ರಾಜಕೀಯರಾಜ್ಯ

ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್: KMFನಿಂದ ಹಾಲಿನ ಶೇಖರಣೆ ದರ ಕಡಿತ ಆದೇಶ ವಾಪಾಸ್

Good news for milk producers: KMF withdraws milk storage rate reduction order

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಕೆಎಂಎಫ್ ನಿಂದ ಹಾಲು ಉತ್ಪಾದರಿಗೆ ಹಾಲಿನ ಶೇಖರಣೆ ದರವನ್ನು ಪ್ರತಿ ಲೀಟರ್ ಗೆ ರೂ.1.50ಗಳನ್ನು ಕಡಿಮೆ ಮಾಡಲಾಗಿತ್ತು. ಈಗ ಈ ಆದೇಶವನ್ನು ಹಿಂಪಡೆದಿದ್ದು, ಹಿಂದಿನಂತೆ ಮುಂದುವರೆಸುವ ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತಂತೆ ಕರ್ನಾಟಕ ಸಹಕಾರ ಹಾಲು ಉತ್ಪದಕ ಮಹಾಮಂಡಳ ನಿಯಮಿತದ ವ್ಯವಸ್ಥಾಪಕ ನಿರ್ದೇಶದರು ನಿರ್ದೇಶವನ್ನು ನೀಡಿದ್ದಾರೆ. ಅದರಲ್ಲಿ ದಿನಾಂಕ 30-05-2023ರಿಂದ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಹಾಲು ಉತ್ಪಾದಕರಿಗೆ ದಿನಾಂಕ 01-06-2023ರಿಂದ ಅನ್ವಯವಾಗುವಂತೆ ಹಾಲಿನ ಶೇಖರಣೆ ದರವನ್ನು ಪ್ರತಿ ಲೀಟರ್ ಗೆ ರೂ.1.50ಗಳನ್ನು ಕಡಿಮೆ ಮಾಡಲಾಗಿತ್ತು ಎಂದಿದ್ದಾರೆ.

ಈ ಬಗ್ಗೆ ಸರ್ಕಾರವು ಗಮನಿಸಿದ್ದು, ಹಾಲು ಉತ್ಪಾದಕರ ಹಿತದೃಷ್ಠಿಯಿಂದ ದರವನ್ನು ಈ ಹಿಂದಿನಂತೆ ಮುಂದುವರೆಸಲು ಮುಖ್ಯಮಂತ್ರಿಗಳು ನಿರ್ದೇಶಿಸಿರುತ್ತಾರೆ ಎಂದು ಹೇಳಿದ್ದಾರೆ.

ಸಿಎಂ ನಿರ್ದೇಶನದ ಮೇರೆಗೆ ಹೈನುಗಾರ ರೈತರ ಹಿತದೃಷ್ಠಿಯಿಂದ ಇಂದೇ ಪ್ರತಿ ಲೀಟರ್ ಗೆ ರೂ.1.50ಗಳನ್ನು ಕಡಿಮೆ ಮಾಡಿರುವ ಆದೇಶವನ್ನು ಹಿಂಪಡೆದು, ಪ್ರತಿ ಲೀಟರ್ ಗೆ ಹಿಂದಿನ ದರದಂತೆ ರೂ.34ಗಳನ್ನು ನಿಗದಿಪಡಿಸಿ ವರದಿಸಲು ಸೂಚಿಸಿದ್ದಾರೆ.
ಅಧಿಕಾರಿಗಳ ಅಮಾನತಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಆದೇಶ

ಪ್ರಭಾವಿ ಅಪಾರ್ಟ್ಮೆಂಟ್ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ, ಅನುಷ್ಠಾನಕ್ಕೆ ತಂದ ಎಲ್ಲ ಅಧಿಕಾರಿಗಳು, ಇಂಜಿನಿಯರ್ ಗಳನ್ನು ಇವತ್ತು ಸಂಜೆ ಒಳಗೆ ಸೇವೆಯಿಂದ ಅಮಾನತು ಮಾಡುವಂತೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದರು.

ಈ ಕೆರೆ ಮಧ್ಯೆ ರಸ್ತೆ ನಿರ್ಮಾಣ ಮಾಡುವ ಐಡಿಯಾ ಕೊಟ್ಟವರು ಯಾರು? ಯೋಜನೆ ರೂಪಿಸಿದವರು ಯಾರು? ಅನುಷ್ಠಾನಕ್ಕೆ ತಂದವರು ಯಾರು? ಯಾಕಾಗಿ ಇದನ್ನು ಮಾಡಿದಿರಿ? ಯಾರಿಗೆ ಅನುಕೂಲ ಮಾಡಿಕೊಡಲು ಮಾಡಿದಿರಿ? ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದೀರಿ ಎಂದು ಶಿವಕುಮಾರ್ ಅವರು ಸಭೆಯಲ್ಲಿ ಪ್ರಶ್ನಿಸಿದರು.

ಅಧಿಕಾರಿಗಳು ಇದಕ್ಕೆ ಉತ್ತರಿಸಲು ತಡಬಡಾಯಿಸಿದರು. ತಕ್ಷಣವೇ ಉಪಮುಖ್ಯಮಂತ್ರಿಗಳು ಹೊಸಕೆರೆಹಳ್ಳಿ ಕೆರೆ ಭಾಗ ಮಾಡಿ ರಸ್ತೆ ನಿರ್ಮಾಣ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸೂಚನೆ ನೀಡಿದರು

ಇದನ್ನೂ ಓದಿ...

Back to top button
>