ರಾಜಕೀಯರಾಜ್ಯ

ಬಂಧನಕ್ಕೆ ಮುನ್ನ ಮುಸ್ಲಿಂ ಸ್ನೇಹಿತೆ ಮನೆಯಲ್ಲಿ ಅವಿತಿದ್ದ ಚೈತ್ರಾ ಕುಂದಾಪುರ: ಹಿಂದೂ ಕಾರ್ಯಕರ್ತೆ ಜೊತೆ ಮೂವರ ಅರೆಸ್ಟ್

Chaitra Kundapur, who was staying at her Muslim friend's house before her arrest: Arrest of three with a Hindu activist

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಮಂಗಳೂರು: ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನೀಡುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ಕರಾವಳಿ ಮೂಲದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಕಳೆದ ತಡರಾತ್ರಿ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಸೇರಿದಂತೆ ಇಬ್ಬರನ್ನು ನಿನ್ನೆ ಮಂಗಳವಾರ ರಾತ್ರಿ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀಕಾಂತ್ ನಾಯಕ್ ಪೆಲತ್ತೂರ್ ಚೈತ್ರಾ ಜೊತೆ ಬಂಧನವಾಗಿರುವ ಮತ್ತೊಬ್ಬ ಆರೋಪಿ.

 

ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಕೈಗಾರಿಕೋದ್ಯಮಿ ಗೋವಿಂದ ಬಾಬು ಅವರನ್ನು ಪ್ರಮುಖ ಆರೋಪಿಗಳು ಬಿಲ್ಲವ ಸಮುದಾಯದ ಸಾಮಾಜಿಕ ಕಾರ್ಯಕರ್ತೆ ಎಂದು ಬಿಂಬಿಸಿ ಸುಮಾರು 7 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಕೈಗಾರಿಕೋದ್ಯಮಿ ಕೈಗಾರಿಕೋದ್ಯಮಿಯನ್ನು ಮೂರು ಹಂತಗಳಲ್ಲಿ ವಂಚಿಸಿದ್ದರು.

ಇತರೆ ಇಬ್ಬರು ಬಂಧನ: ವಂಚನೆ ಪ್ರಕರಣದಲ್ಲಿ ಇದುವರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ನಾಯಕ್ ಅವರಲ್ಲದೆ ಗಗನ್ ಕಡೂರು ಮತ್ತು ಪ್ರಸಾದ್ ಬಂಧಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಇದನ್ನೂ ಓದಿ...

Back to top button
>