ರಾಜ್ಯ

ನಾನೂ ವಿಜಯ್, ಬಾಲ್ಯದ ಫ್ರೆಂಡ್ಸ್; ಸ್ಪಂದನಾ ಸಾವು ಕೇವಲ ಕುಟುಂಬಕ್ಕೆ ನೋವು ತಂದಿದ್ದಲ್ಲ: ಸಚಿವ ಪ್ರಿಯಾಂಕ ಖರ್ಗೆ

Nanoo Vijay, childhood friends; Spandana's death has not only brought pain to the family: Minister Priyanka Kharge

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ಮೊನ್ನೆ ಬ್ಯಾಂಕಾಕ್​ನಲ್ಲಿ ಮೃತಪಟ್ಟ ನಟಿ ಸ್ಪಂದನಾ, ಇಡೀ ಕನ್ನಡ ಸಿನಿಮಾರಂಗಕ್ಕೇ ಆಘಾತ ನೀಡಿದ್ದಾರೆ. ಮೃತದೇಹವನ್ನು ಇಂದು ಬೆಳಗ್ಗೆ ಏಳು ಗಂಟೆಯಿಂದ ಸಾರ್ವಜನಿಕರಿಗಾಗಿ ಇರಿಸಲಾಗಿದೆ.

 

ಈ ಘಟನೆಯಿಂದ ದೊಡ್ಡಮನೆ ಕುಟುಂಬಸ್ಥರಿಗೆ ಆಘಾತ ಉಂಟಾಗಿದ್ದು ಸಚಿವರು ಸೇರಿದಂತೆ ಅನೇಕ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಸಮಾಧಾನ ಹೇಳಲು ಪ್ರಯತ್ನಿಸಿದ್ದಾರೆ.

 

ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ

ಸಚಿವ ಪ್ರಿಯಾಂಕ್ ಖರ್ಗೆ, ‘ಸ್ಪಂದನಾ‌ ನಿಧನದಿಂದ ಕುಟುಂಬಕ್ಕೆ ಅಷ್ಟೇ ನಷ್ಟ ಆಗಿಲ್ಲ. ಅವರ ಸ್ನೇಹಿತರಿಗೂ ಕೂಡ ನಷ್ಟ ಉಂಟಾಗಿದೆ. ಬಹಳ ಸ್ನೇಹಜೀವಿ ಅವರು. ವಿಜಯ್ ರಾಘವೇಂದ್ರಗೆ ತುಂಬಲಾರದ ನಷ್ಟ ಇದು.

 

ನಾನು ವಿಜಯ್ ಬಾಲ್ಯದಿಂದ ಜೊತೆಗೆ ಓದಿದವರು. ಈ ಟೈಂನಲ್ಲಿ ವಿಜಯ್​ಗೆ ಏನ್ ಹೇಳಬೇಕು ಗೊತ್ತಾಗುತ್ತಿಲ್ಲ. ವಿಜಯ್, ಬೇರೆಯವರ ಗೆಲುವಿನಲ್ಲಿ ಸುಖವನ್ನುಕಾಣುವವರು. ಈ ಕಷ್ಟ ಕಾಲದಲ್ಲಿ ಅವರಿಗೆ ಹಾಗೂ ಕುಟುಂಬದವರಿಗೆ ನಷ್ಟ ಭರಿಸೋ ಶಕ್ತಿ ಕೊಡಲಿ.

 

ವಿಜಯ್ ರಾಘವೇಂದ್ರ ಯಾವುದು ತಾನೊಬ್ಬ ಸ್ಟಾರ್ ‘ಅನ್ನೋ ಅಹಂ ಇರಲಿಲ್ಲ. ಎರಡು ವಾರದ ಹಿಂದೆ ಪೋನ್ ಮಾಡಿದ್ರು. ‘ನಿನಗೆ ಸನ್ಮಾನ ಮಾಡಬೇಕು ಅಂತ ಕಾಲ್ ಮಾಡಿದ್ರು. ಮನೆಯವರು ಎಲ್ಲರೂ ಸೇರೋಣ ಅಂದಿದ್ದರು. ಆದರೆ ಮಂತ್ರಿಯಾದ ಬಳಿಕ ಸ್ವಲ್ಪ ಬ್ಯೂಸಿಯಾದೆ. ‘ ಎಂದಿದ್ದಾರೆ.

ಇದನ್ನೂ ಓದಿ...

Back to top button
>