ರಾಜಕೀಯರಾಜ್ಯ

ಸರ್ಕಾರದ ವೈಫಲ್ಯತೆಯೇ ‘ಜನಸಂಖ್ಯೆ‘ ಹೆಚ್ಚಳಕ್ಕೆ ಕಾರಣ : ಅಖಿಲೇಶ್‌ ಯಾದವ್‌

Failure of the government is the reason for the increase in population: Akhilesh Yadav

ಉತ್ತರ ಪ್ರದೇಶ : ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂದು ವಿಶ್ವಸಂಸ್ಥೆ ಜಾಗತಿಕ ಜನಸಂಖ್ಯಾ ಅಂದಾಜು ವರದಿ ನೀಡಿದ್ದು, ‘ಸರ್ಕಾರದ ವೈಫಲ್ಯತೆಯೇ ಭಾರತದಲ್ಲಿ ಜನಸಂಖ್ಯೆ ಹೆಚ್ಚಲು ಕಾರಣ‘ ಎಂದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಗುರುವಾರ ಹೇಳಿದ್ದಾರೆ.

ಕಳೆದ ದಿನ ಬಿಡುಗಡೆಯಾದ ವಿಶ್ವಸಂಸ್ಥೆ ಜಾಗತಿಕ ಜನಸಂಖ್ಯಾ ಅಂದಾಜು ವರದಿಯ ಅಂಕಿಅಂಶಗಳ ಪ್ರಕಾರ ಭಾರತವು 142.86 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಚೀನಾದ ಜನಸಂಖ್ಯೆಯಲ್ಲಿ ಕುಸಿತ ಕಂಡಿದೆ ಎಂದು ಈ ವರದಿ ಹೇಳಿತ್ತು. ಇನ್ನು ಮೂರು ದಶಕಗಳಲ್ಲಿ ಭಾರತದಲ್ಲಿ ಜನಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಈ ವರದಿ ಪ್ರಕಟಿಸಿತ್ತು,

ಈ ಬಗ್ಗೆ ಟ್ವೀಟ್‌ ಮಾಡಿರುವ ಅಖಿಲೇಶ್‌ ಯಾದವ್‌, ’ಆತಂಕಕಾರಿ ಸುದ್ದಿ: ಭಾರತದ ಜನಸಂಖ್ಯೆಯಲ್ಲಿ ಹೆಚ್ಚಳ. ಕಾರಣ: ಸರ್ಕಾರದ ವೈಫಲ್ಯ‘ ಎಂದು ಬರೆದುಕೊಂಡಿದ್ದಾರೆ.

‘ಬಡತನ ಮತ್ತು ನಿರುದ್ಯೋಗದಿಂದ ಜನರು ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯುತ್ತಿದ್ದಾರೆ. ಮಕ್ಕಳು ಕೆಲಸ ಮಾಡಿ ತಮ್ಮ ಕುಟುಂಬವನ್ನು ಸಲಹುತ್ತಾರೆ ಎಂಬ ಭಾವನೆ ಜನರಿಗಿದೆ. ಈ ಕಾರಣಕ್ಕೆ ಜನಸಂಖ್ಯೆ ಹೆಚ್ಚಳವಾಗಿದೆ‘ ಎಂದು ಯಾದವ್‌ ಹೇಳಿದ್ದಾರೆ.

‘ವೈದ್ಯಕೀಯ ಚಿಕಿತ್ಸೆಯ ಕೊರತೆಯಿಂದ ಶಿಶು ಮರಣದ ಹೊಂದುತ್ತಿದ್ದು, ಈ ಬಗ್ಗೆ ಜನರು ಭಯದಲ್ಲಿದ್ದಾರೆ. ಅಲ್ಲದೇ ಸರ್ಕಾರ ಗರ್ಭ ನಿರೋಧಕ ಮಾತ್ರೆಗಳನ್ನು ಸರಿಯಾಗಿ ವಿತರಿಸುತ್ತಿಲ್ಲ. ಶಿಕ್ಷಣದ ಕೊರತೆ ಜನಸಂಖ್ಯೆ ಹೆಚ್ಚಳಕ್ಕೆ ಇನ್ನೊಂದು ಕಾರಣವಾಗಿದೆ. ಸರಿಯಾದ ಶಿಕ್ಷಣವಿಲ್ಲದ ಕಾರಣ ಜನಸಂಖ್ಯೆಯ ಒತ್ತಡದ ಬಗ್ಗೆ ಜನರಿಗೆ ಜ್ಞಾನವಿಲ್ಲ‘ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ...

Back to top button
>