ರಾಜಕೀಯರಾಜ್ಯ

ನಾಳೆ ಚುನಾವಣಾ ಫಲಿತಾಂಶ; ಮತ ಎಣಿಕೆ ದಿನದ ಮೈಸೂರಿನ ಸಂಪೂರ್ಣ ಚಿತ್ರಣ ಹೀಗಿದೆ

Election results tomorrow; This is the complete picture of Mysore on the counting day

ವರದಿ: ಪ್ರಿಯಲಚ್ಛಿ
ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎಲ್ಲಾ ಮತಗಟ್ಟೆಗಳ ಚುನಾವಣಾ ಮತ ಎಣಿಕೆ ಕಾರ್ಯವು ಮೈಸೂರು ನಗರದ ಮಹಾರಾಣಿ ಕಾಲೇಜು, ವಾಲ್ಮೀಕಿ ರಸ್ತೆ ಜಂಕ್ಷನ್, ಪಡುವಾರಹಳ್ಳಿ ಇಲ್ಲಿ ನಡೆಯಲಿದ್ದು, ಮತ ಎಣಿಕೆ ಕಾರ್ಯವು ಸುಗಮವಾಗಿ ನಡೆಯಲು ಮತ್ತು ಮೈಸೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ದಿನಾಂಕ ಮೇ 13ರ ಬೆಳಗ್ಗೆ 6 ಗಂಟೆಯಿಂದ ಮೇ14ರ ಬೆಳಗ್ಗೆ 6 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದಂಡ ಪ್ರಕ್ರಿಯ ಸಂಹಿತೆ 1973ರ ಕಲಂ 144ರ ಅನ್ವಯ ನಿಷೇಧಾಜ್ಞೆಯನ್ನು ಹೊರಡಿಸಿ ಆದೇಶ ಹೊರಡಿಸಲಾಗಿದೆ.

ನಾಳೆ ಮೈಸೂರಿನಲ್ಲಿ ಈ ಕೆಲಸಗಳನ್ನು ಮಾಡುವಂತಿಲ್ಲ
1. ಚುನಾಯಿತ ಅಭ್ಯರ್ಥಿಗಳ ವಿಜಯೋತ್ಸವ ಮೆರವಣಿಗೆ
2. ಪಟಾಕಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಾಸದ ಮನೆಗಳ ಮುಂದೆ ಸಿಡಿಸುವುದು
3. ಮತ ಎಣಿಕೆ ಕೇಂದ್ರದಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶ ಹಾಗೂ ಮತ ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ಐದು ಮಂದಿಗಿಂತ ಹೆಚ್ಚು ಜನ ಗುಂಪು ಸೇರುವುದು, ಸಭೆ ಸಮಾರಂಭಗಳನ್ನು ನಡೆಸುವುದು.
4. ಯಾವುದೇ ವ್ಯಕ್ತಿ ತನ್ನೊಂದಿಗೆ ಸ್ಪೋಟಕ ವಸ್ತು ಮತ್ತು ಇನ್ನಿತರ ಮಾರಕಾಸ್ತ್ರಗಳನ್ನು ಒಯ್ಯುವುದು.
5. ಯಾವುದೇ ಮೆರವಣಿಗೆ ನಡೆಸುವುದು ಹಾಗೂ ಪ್ರಚೋದನಕಾರಿ ಭಾಷಣ ಮಾಡುವುದು.
6. ಧ್ವನಿ ವರ್ಧಕ ಡಿಜೆ ಉಪಯೋಗಿಸುವುದು ಮತ್ತು ಬೈಕ್ ರ್ಯಾಲಿ ನಡೆಸುವುದು.

ಮೈಸೂರಲ್ಲಿ ನಾಳೆ ಈ ರಸ್ತೆಗಳಲ್ಲಿ ಓಡಾಡ್ಲೇಬೇಡಿ: ಇಲ್ಲಿದೆ ಬದಲಿ ಮಾರ್ಗ
ಮೈಸೂರು ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತ ಎಣಿಕೆ ನಡೆಯುವ ಕೇಂದ್ರದ ರಸ್ತೆಯಲ್ಲಿನ ವಾಹನ ಸಂಚಾರ ಹಾಗೂ ನಿಲುಗಡೆ ಮೇಲೆ ನಿರ್ಬಂಧ ವಿಧಿಸಿ ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಅವರಿಂದ ಆದೇಶವನ್ನು ಹೊರಡಿಸಲಾಗಿದೆ.

ಕೆಎಸ್ಆರ್‌ಟಿಸಿ ಬಸ್ಸುಗಳು ಸಂಚರಿಸಬೇಕಾದ ಮಾರ್ಗ
1. ಮೈಸೂರು ನಗರದ ಕಡೆಯಿಂದ ಹುಣಸೂರು ಕಡೆಗೆ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್ಸುಗಳು ರಾಮಸ್ವಾಮಿ ವೃತ್ತ ಮುಡಾ ಜಂಕ್ಷನ್ ಎಡತಿರುವು – ಬೋಗಾದಿಸ್ತೆಯಲ್ಲಿ ಮುಂದುವರೆದು ಬೋಗಾದಿ ರಿಂಗ್ ರೋಡ್ ಮೂಲಕ ಹುಣಸೂರು ರಸ್ತೆ ತಲುಪುವುದು.
2. ಮಡಿಕೇರಿ ಹುಣಸೂರು ಹಾಸನ ಕಡೆಯಿಂದ ಮೈಸೂರು ನಗರಕ್ಕೆ ಬರುವ ಕೆಎಸ್ಆರ್ಟಿಸಿ ಬಸ್ಸುಗಳು ಸೇಂಟ್ ಜೋಸೆಫ್ ಜಂಕ್ಷನ್ ನಲ್ಲಿ ಎಡತಿರುವು ಪಡೆದು ದೇವಸ್ಥಾನ ರಸ್ತೆಯಲ್ಲಿ ಸಾಗಿ ವಿವಿ ಪುರಂ ವೃತ್ತದಲ್ಲಿ ಬಲತಿರುವು ಪಡೆದು ಕೆ ಆರ್ ಎಸ್ ರಸ್ತೆಯಲ್ಲಿ ಸಾಗಿ ದಾಸಪ್ಪ ಜಂಕ್ಷನ್ ಮೂಲಕ ಮುಂದುವರೆಯುವುದು.

ವಾಹನಗಳ ಸಂಚಾರವನ್ನು ನಿರ್ಬಂಧಿಸಿರುವ ರಸ್ತೆಗಳ ವಿವರ
1. ಕಲಾಮಂದಿರ ಜಂಕ್ಷನ್ ನಿಂದ ಸೆಂಟ್ ಜೋಸೆಫ್ ಜಂಕ್ಷನ್‌ವರೆಗೆ ಹುಣಸೂರು ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. (ಚುನಾವಣಾ ಅಗತ್ಯ ಕರ್ತವ್ಯ ವಾಹನಗಳನ್ನು ಹೊರತುಪಡಿಸಿ).
2. ವಾಲ್ಮೀಕಿ ರಸ್ತೆ – ಕೆ.ಆರ್.ಎಸ್ ರಸ್ತೆ ಜಂಕ್ಷನ್‌ನಿಂದ ಹುಣಸೂರು ರಸ್ತೆ ವಾಲ್ಮೀಕಿ ರಸ್ತೆ ಜಂಕ್ಷನ್‌ವರೆಗಿನ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ( ಚುನಾವಣಾ ಅಗತ್ಯ ಕರ್ತವ್ಯ ವಾಹನಗಳನ್ನು ಹೊರತುಪಡಿಸಿ).
3. ಮಾತೃ ಮಂಡಳಿ ವೃತ್ತದಿಂದ ವಾಲ್ಮೀಕಿ ರಸ್ತೆಯವರೆಗೆ ಆದಿಪಂಪ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. (ಚುನಾವಣಾ ಅಗತ್ಯ ಕರ್ತವ್ಯ ವಾಹನಗಳನ್ನು ಹೊರತುಪಡಿಸಿ).

ಈ ಬದಲಿ ಮಾರ್ಗವನ್ನು ಅನುಸರಿಸಿ
1. ಮೈಸೂರು ನಗರದಿಂದ ಹುಣಸೂರು ಕಡೆಗೆ ಹೋಗುವ ವಾಹನಗಳು ಡಿಸಿ ಆಫೀಸ್ ಆರ್ಚ್ ಗೇಟ್ ಜಂಕ್ಷನ್ ನಿಂದ ವೀರೇಂದ್ರ ಹೆಗ್ಗಡೆ ವೃತ್ತದ ಕಡೆಗೆ ಸಂಚರಿಸುವ ವಾಹನಗಳು (ಡಿಸಿ ಕಚೇರಿ ಆರ್ಚ್ ಗೇಟ್ ಜಂಕ್ಷನ್ ಬಳಿ ಎಡತಿರುವು ಪಡೆದು ಕೌಟಿಲ್ಯ ವೃತ್ತ ಬೋಗಾದಿ ರಸ್ತೆಯಲ್ಲಿ ಮುಂದೆ ಸಾಗುವುದು).
2. ಹಾಸನ ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಸೇಂಟ್ ಜೋಸೆಫ್ ಜಂಕ್ಷನ್ ನಲ್ಲಿ ಎಡತಿರುವು ಪಡೆದು ಟೆಂಪಲ್ ರಸ್ತೆ , ಕೆ.ಆರ್.ಎಸ್ ರಸ್ತೆ ಮೂಲಕ ಮುಂದೆ ಸಾಗುವುದು.

ಮಾಧ್ಯಮದವರು ಮತ್ತು ಚುನಾವಣೆ ಏಜೆಂಟ್‌ಗಳ ವಾಹನಗಳು ಸಂಚರಿಸುವ ಮಾರ್ಗ ಮತ್ತು ಪಾರ್ಕಿಂಗ್ ಸ್ಥಳ
1. ದಾಸಪ್ಪ ವೃತ್ತದ ಮೂಲಕ ಬರುವವರು: ದಾಸಪ್ಪ ವೃತ್ತ ವಿವೇಕಾನಂದ ಪ್ರತಿಮೆ ಜಂಕ್ಷನ್- ಗ್ರಾಮ ಮಂದಿರ ಜಂಕ್ಷನ್ ಎಡತಿರುವು – ಆದಿ ಪಂಪ ರಸ್ತೆ- ನಾರಾಯಣಸ್ವಾಮಿ ಬ್ಲಾಕ್ ಎಡತಿರುವು ಪಡುವಾರಹಳ್ಳಿ ಮಹದೇಶ್ವರ ದೇವಸ್ಥಾನದ ಹಿಂಭಾಗದ ಮೈದಾನದಲ್ಲಿ ಕಾರುಗಳನ್ನು ಪಾರ್ಕಿಂಗ್ ಮಾಡುವುದು. ದ್ವಿಚಕ್ರ ವಾಹನ ಸವಾರರು ಎಡತಿರುವು ಪಡೆದು ಮಹಾರಾಣಿ ಕಾಲೇಜು, ಹಾಸ್ಟೆಲ್‌ನ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುವುದು.
2. ಹುಣಸೂರು ರಸ್ತೆ ಮೂಲಕ ಬರುವವರು: ಸೇಂಟ್ ಜೋಸೆಫ್ ಜಂಕ್ಷನ್ ಎಡತಿರುವು ಟೆಂಪಲ್ ರಸ್ತೆ ಮಾತೃ ಮಂಡಳಿ ಜಂಕ್ಷನ್- ಬಲತಿರುವು- ಆದಿ ಪಂಪ ರಸ್ತೆ- ನಾರಾಯಣಸ್ವಾಮಿ ಪಡುವಾರಹಳ್ಳಿ ಮಹದೇಶ್ವರ ದೇವಸ್ಥಾನದ ಹಿಂದೆ ಮೈದಾನದಲ್ಲಿ ಕಾರುಗಳನ್ನು ಪಾರ್ಕಿಂಗ್ ಮಾಡುವುದು. ದ್ವಿಚಕ್ರ ವಾಹನ ಸವಾರರು ಎಡತಿರುವು ಪಡೆದು ಮಹಾರಾಣಿ ಕಾಲೇಜು ಹಾಸ್ಟೆಲ್‌ನ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುವುದು.

ಮತ ಎಣಿಕೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳ ವಾಹನಗಳು ಸಂಚರಿಸುವ ಮಾರ್ಗ ಹಾಗೂ ಪಾರ್ಕಿಂಗ್ ಸ್ಥಳ
1. ದಾಸಪ್ಪ ವೃತ ಮೂಲಕ ಬರುವವರು: ದಾಸಪ್ಪ ವೃತ್ತ-ವಿವೇಕಾನಂದ ಪ್ರತಿಮೆ ಜಂಕ್ಷನ್- ರಾಮ ಮಂದಿರ ಜಂಕ್ಷನ್ ಎಡತಿರುವು- ಲೀಲಾ ಚನ್ನಯ್ಯ ಕಲ್ಯಾಣ ಮಂಟಪ ಜಂಕ್ಷನ್ ಬಲತಿರುವು- ಆದಿ ಪಂಪ ರಸ್ತೆ ನಾರಾಯಣಸ್ವಾಮಿ ಬ್ಲಾಕ್ ಎಡತಿರುವು – ಪಡುವಾರಹಳ್ಳಿ ಬಸವೇಶ್ವರ ಛತ್ರದ ಮುಂಭಾಗದ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
2. ಹುಣಸೂರು ರಸ್ತೆಯ ಮೂಲಕ ಆಗಮಿಸುವವರು: ಸೇಂಟ್ ಜೋಸೆಫ್ ಜಂಕ್ಷನ್ ಎಡತಿರುವು – ಟೆಂಪಲ್ ರಸ್ತೆ ಮಾತೃ ಮಂಡಳಿ ಜಂಕ್ಷನ್- ಬಲತಿರುವು ಆದಿ ಪಂಪ ರಸ್ತೆ ನಾರಾಯಣಸ್ವಾಮಿ ಬ್ಲಾಕ್- ಬಲತಿರವು- ಪಡುವಾರಹಳ್ಳಿ ಬಸವೇಶ್ವರ ಛತ್ರದ ಮುಂಭಾಗದ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.

ಮತ ಎಣಿಕೆ ಕರ್ತವ್ಯಕ್ಕೆ ನಿಯೋಜನೆಗೊಂಡ ಪೊಲೀಸ್ ವಾಹನಗಳ ಪಾರ್ಕಿಂಗ್ ಸ್ಥಳದ ವಿವರ
ವಾಹನಗಳ ಪಾರ್ಕಿಂಗ್ ಸ್ಥಳದ ವಿವರ ಮತಎಣಿಕೆ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಾಹನಗಳು ವಾಲ್ಮೀಕಿ ಜಂಕ್ಷನ್ ಬಳಿ ಇರುವ ಜುಮ್ಮಾ ಮಸೀದಿ ಮುಂಭಾಗದ ಖಾಲಿ ಜಾಗದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬೇಕೆಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

 

ಇದನ್ನೂ ಓದಿ...

Back to top button
>