ಆರೋಗ್ಯಜೀವನಶೈಲಿ

ಸಿಹಿ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ರೆ ಏನಾಗುತ್ತೆ ಗೊತ್ತಾ

Do you know what happens if you stop eating sweets completely?

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಮನುಷ್ಯನ ಆಹಾರಕ್ರಮದಲ್ಲಿ ಸಕ್ಕರೆಗೆ ಅಗ್ರ ಸ್ಥಾನವಿದೆ. ಬೆಳಿಗ್ಗೆದ್ದು ಕಾಫಿ ಕುಡಿಯುವುದರಿಂದ ರಾತ್ರಿಯೂಟದವರೆಗೆ ವಿವಿಧ ರೂಪದಲ್ಲಿ ಸಕ್ಕರೆ ನಮ್ಮ ದೇಹಕ್ಕೆ ಸೇರುತ್ತದೆ. ಹಲವು ತಿನಿಸುಗಳನ್ನು ಸಕ್ಕರೆ ಇಲ್ಲದೆ ತಯಾರಿಸಲು ಸಾಧ್ಯವೇ ಇಲ್ಲ. ಸಕ್ಕರೆಯನ್ನು ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತಿದೆ. ಇದರೊಂದಿಗೆ ಮಧುಮೇಹ, ಸ್ಥೂಲಕಾಯತೆ ಹಾಗೂ ಹಲ್ಲು ಹುಳುಕಾಗುವುದು ಕೂಡ ಜೊತೆಯಾಗಿ ಬರುತ್ತವೆ ಎಂಬುದು ಸುಳ್ಳಲ್ಲ. ಸಕ್ಕರೆಯ ಅತಿಯಾದ ಸೇವನೆಯು ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಯಕೃತ್ತಿನ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಈ ಎಲ್ಲಾ ಕಾರಣದಿಂದ ಹಲವರು ಸಕ್ಕರೆ ಸೇವನೆಯನ್ನು ಕಡಿಮೆ ಮಾಡುತ್ತಾರೆ ಅಥವಾ ಸಂಪೂರ್ಣವಾಗಿ ಸಕ್ಕರೆ ಸೇವನೆಯನ್ನು ತ್ಯಜಿಸುತ್ತಾರೆ. ಆದರೆ ಇದರಿಂದ ನಿಜವಾಗಿಯೂ ದೇಹಕ್ಕೆ ಏನಾಗುತ್ತದೆ, ಅದು ದೇಹ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ. ಈ ಬಗ್ಗೆ ತಜ್ಞರು ಏನಂತಾರೆ ನೋಡಿ.

ದೇಹದ ಮೇಲೆ ಸಕ್ಕರೆಯ ಪ್ರಭಾವದ ಬಗ್ಗೆ ಬೆಳಕು ಚೆಲ್ಲುವ ಪೌಷ್ಟಿಕ ತಜ್ಞೆ ನ್ಮಾಮಿ ಅಗರ್‌ವಾಲ್‌ ಯಾವ ಕಾರಣಕ್ಕೆ ಸಕ್ಕರೆ ಸೇವನೆಗೆ ಕಡಿವಾಣ ಹಾಕಬೇಕು ಎಂಬುದನ್ನು ವಿವರಿಸುತ್ತಾರೆ.

ತಿಂಗಳಲ್ಲಿ 14 ದಿನ ಸಕ್ಕರೆ ತಿನ್ನದೇ ಇರುವುದು ಉತ್ತಮ ಎನ್ನುವ ಅವರು ಇದು ನಿಮಗೆ ಸ್ವಲ್ಪ ಕಷ್ಟ ಎನ್ನಿಸಬಹುದು, ಆದರೆ ಇದರ ಫಲಿತಾಂಶದ ಪ್ರಭಾವ ದೊಡ್ಡದು ಎನ್ನುತ್ತಾರೆ.

ಒಂದಿಷ್ಟು ದಿನಗಳ ಕಾಲ ಸಕ್ಕರೆಯನ್ನು ಸೇವಿಸದೇ ಇರುವುದರಿಂದ ನಮ್ಮ ದೇಹವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಲು ಆರಂಭಿಸುತ್ತದೆʼ ಎಂಬ ಅಂಶವನ್ನು ನ್ಮಾಮಿ ಅವರು ಹೈಲೈಟ್‌ ಮಾಡುತ್ತಾರೆ. ಅವರ ಪ್ರಕಾರ ಇದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚುತ್ತದೆ, ಜೊತೆಗೆ ಉರಿಯೂತವು ಕಡಿಮೆಯಾಗುತ್ತದೆ.

ತೂಕ ನಿಯಂತ್ರಣ
ಸಕ್ಕರೆ ಸೇವನೆಯನ್ನು ತ್ಯಜಿಸುವುದರಿಂದ ಇನ್ನೂ ಹಲವು ಪ್ರಯೋಜನಗಳಿವೆ. ಚರ್ಮದ ಕಾಂತಿ ಹೆಚ್ಚಲು ಹಾಗೂ ಜೀರ್ಣಕ್ರಿಯೆ ಸುಧಾರಿಸಲು ಇದು ಸಹಾಯ ಮಾಡುತ್ತದೆ. ನಿಧಾನಕ್ಕೆ ಸಕ್ಕರೆ ಸೇವನೆ ಕಡಿಮೆ ಮಾಡುವುದರಿಂದ ಇದು ದೇಹಕ್ಕೆ ಹೊಂದಿಕೊಳ್ಳುತ್ತದೆ. ಅಲ್ಲದೆ ನಿಧಾನಕ್ಕೆ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆʼ ಎಂದು ಅವರು ಹೇಳುತ್ತಾರೆ. ಆ ಕಾರಣಕ್ಕೆ ಸಕ್ಕರೆಗೆ ವಿದಾಯ ಹೇಳಿ, ಆರೋಗ್ಯಕರ ಜೀವನದ ನಡೆಸಿʼ ಎಂದು ಪೌಷ್ಟಿಕತಜ್ಞರು ಸಲಹೆ ನೀಡುತ್ತಾರೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ
ಆಹಾರವು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬ ಬಗ್ಗೆ ನ್ಮಾಮಿ ವಿವರಿಸುತ್ತಾರೆ. ಅವರ ಪ್ರಕಾರ ʼಆಗಾಗ್ಗೆ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ ಅಥವಾ ವಾಸಿಯಾಗದ ಗಾಯಗಳು ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಿದೆ ಎಂಬುದನ್ನು ಸೂಚಿಸುತ್ತದೆ. ನಾವು ಸಕ್ಕರೆಯನ್ನು ನೇರವಾಗಿ ಸೇವಿಸುವ ಜೊತೆಗೆ ತರಕಾರಿಗಳು, ರೊಟ್ಟಿ, ಬೇಳೆ ಸೇರಿದಂತೆ ನಾವು ಸೇವಿಸುವ ಪ್ರತಿ ಆಹಾರದಿಂದಲೂ ನಮ್ಮ ದೇಹಕ್ಕೆ ಸಕ್ಕರೆಯಂಶ ಸೇರುತ್ತದೆ. ಆ ಕಾರಣಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ದೈಹಿಕ ಆರೋಗ್ಯದಿಂದಿರಲು ನಾವು ಸೇವಿಸುವ ಆಹಾರಕ್ರಮದ ಮೇಲೆ ಕೇಂದ್ರೀಕರಿಸುವುದು ಅವಶ್ಯ.

 

ಇದನ್ನೂ ಓದಿ...

Back to top button
>