ಸಿನಿಮಾಸಿನಿಮಾ ಸುದ್ದಿ

ಪಬ್‌ನಲ್ಲಿ ಸಖತ್ತಾಗಿ ಕುಣಿದ ಡಾ. ರಾಜ್‌ ಮೊಮ್ಮಗಳು

In the pub, Dr. Granddaughter of Raj

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಡಾ. ರಾಜ್‌ ಮೊಮ್ಮಗಳು, ರಾಮ್‌ಕುಮಾರ್‌ ಮತ್ತು ಪೂರ್ಣಿಮಾ ದಂಪತಿಯ ಮಗಳು ಧನ್ಯಾ ರಾಮ್‌ಕುಮಾರ್‌, ಈಗಾಗಲೇ ಸಿನಿಮಾರಂಗ ಪ್ರವೇಶ ಪಡೆದಾಗಿದೆ. ಇದೀಗ ಹೊಸದಾಗಿ ಹಲವು ಸಿನಿಮಾಗಳನ್ನೂ ಒಪ್ಪಿಕೊಂಡು ಅದರ ಶೂಟಿಂಗ್‌ ಕೆಲಸಗಳಲ್ಲಿಯೂ ಅವರು ಬಿಜಿಯಾಗಿದ್ದಾರೆ. ಈ ನಡುವೆ ದಿ ಜಡ್ಜ್‌ಮೆಂಟ್‌ ಸಿನಿಮಾದ ಪಬ್‌ ಹಾಡಿನಲ್ಲಿ ಸಖತ್ತಾಗಿ ಸ್ಟೆಪ್‌ ಹಾಕಿದ್ದಾರೆ ಧನ್ಯಾ.

ನಿನ್ನ ಸನಿಹಕೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಪಡೆದಿದ್ದ ದೊಡ್ಮನೆ ನಟಿ ಧನ್ಯಾ ರಾಮ್‌ಕುಮಾರ್‌, ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರಗಳ ಶೂಟಿಂಗ್‌ ಕೆಲಸಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ.

ಇದೀಗ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ದಿ ಜಡ್ಜ್ ಮೆಂಟ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಆ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಇತ್ತೀಚೆಗಷ್ಟೇ ಆ ಚಿತ್ರದ ಹಾಡೊಂದರ ಶೂಟಿಂಗ್‌ ಮಾಡಲಾಯ್ತು.

ಇದನ್ನೂ ಓದಿ...

Back to top button
>