ಟಿಪ್ಪು ಜನರನ್ನು ಒಗ್ಗೂಡಿಸಿದ್ದರೇ ವಿನಃ ಒಡೆದಿರಲಿಲ್ಲ: ಬಸವಲಿಂಗ ಸ್ವಾಮೀಜಿ
Tipu united the people and did not divide them: Basavalinga Swamiji
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಟಿಪ್ಪು ಸುಲ್ತಾನ್ ಮಾಡಿದ್ದು ಸೂಜಿ ಕೆಲಸವೇ ಹೊರತು ಕತ್ತರಿ ಕೆಲಸವಲ್ಲ, ಎಂದಿಗೂ ಜನರನ್ನು ಒಡೆಯುವ ಕೆಲಸ ಮಾಡಿರಲಿಲ್ಲ ಎಂದು ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ. ಮೈಸೂರು: ಟಿಪ್ಪು ಸುಲ್ತಾನ್ ಮಾಡಿದ್ದು ಸೂಜಿ ಕೆಲಸವೇ ಹೊರತು ಕತ್ತರಿ ಕೆಲಸವಲ್ಲ, ಎಂದಿಗೂ ಜನರನ್ನು ಒಡೆಯುವ ಕೆಲಸ ಮಾಡಿರಲಿಲ್ಲ ಎಂದು ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ಮೀಲಾದ್ ಉದ್ಯಾನವನದಲ್ಲಿ ಭಾನುವಾರ ನಡೆದ ಟಿಪ್ಪು ಸುಲ್ತಾನರ 231ನೇ ವರ್ಷದ ಸಂದಲ್ ಉರುಸ್ ಶರೀಫ್ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಟಿಪ್ಪು ಸುಲ್ತಾನ್ ಅವರನ್ನು ಕೊಂಡಾಡಿದರು.
ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಕುರಿತು ಚರ್ಚಿಸಿ ನಿರ್ಧಾರ: ಎಂಬಿ ಪಾಟೀಲ್
ದಲಿತರಿಗೆ ಭೂಮಿಯ ಹಕ್ಕು ನೀಡಿದ ಮೊದಲ ವ್ಯಕ್ತಿ ಟಿಪ್ಪು. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಕೇರಳ, ತಮಿಳುನಾಡು ಮತ್ತು ಆಂಧ್ರದಲ್ಲೂ ಅವರು ದಲಿತರಿಗೆ ಭೂಮಿಯ ಹಕ್ಕುಗಳನ್ನು ನೀಡುವುದನ್ನು ಖಚಿತಪಡಿಸಿದ್ದರು. ಮರಾಠರ ಲೂಟಿಯ ಸಮಯದಲ್ಲಿ ಶೃಂಗೇರಿಯ ಶ್ರೀಗಳಿಗೆ ಸುರಕ್ಷತೆಯನ್ನು ಒದಗಿಸಿದ್ದರು. ಸೌಹಾರ್ದತೆ ಇರುವಂತೆ ನೋಡಿಕೊಂಡರು. ಅವರಂತಹ ವ್ಯಕ್ತಿಯನ್ನು ಸ್ಮರಿಸುವಂತಾಗಬೇಕು ಎಂದು ಹೇಳಿದರು.