ರಾಜಕೀಯರಾಜ್ಯ

ತಮಿಳುನಾಡಿನ ಕ್ಯಾತೆ ಸಲ್ಲದು, ಸಂಕಷ್ಟದ ಸೂತ್ರ ಪಾಲಿಸಬೇಕು; ಸಿಎಂ ಸಿದ್ದರಾಮಯ್ಯ

Tamil Nadu's Kathe is good, hardship should be followed; CM Siddaramaiah

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಮೈಸೂರು: ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದ ಮಳೆ ಆಗಿಲ್ಲ. ಆದ್ದರಿಂದ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಸಂಕಷ್ಟ ಸೂತ್ರವನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳೆರಡೂ ಪಾಲಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾವೇರಿ ನದಿ ಅಚ್ಚುಕಟ್ಟು ಪ್ರದೇಶದ ಜಲಾಶಯಗಳಲ್ಲಿ ನೀರಿಲ್ಲ. ಆದಾಗ್ಯೂ ತಮಿಳುನಾಡು ಸರ್ಕಾರವು ಕಾವೇರಿ ನದಿ ನೀರು ಬಿಡುವಂತೆ ಮತ್ತೆ ಕ್ಯಾತೆ ಆರಂಭಿಸಿದೆ. ಈ ಬಗ್ಗೆ ನಮ್ಮ ತಜ್ಞರ ಜತೆಗೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.

ಈ ಬಾರಿ ಸರಿಯಾಗಿ ಮಳೆಯಾಗದೇ ನಮಗೇ ತೊಂದರೆಯಾಗಿದೆ. ಕೇರಳ ಹಾಗೂ ಕೊಡಗಿನಲ್ಲಿ ಮಳೆ ಕಡಿಮೆಯಾಗಿದ್ದು, ನಮ್ಮ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ. ಹೆಚ್ಚುವರಿ ನೀರು ಬಂದಾಗಲೆಲ್ಲಾ ಅಲ್ಲಿಗೆ ಹರಿಸುತ್ತಿದ್ದೆವು. ಈ ಬಾರಿ ಕೊಡಲಾಗಿಲ್ಲ. ನಾವು ಹೆಚ್ಚುವರಿ ನೀರು ಹರಿಸಿಲ್ಲವೆಂದು ತಮಿಳುನಾಡು ತಗಾದೆ ತೆಗೆದಿದೆ. ನಮ್ಮ ಪರಿಸ್ಥಿತಿ ಹಾಗೂ ಬೆಳೆಯನ್ನೂ ನೋಡಬೇಕಲ್ಲಾ?’ ಎಂದು ತಿಳಿಸಿದರು.

ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರು, ಅಕ್ಟೋಬರ್ ವರೆಗೆ ತಿಂಗಳಿಗೆ 15 ದಿನ ನೀರು ಬಿಡಲಾಗುವುದು. ಈ ಮುಂಗಾರಿನಲ್ಲಿ ಇದೂವರೆಗೆ 1829.1ಮಿ.ಮೀ ಮಳೆಯಾಗಬೇಕಿದ್ದ ಕಬಿನಿ ಜಲಾನಯನ ಪ್ರದೇಶದಲ್ಲಿ ಕೇವಲ 881ಮಿ.ಮೀ ಮಳೆಯಾಗಿದೆ. ಇಜಕಿಂಜ ಶೇ.52ರಷ್ಟು ಕೊರತೆಯಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಡಿಸೆಂಬರ್‌ವರೆಗೆ ನೀರಾವರಿಗೆ ನೀರು ಬಿಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಮತ್ತು ಇತರ ಪಟ್ಟಣಗಳ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ಕಬಿನಿಯಿಂದ 6.5 ಟಿಎಂಸಿ ಅಡಿ ನೀರಿನ ಅಗತ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ...

Back to top button
>