ರಾಜ್ಯವಿಶೇಷ

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಓದಿ ತುಂಟ ಕೃಷ್ಣನ ಬಾಲ್ಯದ ಒಂದು ಕಥೆ, ಅಮ್ಮನ ಕೋಪ, ಕೃಷ್ಣನಿಗೆ ತಡೆಯಲಾಗದ ಹಸಿವು

Read on Srikrishna Janmashtami A story of Krishna's childhood, mother's anger, Krishna's unstoppable hunger

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಕೃಷ್ಣನ ಬಾಲ್ಯದ ಕತೆಗಳೆಂದರೆ ಎಲ್ಲರಿಗೂ ಇಷ್ಟ. ಬಾಲ್ಯದ ತುಂಟಾಟ, ಬುದ್ಧಿವಂತಿಕೆಯ ಮೂಲಕ ಬಾಲ ಕೃಷ್ಣನ ಕತೆಗಳು ಬೆರಗು ಹುಟ್ಟಿಸುತ್ತವೆ. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತುಂಟ ಕೃಷ್ಣನ ಬಾಲ್ಯದ ಕತೆಯೊಂದನ್ನು ಓದೋಣ.

ಸಾಮಾನ್ಯವಾಗಿ ಹಠ ಮಾಡುವ ಮಕ್ಕಳನ್ನು ಬಾಲಕೃಷ್ಣನಿಗೆ ಹೋಲಿಸುತ್ತಾರೆ. ಅಂದರೆ ಪಾಂಡವರ ಬೆನ್ನೆಲುಬಾಗಿ ಪರೋಕ್ಷವಾಗಿ ಕೌರವರ ಅವನತಿಗೆ ಕಾರಣವಾದ ಶ್ರೀ ಕೃಷ್ಣ ತನ್ನ ಭಾಗ್ಯದಲ್ಲಿ ಅನೇಕ ತುಂಟಾಟಗಳಿಗೆ

ಕಾರಣೀಭೂತನಾಗುತ್ತಾನೆ. ಇಂದಿಗೂ ಬುದ್ಧಿವಂತಿಕೆಯಿಂದ ತುಂಟಾಟ ತೋರುವ ಮಕ್ಕಳನ್ನು ನಾವು ಶ್ರೀಕೃಷ್ಣನಿಗೆ ಹೋಲಿಸುತ್ತೇವೆ. ಶ್ರೀ ಕೃಷ್ಣನ ಜನ್ಮವೇ ಒಂದು ರೋಚಕ ಕಥೆ. ಜನ್ಮದಿಂದಲೇ ಅಪಾಯಗಳನ್ನು ಎದುರಿಸುತ್ತಾ ಬದುಕಿದವನು ಶ್ರೀಕೃಷ್ಣ. ಆದರೆ ಅಂತಿಮ ಹಣಾಹಣಿಯಲ್ಲಿ ಪೂತನಿಯಂತಹ ಅನೇಕ ರಾಕ್ಷಸರನ್ನು ಸೋಲಿಸುತ್ತಾನೆ.

ಬಾಹ್ಯರೂಪಿ ಶ್ರೀ ಕೃಷ್ಣನ ರಾಕ್ಷಸರ ವಿರುದ್ಧದ ಗೆಲುವು ನಮಗೆ ಒಂದು ರೀತಿಯ ಆನಂದವನ್ನು ನೀಡುತ್ತದೆ. ಅಂದರೆ ಕಷ್ಟದಲ್ಲಿಯೂ ಆತಂಕದ ಪರಿಸ್ಥಿತಿಯಲ್ಲಿಯೂ ನಗಬೇಕೆಂಬ ಪಾಠವನ್ನು ಕಲಿಸಿದವನು ಶ್ರೀಕೃಷ್ಣ.

ಕೃಷ್ಣನ ಬಾಲ್ಯದಲ್ಲಿ ಕೇವಲ ರಾಕ್ಷಸರನ್ನು ಕೊಲ್ಲುವುದೇ ಕೆಲಸವಾಗುವುದಿಲ್ಲ. ಅದರ ಬದಲಾಗಿ ಅನೇಕ ಹಾಸ್ಯ ಪ್ರಸಂಗಗಳು ಎದುರಾಗಿವೆ. ಉದಾಹರಣೆಗೆ ತಾನು ಬೆಣ್ಣೆ ಕದ್ದು ತಿಂದು ತನ್ನ ಸಹಚರರನ್ನು ತಪ್ಪಿತಸ್ಥರನ್ನಾಗಿ ಮಾಡುವುದು ದೊಡ್ಡ ವಿನೋದವೇ ಸರಿ. ಕಂಸ ಎದುರಿಗೆ ಇದ್ದರೂ ಕೂಡ ಕೃಷ್ಣನನ್ನು ಗುರುತಿಸಲಾಗದೆ ಹೋಗುತ್ತಾನೆ. ಕಂಸನನ್ನು ಮಾತಿನಲ್ಲಿ ಕೆರಳಿಸುವ ರೀತಿ ಅತಿರೋಚಕ.

 

ತಾಯಿಗೆ ಕೃಷ್ಣನೆಂದರೆ ಅತಿ ಮುದ್ದು. ಹಾಗೆಯೇ ಕೃಷ್ಣನಿಗೆ ತಾಯಿ ಎಂದರೆ ಬಲು ಪ್ರೀತಿ. ಕೃಷ್ಣನಿಗೆ ತಿನ್ನುವ ಹಂಬಲ ಚಪಲ ಸದಾ ಇರುತ್ತದೆ. ಕೃಷ್ಣನು ಮಾಡಿದ ಒಂದು ಚಿಕ್ಕ ತಪ್ಪಿಗೆ ತಾಯಿಯು ಪ್ರೀತಿಯಿಂದ ತಿನ್ನಲು ತಿಂಡಿಯನ್ನು ನೀಡದೆ ಶಿಕ್ಷೆಯನ್ನು ನೀಡಿರುತ್ತಾರೆ. ಆಗ ಶ್ರೀಕೃಷ್ಣನು ಮುನಿಸಿನಿಂದ ಮನೆಯ ಹೊರ ಭಾಗದ ಜಗಲಿಯ ಮೇಲೆ ಕುಳಿತಿರುತ್ತಾನೆ.

 

ವ್ಯಾಪಾರ ವ್ಯವಹಾರಗಳಿಗೆ ಆ ದಿನಗಳಲ್ಲಿ ಹಣಕಾಸಿನ ವ್ಯವಹಾರ ಇಂದಿನಂತೆ ಇರಲಿಲ್ಲ. ಆ ದಿನಗಳಲ್ಲಿ ಕೊಟ್ಟು ತರುವ ವ್ಯವಹಾರ. ಅಂದರೆ ಹಣದ ಬದಲಾಗಿ ನಮ್ಮ ಬಳಿ ಇರುವ ಯಾವುದಾದರೂ ಆಹಾರ ಧಾನ್ಯ ಮುಂತಾದವುಗಳನ್ನು ನೀಡಿ ಅವರ ಬಳಿ ಇರುವ ಯಾವುದೋ ಆಹಾರ ಪದಾರ್ಥ ಅಥವಾ ವಸ್ತುಗಳನ್ನು ಕೊಳ್ಳುವುದು. ದೈನಂದಿನ ಸಂಪ್ರದಾಯ. ಹುಸಿ ಕೋಪ ತೋರಿ ಕೃಷ್ಣನು ಹೊರ ಬಂದಿರುತ್ತಾನೆ. ಆದರೆ ಪಾಪ ಆ ಮಗುವಿನ ಹೊಟ್ಟೆ ಕೇಳಬೇಕೆ. ತಾಯಿಯ ಮೇಲಿನ ಸಿಟ್ಟಿನ ಹಿಂದೆಯೇ ಅತಿಯಾದ ಹಸಿವೆ ಆರಂಭವಾಗುತ್ತದೆ. ಆದರೆ ಕೃಷ್ಣನು ಸೋಲಲು ಸಿದ್ಧನಿರುವುದಿಲ್ಲ. ಸದಾ ಜೀವದ ಜೊತೆಯಲ್ಲಿ ಇರುತ್ತಿದ್ದ ಸ್ನೇಹಿತರು ಭಯದಿಂದ ಸಹಾಯ ಮಾಡದೆ ಹೋಗುತ್ತಾರೆ.

ಆದರೆ ಕೃಷ್ಣ ತಲೆ ಯಾವುದೋ ಯೋಚನೆಯನ್ನು ಮಾಡುತ್ತಿರುತ್ತದೆ. ಕೃಷ್ಣನಿಗೆ ಇಷ್ಟವಿಲ್ಲ ಎಂಬ ಯಾವುದೇ ಆಹಾರ ಪದಾರ್ಥಗಳು ಇರಲಿಲ್ಲ. ಬೆಣ್ಣೆಯಿಂದ ಹಿಡಿದು ಚಿಗುಲಿಯವರೆಗೂ ಪ್ರತಿಯೊಂದರ ಸವಿಯು ತಿಳಿದಿತ್ತು. ಒಮ್ಮೆ ಕೃಷ್ಣನ ತಂದೆ ತಾನು ಬೆಳೆದಿದ್ದ ಆಹಾರ ಧಾನ್ಯವನ್ನು ಮಾರಾಟಗಾರನಿಗೆ ನೀಡಿ ಹಣ್ಣುಗಳನ್ನು ಕೊಂಡಿರುತ್ತಾನೆ. ಇದರ ನೆನಪು ಶ್ರೀಕೃಷ್ಣನಿಗೆ ನೆನಪಾಗುತ್ತದೆ. ಆಗ ಮುಖವನ್ನು ಅರಳಿಸಿದ ಕೃಷ್ಣನು ತನ್ನ ಪುಟ್ಟ ಕೈಗಳಿಂದ ಆಹಾರ ಧಾನ್ಯಗಳನ್ನು ಆ ವ್ಯಾಪಾರಸ್ಥನಿಗೆ ಹೇಳಿ ಹಣ್ಣುಗಳನ್ನು ನೀಡು ಎಂದು ಕೇಳುತ್ತಾನೆ. ಈ ಪುಟ್ಟ ಕೈಗಳಲ್ಲಿ ಬರುವ ಆಹಾರ ಧಾನ್ಯಗಳೆಷ್ಟು.

 

ಆದರೆ ಹಣ್ಣಿನ ವ್ಯಾಪಾರಿಯು ಕೃಷ್ಣನ ಮುಗ್ಜತೆಗೆ ಮಾರುಹೋಗುತ್ತಾನೆ. ಆನಂತರ ಕೃಷ್ಣನ ಕಣ್ಣಿನಲ್ಲಿರುವ ತೀಕ್ಷ್ಣತೆಯನ್ನು ಕಂಡು ಯಾವುದೋ ಮಾಯಾಜಾಲಕ್ಕೆ ಒಳಗಾದಂತೆ ಕೃಷ್ಣನಿಗೆ ತಿನ್ನಲು ಹಣ್ಣುಗಳನ್ನು ನೀಡುತ್ತಾನೆ. ಇಂದಿಗೂ ಕೇವಲ ಹಳ್ಳಿಗಳಲ್ಲಿ ಮಾತ್ರ ಶ್ರೀಕೃಷ್ಣನ ಬಗ್ಗೆಇಂತಹ ಹತ್ತು ಹಲವಾರು ಕಥೆಗಳನ್ನು ಕೇಳಬಹುದಾಗಿದೆ

 

 

ಇದನ್ನೂ ಓದಿ...

Back to top button
>