ದರ್ಶನ್ ʻಡೆವಿಲ್ʼ ಚಿತ್ರಕ್ಕೆ ಕರಾವಳಿ ಸುಂದರಿ ನಾಯಕಿ!
Coastal beauty to star in Darshan's 'Devil'!
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ದರ್ಶನ್ ಅಭಿನಯದ ʻಕಾಟೇರʼ ಸಿನಿಮಾ ಭಾರಿ ಯಶಸ್ಸನ್ನು ಕಂಡಿದೆ. ಇದರ ಬೆನ್ನಲ್ಲೇ ʻಡೆವಿಲ್’ ದಿ ಹೀರೊ (Devil Movie) ಸಿನಿಮಾ ಮುಹೂರ್ತ ಸಹ ನೆರವೇರಿದೆ. ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಷನ್‌ನಲ್ಲಿ ‘ತಾರಕ್’ ಸಿನಿಮಾ ಮೂಡಿಬಂದಿತ್ತು. ಮಿಲನಾ ಪ್ರಕಾಶ್ ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಈ ಜೋಡಿಯ ಎರಡನೇ ಸಿನಿಮಾ ಕುತೂಹಲ ಮೂಡಿಸಿದೆ.
ಇದೀಗ ಈ ಸಿನಿಮಾಗೆ ಕರಾವಳಿ ಮೂಲದ ರಚನಾ ರೈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.
ಪುತ್ತೂರಿನಲ್ಲಿ ಹುಟ್ಟಿ ಬೆಳೆದ ರಚನಾ ರೈ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ‘ಸರ್ಕಸ್’ ಎನ್ನುವ ತುಳು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.
ಧನ್ವೀರ್ ಗೌಡ ನಟನೆಯ ‘ವಾಮನ’ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ.
‘ಡೆವಿಲ್’ ಚಿತ್ರದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಕ್ತಾಯವಾಗಿದೆ ಎನ್ನಲಾಗಿದೆ. ಅಜನೀಶ್ ಲೋಕನಾಥ್ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ‘ಡೆವಿಲ್’ ಚಿತ್ರಕ್ಕಿದೆ.