ರಾಜಕೀಯರಾಜ್ಯ

ಗೃಹಲಕ್ಷ್ಮೀ ಯೋಜನೆಯ 2000 ರೂಪಾಯಿ ಸಿಗುವುದು ಸೊಸೆಗಲ್ಲ, ಅತ್ತೆಗೆ?

2000 rupees of Grilahakshmi Yojana not daughter-in-law but mother-in-law?

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಳಗಾವಿ: ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಂತೆ ಪ್ರತಿ ತಿಂಗಳು ಮನೆಯ ಒಡತಿಗೆ 2 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ.

ಇದೀಗ ಮನೆಯೊಡತಿ ಯಾರು ಎನ್ನುವುದನ್ನು ಗುರುತಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಇದಕ್ಕೆ ಕಾರಣ ಅವಿಭಕ್ತ ಕುಟುಂಬಗಳು. ಹೌದು ಅವಿಭಕ್ತ ಕುಟುಂಬಗಳಲ್ಲಿ 2000 ಸಾವಿರ ರೂಪಾಯಿಯನ್ನು ಅತ್ತೆಗೆ ಕೊಡಬೇಕಾ ಅಥವಾ ಸೊಸೆಗೆ ಕೊಡಬೇಕಾ ಎನ್ನುವುದು ಗೊಂದಲ ಸೃಷ್ಟಿಸಿತ್ತು.

ಈ ಬಗ್ಗೆ ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​, ನಮ್ಮ ಸಂಪ್ರದಾಯದ ಪ್ರಕಾರ ಮನೆಯ ಒಡತಿ ಅತ್ತೆ ಆಗುತ್ತಾರೆ. ಹೀಗಾಗಿ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಅತ್ತೆಗೆ ನೀಡುತ್ತೇವೆ ಎಂದರು. ಇನ್ನು ನಾಳೆ ಈ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸಿ ಅನುಷ್ಠಾನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದರು.

ಈ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷವಾಗಿ ಗೃಹಲಕ್ಷ್ಮೀ ಯೋಜನೆ ಸೊಸೆಗೆ ಸಿಗುವುದಿಲ್ಲ ಎನ್ನುವ ಸುಳಿವು ನೀಡಿದ್ದಾರೆ.

 

ಇದನ್ನೂ ಓದಿ...

Back to top button
>