ರಾಜಕೀಯರಾಜ್ಯ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಲಿಂಗಾಯತ, ದಲಿತರ ಮೀಸಲಾತಿ ತೆಗೆದುಹಾಕುತ್ತಾರೆ: ಅಮಿತ್‌ ಶಾ

If Congress comes to power, Lingayat, Dalit reservation will be removed: Amit Shah

ವರದಿ: ಪ್ರಿಯಲಚ್ಛಿ
ಮೈಸೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲಿಂಗಾಯತರಿಗೆ ನೀಡಿದ ಮೀಸಲಾತಿ ಹಿಂಪಡೆಯುತ್ತದೆ. ದಲಿತರಿಗೆ ನೀಡಲಾದ ಮೀಸಲಾತಿಯನ್ನು ತೆಗೆಯುತ್ತಾರೆ. ಅವರಿಗೆ ತುಷ್ಟೀಕರಣದ ಹೊರತು ಮತ್ತೇನು ಕಾಣಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದರು.

ಮೈಸೂರಿನ ವರುಣಾ ಕ್ಷೇತ್ರದಲ್ಲಿಂದು ವಿ.ಸೋಮಣ್ಣ ಪರ ಮತಯಾಚನೆ ಮಾಡಿದ ಅವರು, ಸಿದ್ದರಾಮಯ್ಯ ಅವರು ಲಿಂಗಾಯತರಿಗೆ ಅಪಮಾನ ಮಾಡಿದ್ದಾರೆ. ಆದರೆ ಬಿಜೆಪಿ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿದೆ. ಸಿದ್ದರಾಮಯ್ಯ ಅವರು ಲಿಂಗಾಯತರು ಭ್ರಷ್ಟಾಚಾರಿಗಳು ಎನ್ನುವ ಮೂಲಕ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ನವರು ಈ ಹಿಂದೆ ನಿಜಲಿಂಗಪ್ಪ ಮತ್ತು ವಿರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿ ಅಪಮಾನ ಮಾಡಿತು ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರೆ ನೀವು ಯಾಕೆ ಪದೇ ಪದೇ ಕ್ಷೇತ್ರ ಬದಲಾಯಿಸುತ್ತೀರಿ. ವರುಣಾ ಮತದಾರರೇ ನಿವೃತ್ತಿ ಹೊಂದುವ ನಾಯಕ ಬೇಕಾ ಅಥವಾ ಭವಿಷ್ಯದ ಬಗ್ಗೆ ಯೋಜಿಸುವ ನಾಯಕ ಬೇಕಾ. ಸಿದ್ದರಾಮಯ್ಯ ಅವರ ಕಾಲದಲ್ಲಿ ಮಂಡ್ಯದ ಮೈ ಶುಗರ್ ಕಾರ್ಖಾನೆ ಮುಚ್ಚಿತು ಎಂದು ಮತದಾರರಿಗೆ ನೆನಪಿಸುವ ಪ್ರಯತ್ನ ಮಾಡಿದರು.

ಕರ್ನಾಟಕವನ್ನು ಅಭಿವೃದ್ದಿ ಮತ್ತು ಸುರಕ್ಷಿತ ರಾಜ್ಯ ಮಾಡುವ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ. ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬಂದರೇ ಪಿಎಫ್ಐ ನಿಷೇಧವನ್ನು ಹಿಂಡೆಯುತ್ತಾರೆ. ಕಾಂಗ್ರೆಸ್ ರಾಜ್ಯವನ್ನು ಎಟಿಎಂ ಮಾಡಲು ಹೊರಟಿದೆ. ಸಿದ್ದರಾಮಯ್ಯ ಅವರ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ.

ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿ. ವರುಣಾ ಜನರು ಸಿದ್ದರಾಮಯ್ಯಗೆ ಮತ ನೀಡಬೇಡಿ. ವಿ ಸೋಮಣ್ಣ ಅವರನ್ನು ಗೆಲ್ಲಿಸಿದರೆ, ವರುಣಾವನ್ನು ಇಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಾರೆ. ಕಮಲದ ಬಟನ್ ಮೇಲೆ ಒತ್ತಿ. ನರೇಂದ್ರ ಮೋದಿಯವರನ್ನು 2024ರಲ್ಲಿ ಮತ್ತೊಮ್ಮೆ ಪ್ರಧಾನಿ ಮಾಡಿ ಎಂದು ಕ್ಷೇತ್ರದ ಜನತೆಗೆ ಮನವಿ ಮಾಡಿದರು.

ಮಂಡ್ಯದಲ್ಲಿ ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದೆ; ಹೊಸ ನಾಯಕತ್ವಕ್ಕೆ ಅವಕಾಶ ಕೊಡಿ
ಮಂಡ್ಯ: 30 ವರ್ಷದಲ್ಲಿ ಜೆಡಿಎಸ್, ಕಾಂಗ್ರೆಸ್ ಗೆ ಮತ ಹಾಕಿದ್ದೀರಿ. ಯಾವುದೇ ಅಭಿವೃದ್ಧಿ ಆಗಿಲ್ಲ. ಇಬ್ಬರ ರಾಜಕೀಯ ಆಟದಿಂದ ಜನರಿಗೆ ಸಂಕಟ ಬಂದಿದೆ. ಈ ಬಾರಿ ಬದಲಾವಣೆ ಆಗಬೇಕು. ಹೊಸ ನಾಯಕತ್ವ, ಛಲದಿಂದ ಕೆಲಸ ಮಾಡುವಂತಹ ರಾಜಕೀಯ ಶಕ್ತಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಇಂದು ಮಂಡ್ಯ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ ಜಯರಾಮ ಅವರ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು.

ಮಂಡ್ಯ ಇಸ್ ಇಂಡಿಯಾ. ಮೊನ್ನೆ ನರೇಂದ್ರ ಮೋದಿಯವರು ಮಂಡ್ಯಗೆ ಬಂದು ಹೋದ ನಂತರ ಇಂಡಿಯಾ ಅಂದರೆ ಮಂಡ್ಯ ಎನ್ನುವ ಹಾಗಿದೆ. ಮಂಡ್ಯದಲ್ಲಿ ಹೊಸ ಗಾಳಿ ಬೀಸುತ್ತಿದೆ. ಇನ್ನು ಏಳು ದಿನಗಳ ಕಾಲ ನೀವು ಶ್ರಮವಹಿಸಿದರೆ ಈ ಗಾಳಿ ಸುನಾಮಿಯಾಗಲಿದೆ. ಮಂಡ್ಯವನ್ನು ಅಭಿವೃದ್ಧಿಗೆ ಎಸ್.ಟಿ ಜಯರಾಮ ಅವರ ಕೊಡುಗೆ ಬಹಳ ದೊಡ್ಡದಿದೆ, ಅವರು ಹೃದಯವಂತರು. ಹೃದಯವಂತ ಜಯರಾಮ ಅವರ ಮಗ ಅಶೋಕ ಜಯರಾಮ ಮಂಡ್ಯದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಜಯರಾಮ ಅವರ ಸ್ನೇಹಿತನಾಗಿ ನಾನು ಅವರ ಅಭಿಮಾನಿಗಳಿಗೆ ಕರೆ ಕೊಡುತ್ತಿದ್ದೇನೆ.‌ ಎಲ್ಲರೂ ಪಕ್ಷಾತೀತವಾಗಿ ಅಶೋಕ ಅವರಿಗೆ ಆಶೀರ್ವಾದ ಮಾಡಬೇಕು ಎಂದರು.

ಮಂಡ್ಯದ ಗಾಂಧಿವಾದಿಗಳಾದ ಶಂಕರೇಗೌಡರು ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಮಂಡ್ಯದ ಮಣ್ಣು ಮಣ್ಣಲ್ಲ, ಚಿನ್ನ.‌ ಈ ಭೂಮಿ ತಾಯಿಗೆ ಕಾವೇರಿ ನೀರನ್ನು ಕೊಟ್ಟು ರೈತರು ಬೆವರು ಹರಿಸಿ ದುಡಿದರೇ ಬಂಗಾರದ ಬೆಳೆ ಸಿಗುತ್ತದೆ. ಮಾದೇಗೌಡರು ಹೋರಾಟ ನನಗೆ ನೆನಪಾಗುತ್ತದೆ. ಅವರ ಜೊತೆ ನಮ್ಮ ತಂದೆ ಮತ್ತು ನಾನು ನಿಕಟವಾದ ಸಂಪರ್ಕ ಇತ್ತು. ಇಂತಹ ನಾಡಿನಲ್ಲಿ ನಾಯಕತ್ವದ ಕೊರತೆ ಕಾಡುತ್ತಿದೆ ಎಂದರು.

 

ಇದನ್ನೂ ಓದಿ...

Back to top button
>