ರಾಜ್ಯವಾಹನ

49 ರೈಲುಗಳ ಸಂಚಾರ ರದ್ದು, 38 ರೈಲು ಮಾರ್ಗ ಬದಲಾವಣೆ!

49 trenes cancelados, 38 rutas de tren cambiadas!

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಒಡಿಶಾ: ಭೀಕರ ರೈಲು ಅಪಘಾತ ಸಂಭವಿಸಿದ ಪರಿಣಾಮ ಒಡಿಶಾ ರೈಲು ಸಂಚಾರದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಅದರಲ್ಲೂ 49 ರೈಲುಗಳ ಸಂಚಾರ ರದ್ದು ಮಾಡಿ, 38 ರೈಲುಗಳ ಮಾರ್ಗ ಬದಲಾವಣೆ ಮಾಡಿದ್ದು ಲಕ್ಷಾಂತರ ರೈಲು ಪ್ರಯಾಣಿಕರನ್ನ ಕಂಗಾಲು ಮಾಡಿದೆ. ಹಾಗಾದ್ರೆ ಕ್ಯಾನ್ಸಲ್ ಆಗಿರುವ ರೈಲು ಯಾವುವು? ತಿಳಿಯೋಣ ಬನ್ನಿ.

ಬೆಂಗಳೂರು & ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಸೇರಿ ಕೋರಮಂಡಲ್‌ ಎಕ್ಸ್‌ಪ್ರೆಸ್‌ ಹಾಗೂ ಗೂಡ್ಸ್ ರೈಲು ಮಧ್ಯೆ ಒಡಿಶಾದ ಬಾಲಸೋರ್‌ನಲ್ಲಿ ನಿನ್ನೆ ರಾತ್ರಿ ಸಂಭವಿಸಿರುವ ಅಪಘಾತದ ನಂತರ ಈ ಮಾರ್ಗದ ರೈಲು ಸಂಚಾರದಲ್ಲಿ ಭಾರಿ ಅಡಚಣೆ ಎದುರಾಗಿದೆ. ಹೀಗಾಗಿ 49 ರೈಲುಗಳು ರದ್ದಾಗಿದ್ದು, 38 ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಇದು ಪ್ರಯಾಣಿಕರಿಗೆ ಮತ್ತೊಂದು ಸಂಕಷ್ಟ ತಂದೊಡಿತ್ತು ಹಾಗಾದ್ರೆ ಯಾವೆಲ್ಲಾ ರೈಲುಗಳು ರದ್ದಾಗಿವೆ, ಯಾವ ಮಾರ್ಗದಲ್ಲಿ ಬದಲಾವಣೆ ಆಗಿದೆ? ಆ ಬಗ್ಗೆ ಮಾಹಿತಿ ಇಲ್ಲಿದೆ.

 

ದೇಹ ನೋಡಿ ಸಂಬಂಧಿಕರ ಕಣ್ಣೀರು ಈಗಾಗಲೇ 240ಕ್ಕೂ ಹೆಚ್ಚು ಜನ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದು, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಿದೆ. ಕೋರಮಂಡಲ್ ಎಕ್ಸ್‌ಪ್ರೆಸ್ ಅಪಘಾತದಲ್ಲಿ ಮೃತಪಟ್ಟಿರುವವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಮತ್ತು ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರಿಗೆ 2 ಲಕ್ಷ ರೂ ಸೇರಿ ಸಣ್ಣಪುಟ್ಟ ಗಾಯದೊಂದಿಗೆ ನರಳುತ್ತಿರುವ ಪ್ರಯಾಣಿಕರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಮೃತರ ಸಂಬಂಧಿಕರು ತಮ್ಮವರ ಮೃತ ದೇಹಗಳನ್ನ ನೋಡಿ ಕಣ್ಣಿರು ಹಾಕುತ್ತಿರುವ ದೃಶ್ಯ ಮನಸ್ಸು ಹಿಂಡುವಂತಿದೆ.

 

‘ಕವಚ’ ಇರಲೇ ಇಲ್ಲ ಎಂದ ಅಧಿಕಾರಿಗಳು ಅಂದಹಾಗೆ ಒಡಿಶಾ ಅಪಘಾತ & ‘ಕವಚ’ ತಂತ್ರಜ್ಞಾನದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಮಾಹಿತಿ ನೀಡಿರುವಂತೆ, ‘ರಕ್ಷಣಾ ಕಾರ್ಯಾಚರಣೆ ಪೂರ್ಣ ಮುಗಿದಿದ್ದು, ಮುಂದಿನ ಕಾರ್ಯ ಆರಂಭಿಸುತ್ತಿದ್ದೇವೆ. ಈ ಮಾರ್ಗದಲ್ಲಿ ಕವಚ ತಂತ್ರಜ್ಞಾನ ಲಭ್ಯವಿರಲಿಲ್ಲ’ ಎಂದು ಭಾರತೀಯ ರೈಲ್ವೆ ಇಲಾಖೆ ವಕ್ತಾರ ಅಮಿತಾಭ್ ಶರ್ಮಾ ಅವರು ಮಾಹಿತಿ ನೀಡಿದ್ದಾರೆ. ಈ ಮೂಲಕ ‘ಕವಚ’ ತಂತ್ರಜ್ಞಾನದ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ರೈಲ್ವೆ ಇಲಾಖೆ ಉತ್ತರ ನೀಡಿದಂತಾಗಿದೆ.

 

ಒಟ್ನಲ್ಲಿ ದೇಶದ ಇತಿಹಾಸದಲ್ಲೇ ಈ ದುರಂತ ಭೀಕರ ಅಧ್ಯಾಯ. ಹೀಗಾಗಿ ರೈಲ್ವೆ ಇಲಾಖೆ ಕೂಡ ಹಗಲು, ಇರುಳು ಎನ್ನದೆ ಪರಿಹಾರ ಕಾರ್ಯಾಚರಣೆ ನಡೆಸುತ್ತಿದೆ. ಇನ್ನೊಂದ್ಕಡೆ ಒಡಿಶಾದ ಜನರು ಕೂಡ ಗಾಯಾಳುಗಳು ಹಾಗೂ ಮೃತರ ಸಂಬಂಧಿಕರ ನೆರವಿಗೆ ಬಂದು, ಸಹಾಯ ಮಾಡುತ್ತಿದ್ದಾರೆ. ದುರಂತ ಸಂಭವಿಸಿರುವ ಸ್ಥಳದಲ್ಲಿ ರೈಲ್ವೆ ಹಳಿಯು ಕೂಡ ಸಂಪೂರ್ಣ ರಕ್ತದಲ್ಲಿ ಮಿಂದು ಹೋಗಿದೆ.

ಇದನ್ನೂ ಓದಿ...

Back to top button
>