ನಟಿ ನಿತ್ಯಾ ಮೆನನ್ ಮದುವೆ ಫಿಕ್ಸ್ : ವರ ಯಾರು ಗೊತ್ತಾ..!
Actress Nithya Menon's marriage fix: Who is the groom?
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಾಲು ಸಾಲು ಮದುವೆಗಳಾಗುತ್ತಿವೆ. ಈ ವರ್ಷ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಮದುವೆಯಾಗಿ ಸುದ್ದಿಯಾಗಿದ್ದರು. ಈ ಸಾಲಿನಲ್ಲಿ ಕಳೆದ ಕೆಲವು ವರ್ಷಗಳಿಂದ ನಾಯಕಿ ನಿತ್ಯಾ ಮೆನನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.
ಸಧ್ಯ ಈ ಕುರಿತು ಅಪ್ಡೇಟ್ಸ್ ಇಲ್ಲಿದೆ ನೋಡಿ..
ಹೌದು.. ನಟಿ ನಿತ್ಯಾ ಮೆನನ್ ಯಾರನ್ನೋ ಪ್ರೀತಿಸುತ್ತಿದ್ದು, ಮದುವೆಗೆ ಸಕಲ ಸಿದ್ದತೆ ನಡೆಸಿದ್ದಾರೆ ಎಂಬ ವದಂತಿ ಹಬ್ಬಿದ ಹಿನ್ನಲೆಯಲ್ಲಿ ಕೆಲವರು ನಿಜ ಎಂದು ಭಾವಿಸಿದ್ದರು. ಆದರೆ ಕೆಲವು ವರ್ಷಗಳ ಹಿಂದೆ ನಿತ್ಯಾ ಮೆನನ್ ಮದುವೆ ಸುದ್ದಿಯನ್ನು ನಿರಾಕರಿಸಿದ್ದರು. ಅಲ್ಲದೆ, ಈಗ ಮದುವೆ ಆಗುತ್ತಿಲ್ಲ, ಮದುವೆಯಾಗಬೇಕು ಅಂತ ನಿರ್ಧಾರ ಮಾಡಿದಾಗ ನಿಮ್ಗೆ ಮೊದಲು ಹೇಳ್ತೀನಿ ಅಂತ ಮಾಧ್ಯಮದವರಿಗೆ ಹೇಳಿದ್ದರು.