ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗುವಾಹಟಿಯು JEE Advanced 2023 result ಫಲಿತಾಂಶವನ್ನು ಜೂನ್ 18, 2023ರಂದು jeeadv.ac.in ಪ್ರಕಟಿಸಲಿದೆ. ಈ ಜಂಟಿ ಪ್ರವೇಶ ಪರೀಕ್ಷೆ ಬರೆದ ಅಭ್ಯರ್ಥಿಗಳು ವೆಬ್ದಸೈಟ್ನಲ್ಲಿ ಜೂನ್ 18ರಂದು ವೀಕ್ಷಿಸಬಹುದಾಗಿದೆ.
ಜೆಇಇ ಅಡ್ವಾನ್ಸಡ್ 2023 ಪರೀಕ್ಷೆಯು ಜೂನ್ 4, 2023ರಂದು ಎರಡು ಶಿಫ್ಟ್ನಲ್ಲಿ ನಡೆದಿತ್ತು. ಪೇಪರ್ 1 ಪರೀಕ್ಷೆಯು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆದಿತ್ತು. ಪತ್ರಿಕೆ 2 ಅನ್ನು ಮಧ್ಯಾಹ್ನ 2.30 ರಿಂದ 5.30 ರವರೆಗೆ ನಡೆಸಲಾಗಿತ್ತು. ಪ್ರತಿಕ್ರಿಯೆ ಪ್ರತಿ (ರೆಸ್ಪಾನ್ಸ್ ಶೀಟ್) ಜೂನ್ 9, 2023 ರಂದು ವೆಬ್ಸೈಟ್ನಲ್ಲಿ ಲಭ್ಯವಿತ್ತು. ಪರೀಕ್ಷೆಯ ಕೀ ಉತ್ತರವನ್ನು ಜೂನ್ 11, 2023 ರಂದು ಬಿಡುಗಡೆ ಮಾಡಲಾಗಿದೆ. ಆಕ್ಷೇಪಣೆಗಳನ್ನು ಸಲ್ಲಿಸಲು ಜೂನ್ 12, 2023 ಕೊನೆಯ ದಿನವಾಗಿತ್ತು.
ಜೆಇಇ ಅಡ್ವಾನ್ಸಡ್ ಫಲಿತಾಂಶವನ್ನು ವೀಕ್ಷಿಸುವುದು ಹೇಗೆ?
ಜೆಇಇ ಅಡ್ವಾನ್ಸಡ್ ಫಲಿತಾಂಶ ವೀಕ್ಷಣೆಗೆ ಈ ಮುಂದಿನ ಹಂತಗಳನ್ನು ಅನುಸರಿಸಿ.
ಮೊದಲಿಗೆ ಜೆಇಇ ಅಧಿಕೃತ ವೆಬ್ಸೈಟ್ jeeadv.ac.in ಗೆ ಭೇಟಿ ನೀಡಿ.
JEE Advanced 2023 Result ಲಿಂಕ್ ಅನ್ನು ಕ್ಲಿಕ್ ಮಾಡಿ. ಈ ಲಿಂಕ್ ಮುಖಪುಟದಲ್ಲಿ ಲಭ್ಯವಿರುತ್ತದೆ.
ಲಾಗಿನ್ ವಿವರ ನೀಡಿ ಫಲಿತಾಂಶ ವೀಕ್ಷಿಸಿ.
ಫಲಿತಾಂಶದ ಮಾಹಿತಿಯನ್ನು ಡೌನ್ಲೋಡ್ ಮಾಡಿ.
ಭವಿಷ್ಯದ ಉಪಯೋಗಕ್ಕಾಗಿ ಪ್ರಿಂಟೌಟ್ ತೆಗೆದುಕೊಳ್ಳಿ.
ಫಲಿತಾಂಶದ ಜತೆಗೆ ಅಂತಿಮ ಕೀ ಉತ್ತರಗಳನ್ನೂ ಪ್ರಕಟಿಸಲಾಗುತ್ತದೆ. ಹೆಚ್ಚಿನ ವಿವರಕ್ಕಾಗಿ ಅಭ್ಯರ್ಥಿಗಳು ಜೆಇಇ ವೆಬ್ಸೈಟ್ಗೆ ಭೇಟಿ ನೀಡಿ.
ನಿಖರತೆ ಮತ್ತು ಸ್ಪಷ್ಟತೆ ನನ್ನ ಯಶಸ್ಸಿನ ಗುಟ್ಟು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಫಲಿತಾಂಶ ಪ್ರಕಟಿಸಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ನಟರಾಜ್ ಕುಮಾರ್ ಕರ್ನಾಟಕಕ್ಕೆ ಮೊದಲ ರ್ಯಾಂಕ್ (ಶೇಕಡ 96.111) ಪಡೆದಿದ್ದಾರೆ. ಇವರು ಬೆಂಗಳೂರಿನ ಉತ್ತರ ಹಳ್ಳಿಯ ಕುಮಾರನ್ ಚಿಲ್ಡ್ರನ್ಸ್ ಹೋಂನ ವಿದ್ಯಾರ್ಥಿ. ಸಿಇಟಿಯಲ್ಲಿ ಮೊದಲ ರ್ಯಾಂಕ್ ಪಡೆದ ಹಿಂದಿನ ಶ್ರಮ, ಸಾಧನೆಯ ಗುಟ್ಟನ್ನು ಇವರು ಹಿಂದೂಸ್ತಾನ್ ಟೈಮ್ಸ್ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ. ಸಿಇಟಿ ಅಥವಾ ಇತರೆ ಯಾವುದೇ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಸ್ಪೂರ್ತಿಯಾಗುವಂತಹ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.
ಸಿಇಟಿ ಸಾಧಕನಿಗೆ ಐಐಟಿಯಲ್ಲಿ ಶಿಕ್ಷಣ ಪಡೆಯುವ ಕನಸು
ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಸಿಇಟಿ 2023 ಫಲಿತಾಂಶ ಪ್ರಕಟಿಸಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ ಹತ್ತನೇ ರಾಂಕ್ ಪಡೆದ ಭುವನ್ ಕೆ ಪ್ರಸಾದ್ ಜತೆ ಹಿಂದೂಸ್ತಾನ್ ಟೈಮ್ಸ್ ಕನ್ನಡ ಸಂದರ್ಶನ ನಡೆಸಿದೆ. ಸಿಇಟಿ ಸಾಧನೆಗೆ ಪೂರಕವಾದ ಅಂಶಗಳು, ಮುಂದಿನ ಕನಸನ್ನು ಅವರು ಇಲ್ಲಿ ಹೇಳಿದ್ದಾರೆ. ಭುವನ್ ಯಶಸ್ಸಿನ ಕುರಿತು ಅವರ ರೇವತಿಯೂ ಮಾತನಾಡಿದ್ದಾರೆ. ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ಕೌನ್ಸೆಲಿಂಗ್ ಕುರಿತು ಮಹತ್ವದ ಮಾಹಿತಿ
ಬಹುನಿರೀಕ್ಷಿತ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ನ್ಯಾಚೋರಪತಿ ಮತ್ತು ಯೋಗ ವಿಭಾಗದಲ್ಲಿ ಪ್ರತೀಕ್ಷ ಆರ್, ಬಿಎಸ್ಸಿ ನರ್ಸಿಂಗ್ ವಿಭಾಗದಲ್ಲಿ ಮಾಲವಿಕ ಕಪೂರ್ ಅಗ್ರ ಸ್ಥಾನ ಪಡೆದಿದ್ದಾರೆ. ತ್ತಿಪರ ಕೋರ್ಸ್ಗಳ ಪ್ರವೇಶಾತಿಗೆ ನಡೆದ ಸಿಇಟಿ ಪರೀಕ್ಷಾ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಪ್ರಕಟಿಸಿದ್ದು, ಈ ಸಂದರ್ಭದದಲ್ಲಿ ಕೌನ್ಸೆಲಿಂಗ್ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.