ರಾಜ್ಯವಾಹನ

ಸೀಟಿಗಾಗಿ ಜುಟ್ಟು ಹಿಡಿದು ಬಡಿದಾಡಿಕೊಂಡ ನೀರೆಯರು: ಬಸ್ ನಲ್ಲಿ ನಾರಿ ‘ಶಕ್ತಿ’ ಅನಾವರಣ

People who jostled for a seat: Nari 'Shakti' unveiled in the bus

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಹೆಣ್ಮಕ್ಕಳಿಗೆ ಭಾರೀ ಲಾಭ ಕೊಟ್ಟಿದೆ. ಆದರೆ ಹಲವೆಡೆ ಪ್ರಯಾಣಿಕರಿಗೆ ಅನೇಕ ರೀತಿಯ ಸಮಸ್ಯೆಗಳು ಎದುರಾಗಿವೆ. ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಹೆಣ್ಮಕ್ಕಳಿಗೆ ಭಾರೀ ಲಾಭ ಕೊಟ್ಟಿದೆ. ಆದರೆ ಹಲವೆಡೆ ಪ್ರಯಾಣಿಕರಿಗೆ ಅನೇಕ ರೀತಿಯ ಸಮಸ್ಯೆಗಳು ಎದುರಾಗಿವೆ.
ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಕೆಲವು ಗೊಂದಲಗಳು ಉಂಟಾಗುತ್ತಿವೆ ತಳ್ಳಾಟ, ನೂಕಾಟ ಸೇರದಂತೆ ಜಡೆ ಜಗಳ ಸಹ ನಡೆದಿದೆ. ಕೆಲವು ಭಾಗಗಳಲ್ಲಿ ತಳ್ಳಾಟ, ನೂಕಾಟದಿಂದ ಬಸ್ ಬಾಗಿಲು, ಕಿಟಕಿಯ ಸರಪಳಿ ಕಿತ್ತುಕೊಂಡು ಬಂದಿದೆ. ಅಷ್ಟೇ ಅಲ್ಲಇದೀಗ ಫ್ರೀ ಬಸ್​ನಲ್ಲಿ ಸೀಟ್​​ಗಾಗಿ ಮಾರಾಮಾರಿ ನಡೆದೇ ಬಿಟ್ಟಿದೆ. ಮಹಿಳೆಯರು ಸೀಟ್ ವಿಚಾರಕ್ಕೆ ಜುಟ್ಟು ಹಿಡಿದು ಬಡಿದಾಡಿಕೊಂಡಿದ್ದಾರೆ.

ಜಗಳ ಬಿಡಿಸಲು ಹೋದ ಗಂಡಸರು ಹೈರಾಣಗಿದ್ದಾರೆ. ಮೈಸೂರಿನ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಮಹಿಳಾ ಪ್ರಯಾಣಿಕರು ಜುಟ್ಟು ಹಿಡಿದು ಜಗಳವಾಡಿಕೊಳ್ಳಲಾಗಿದೆ. ಫ್ರೀ ಬಸ್​ನಲ್ಲಿ ಸೀಟ್ ಸಿಗದೇ ಜಟಾಪಟಿ ಹೆಚ್ಚಾಗುತ್ತಿದೆ. ಲೇಡೀಸ್​ ಸೀಟ್ ಫೈಟ್​ನ ದೃಶ್ಯ ಭಾರೀ ವೈರಲ್​ ಆಗುತ್ತಿದೆ.

ಇದನ್ನೂ ಓದಿ...

Back to top button
>