ರಾಜಕೀಯರಾಜ್ಯ

ರಾಜ್ಯಾದ್ಯಂತ `ಕಾವೇರಿ-2 ತಂತ್ರಾಂಶ’ ಜಾರಿ : ಇನ್ಮುಂದೆ `ಆಸ್ತಿ ನೋಂದಣಿ’ ಮತ್ತಷ್ಟು ಸುಲಭ

Implementation of 'Kaveri-2 software' across the state: From now on, 'property registration' will be easier

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು : ನೋಂದಣಿ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದ್ದು, ರಾಜ್ಯದ 251 ನೋಂದಣಿ ಕಚೇರಿಗಳಲ್ಲಿ ಇಂದು ಸಂಜೆಯೊಳಗೆ ಕಾವೇರಿ -2 ತಂತ್ರಾಂಶ ಜಾರಿಯಾಗಲಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ ನಿಂದ ಕಾವೇರಿ-2 ನೋಂದಣಿ ಪ್ರಕ್ರಿಯೆ ಅಳವಡಿಸಲಾಗಿದೆ.

251 ನೋಂದಣಿ ಕಚೇರಿಗಳಲ್ಲಿ ಇಂದು ಸಂಜೆಯೊಳಗೆ ಕಾವೇರಿ-2 ತಂತ್ರಾಂಶ ಜಾರಿಯಾಗಲಿದೆ. ಎಲ್ಲಾ ದಾಖಲೆಗಳನ್ನು ಕಾವೇರಿ-2 ತಂತ್ರಾಂಶದಲ್ಲಿ ಸಲ್ಲಿಕೆ ಮಾಡಬಹುದು. ಸಬ್ ರಿಜಿಸ್ಟ್ರಾರ್ ಕೂಡ ಅನ್ ಲೈನ್ ನಲ್ಲಿ ಮಾಡಬಹುದು. ನೋಂದಣಿ ಶುಲ್ಕವನ್ನು ಆನ್ ಲೈನ್ ನಲ್ಲೇ ಸಲ್ಲಿಕೆ ಮಾಡಬಹುದು. ಇದರಿಂದ ಜಮೀನು ಅಕ್ರಮವನ್ನು ತಡೆಯಬಹುದು. ಯಾರದ್ದೋ ಜಮೀನು ಯಾರಿಗೋ ನೋಂದಣಿ ಮಾಡಲು ಆಗಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ...

Back to top button
>