
Weekend With Ramesh: ಧನಂಜಯ್‌ಗೆ ಆರಣಭದಲ್ಲಿ ಗೆಲುವಿಗಿಂತ ಸೋಲಿನ ಕಹಿ ಅನುಭವವೇ ಹೆಚ್ಚಾಗಿತ್ತು.
Weekend With Ramesh: Dhananjay had more bitter experience of defeat than victory in Aranbha.
Weekend With Ramesh: ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ಎಂದೇ ಖ್ಯಾತಿ ಪಡೆದ ನಟ ಧನಂಜಯ್. ತಮ್ಮ ನಟನೆ, ತೆರೆಮೇಲಿನ ಗತ್ತಿನ ಮೂಲಕವೇ ಕರುನಾಡ ಪ್ರೇಕ್ಷಕರನ್ನು ಸೆಳೆದವರು. ಚಂದನವನಕ್ಕೆ ಗಾಡ್‌ಫಾದರ್ ಹಂಗಿಲ್ಲದೆ ಬಂದ ಈ ನಟ ಈಗ ಸ್ಯಾಂಡಲ್‌ವುಡ್‌ನ ಭರವಸೆಯ ನಟರಲ್ಲೊಬ್ಬರು. ಇದೀಗ ಈ ನಟನ ಬಣ್ಣದ ಲೋಕದ ಪಯಣದ ಜತೆಗೆ ವೈಯಕ್ತಿಕ ಬದುಕಿನ ಪುಟಗಳೂ ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ತೆರೆದುಕೊಳ್ಳಲಿವೆ.
ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್ ನಾಲ್ಕನೇ ವಾರದ ಐದನೇ ಅತಿಥಿಯಾಗಿ ವೀಕೆಂಡ್ ವಿಥ್ ರಮೇಶ್ ಶೋನ ಸಾಧಕರ ಕುರ್ಚಿ ಏರಲಿದ್ದಾರೆ. ಈಗಾಗಲೇ ಈ ವಿಚಾರವನ್ನು ವಾಹಿನಿ ಖಚಿತಪಡಿಸಿದೆ. ಹಲವು ಕಿರು ಪ್ರೋಮೋ ಸಹ ಬಿಡುಗಡೆ ಮಾಡಿದ್ದು, ಕುತೂಹಲ ಮೂಡಿಸಿದೆ. ಖುಷಿ, ಸಂಭ್ರಮ, ನಗುವಿನಿಂದ ಆರಂಭವಾಗಿ ನೋವಿನ ಕಥೆಯೂ ಬಿಚ್ಚಿಟ್ಟಿದ್ದಾರೆ ಧನಂಜಯ. ಅಷ್ಟೇ ಅಲ್ಲ ಚಿತ್ರರಂಗದಲ್ಲಿ ಅನುಭವಿಸಿದ ಯಾತನೆಯನ್ನೂ ವಿವರಿಸಿದ್ದಾರೆ.
ಎಷ್ಟೋ ಜನ ನನ್ನನ್ನ ಐರನ್ ಲೆಗ್ಗು ಎಂದಿದ್ದಾರೆ…
ಸಿನಿಮಾಕ್ಕೆ ಬಂದ ಆರಂಭದ ದಿನಗಳಲ್ಲಿ ನಟ ಧನಂಜಯ್ ಅವರಿಗೆ ಹಿಟ್ ಪಟ್ಟ ಸಿಕ್ಕಿರಲಿಲ್ಲ. ಸಾಲು ಸಾಲು ಸಿನಿಮಾ ಅವಕಾಶಗಳು ಸಿಕ್ಕರೂ, ಸೋಲಿನ ಕಹಿ ಅನುಭವವೇ ಹೆಚ್ಚಾಗಿತ್ತು. ಆ ಸಮಯದಲ್ಲಿ ಹಲವರಿಂದ ಅವಮಾನಕ್ಕೊಳಗಾಗಿದ್ದರು ಡಾಲಿ. ಆ ಬಗ್ಗೆ ವೀಕೆಂಡ್ ಶೋನಲ್ಲಿ ಹೇಳಿಕೊಂಡಿದ್ದಾರೆ.
“ಅವ್ನು ಐರನ್ ಲೆಗ್ಗು, ಅವನ ಹಾಕ್ಕೊಂಡ್ರೆ ಜನ ಬರಲ್ಲ, ಎಲ್ಲ ತಂದು ಬಿಟ್ಟು ಧನಂಜಯ್ ಮೇಲೆ ಹಾಕ್ಬುಟ್ರೆ.. ಅಷ್ಟು ಜನರ ಮುಂದೆ ಆ ಬೋ.. ಮಗನ್ ಕರೀರೋ ಅಂತ ಅಂದ್ಬುಟ್ರೆ .. ಹೊಡಿಯೋಕೆ ಅಂತಾನೇ ಫೈಟರ್ ಕೈಯಲ್ಲಿ ಒರಿಜಿನಲ್ ಕೊಡಲಿ ಕೊಟ್ಟಿದ್ದಾರೆ. ಆಗ ಕಿವಿ ಭಾಗದಲ್ಲಿ ಪಠಾರ್.. ಅಂತ ಹೊಡೆತ ಬೀಳುತ್ತೆ.. ನಿಮ್ಮ ಹೀರೋನ ನೀವೇ ಹೀರೋ ಥರ ಟ್ರೀಟ್ ಮಾಡಲಿಲ್ಲ ಅಂದ್ರೆ ಹೇಗೆ.. ಸಿನಿಮಾ ಕಲಿತುಕೊಂಡೇ ಬಂದಿರ್ತಿನಲ್ಲ ನಾನು.. ಆ ಕೋಪ ಗೀಪ ಎಲ್ಲ ತೆಗ್ದು ಡಾಲಿ ಮೇಲೆ ಹಾಕಿದೆ. ಆ ಮೇಲೆ ನಿಂತ್ಕೊಂಡೆ..” ಎಂದು ಧನಂಜಯ್ ಆರಂಭದಲ್ಲಿ ಅನುಭವಿಸಿದ ಕೆಲ ಕೆಟ್ಟ ಘಟನೆಗಳ ಬಗ್ಗೆ ಹೇಳಿಕೊಂಡ ಪ್ರೋಮೋ ಬಿಡುಗಡೆ ಆಗಿದೆ.
ಅಕ್ಕನ ಬಗ್ಗೆಯೂ ಕಣ್ಣೀರಾಗಿದ್ದ ಧನು
ಧನಂಜಯ್ ಅವರ ವೀಕೆಂಡ್ ವಿಥ್ ರಮೇಶ್ ಸಂಚಿಕೆಯ ಮೊದಲ ಪ್ರೋಮೋದಲ್ಲಿ ಮುಂದಿನ ದಿನಗಳಲ್ಲಿ ಇನ್ನೊಂದಿಷ್ಟು ಸಾಧನೆ ಮಾಡಲು ಸ್ಫೂರ್ತಿ ಕೊಡಲಿ ಎಂದು ಹೇಳಿಕೊಂಡೇ ಸಾಧಕರ ಕುರ್ಚಿ ಏರಿದ್ದಾಗಿ ಹೇಳಿದ್ದರು. ದೊಡ್ಡ ಕುಟುಂಬ, ಅಪಾರ ಬಂದು ಮಿತ್ರರು, ಅಜ್ಜಿಯ ಹಾಡು, ಕಾಳೇನಹಳ್ಳಿಯ ಗ್ಯಾಂಗು, ಗಣಪತಿ ಹಬ್ಬ ಹೀಗೆ ಎಲ್ಲವನ್ನೂ ಮೆಲುಕು ಹಾಕಿದ್ದಾರೆ. ಡೊಳ್ಳು ತಂಡವೊಂದನ್ನು ಕಟ್ಟಿ, ಕುಣಿತವನ್ನೂ ಹಾಕಿದ್ದರಂತೆ ಧನಂಜಯ್.
ಧನಂಜಯ್ ಅವರ ಸಹೋದರಿ ಬಗ್ಗೆಯೂ ಯಾರಿಗೂ ಗೊತ್ತಿಲ್ಲದ ಸಂಗತಿಯೊಂದು ಹೊರಬಿದ್ದಿದೆ. ಇವಳು ದೇವರು ಕೊಟ್ಟಿರೋ ಗಿಫ್ಟ್, ನನ್ನ ಮಗಳು ಎಂದೇ ಹೇಳಬಹುದು.. ಎಂದು ಧನಂಜಯ್ ಭಾವುಕರಾಗಿದ್ದಾರೆ. ನೆಚ್ಚಿನ ಟೀಚರ್‌ವೊಬ್ಬರನ್ನು ಕಳೆದುಕೊಂಡ ನೋವೂ ವೇದಿಕೆಯನ್ನು ಕೊಂಚ ಮೌನವಾಗಿಸಿತ್ತು. ಕೆಲವೊಂದು ಪಾತ್ರಗಳಿಗೆ ನಾವು ಹುಡುಕಿದಂಗೆ, ನಮ್ಮನ್ನು ಕೆಲವು ಪಾತ್ರಗಳು ಹುಡುಕುತ್ತಿರುತ್ತವೆ ಎಂದೂ ಧನಂಜಯ್ ಆಡಿದ ಮಾತುಗಳು ಪ್ರೋಮೋದಲ್ಲಿವೆ.