಾಂ ನಡುವೆ ಹಾರಲು ಟೇಕಾಫ್‌ ಆಗಲು ಸಿದ್ಧವಾಗುತ್ತಿದ್ದ ವಿಮಾನದೊಳಗೆ ಇತ್ತೀಚೆಗೆ ವ್ಯಕ್ತಿಯೊಬ್ಬ ಧೂಮಪಾನ ಮಾಡಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದನು. ವರದಿಗಳ ಪ್ರಕಾರ, ಆರೋಪಿಯನ್ನು ಶಿಹರಿ ಚೌಧರಿ ಎಂದು ಗುರುತಿಸಲಾಗಿದೆ. ಆತ Indigo 6E 716 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ. ಈತನು ಲ್ಯಾವೆಟರಿಯೊಳಗೆ ಧೂಮಪಾನ ಮಾಡಲು ಪ್ರಯತ್ನಿಸುತ್ತಿದ್ದಾಗ ಕ್ಯಾಬಿನ್‌ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದಾನೆ. ಈ ಮೂಲಕ ಈತ ತನ್ನ ಸಹಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡಿದ್ದ. ಈ ವರದಿ ಇಲ್ಲಿದೆ.

ಏರ್ ಇಂಡಿಯಾ ಲಂಡನ್-ಮುಂಬೈ ವಿಮಾನದಲ್ಲಿ ಬಾತ್‌ರೂಂನಲ್ಲಿ ಧೂಮಪಾನ ಮಾಡಿರುವ ಮತ್ತು ಇತರೆ ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಅಮೆರಿಕದ ಪ್ರಜೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾರ್ಚ್ 11 ರಂದು ವಿಮಾನದ ಮಧ್ಯದಲ್ಲಿ ಅನಾನುಕೂಲತೆ ಉಂಟುಮಾಡಿದ 37 ವರ್ಷದ ರಮಾಕಾಂತ್ ವಿರುದ್ಧ ಸಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವರದಿ ಓದಿ.

ಇದನ್ನೂ ಓದಿ...

Back to top button
>