ರಾಜಕೀಯರಾಜ್ಯರಾಷ್ಟ್ರೀಯ

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಉತ್ತರ, ಬಿಜೆಪಿ ಸಂಸದರ ಹಾಜರಿ ಕಡ್ಡಾಯ

Debate on motion of thanks for President's speech: Prime Minister Modi's answer in Lok Sabha, presence of BJP MPs is mandatory

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಲೋಕಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಈ ಹಿನ್ನಲೆಲೆಯಲ್ಲಿ ಎಲ್ಲಾ ಬಿಜೆಪಿ ಸಂಸದರು ಲೋಕಸಭೆಯಲ್ಲಿ ಕಡ್ಡಾಯವಾಗಿ ಹಾಜರಾಗಬೇಕೆಂದು ಬಿಜೆಪಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಮೋದಿಯವರು ಇಂದು ಯಾವ ಯಾವ ಅಂಶಗಳ ಬಗ್ಗ ಮಾತನಾಡಲಿದ್ದಾರೆಂಬುದರ ಕುರಿತು ಭಾರೀ ಕುತೂಹಲಗಳು ಮೂಡಿವೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರದ ಅಧಿವೇಶನದ ಆರಂಭದಲ್ಲಿ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಮೋದಿ ಸರ್ಕಾರದ 10 ವರ್ಷಗಳ ಸಾಧನೆಯನ್ನು ಶ್ಲಾಘಿಸಿದ್ದರು.

ಇದೀಗ ಮೋದಿಯವರು ರಾಷ್ಟ್ರಪತಿಗಳ ಭಾಷಣಕ್ಕೆ ಉತ್ತರ ನೀಡಲಿದ್ದಾರೆ. ಈ ವೇಳೆ ಸರ್ಕಾರದ ಸಾಧನೆಗಳನ್ನು ಪ್ರಸ್ತುತಪಡಿಸುವ ಸಾಧ್ಯತೆಗಳಿವೆ ಹಾಗೂ ಚುನಾವಣೆಯ ಕಾರ್ಯಸೂಚಿಯನ್ನು ನಿಗಪಡಿಸುತ್ತಾರೆ.

ಇದರೊಂದಿಗೆ ಮುಂಬರುವ ಚುನಾವಣೋತ್ತರ ಸರ್ಕಾರದ ಅವಧಿಯಲ್ಲಿ ಮಾಡಬೇಕಿರುವ ಕಲೆಸಗಳನ್ನೂ ಪಟ್ಟಿ ಮಾಡುವ ಸಾಧ್ಯತೆಗಳಿವೆ. ಅಲ್ಲದೆ, ಆರ್ಥಿಕ ಪ್ರಗತಿ, ರಾಮಮಂದಿರ ಉದ್ಘಾಟನೆ ಸೇರಿದಂತೆ ಅನೇಕ ವಿಷಯಗಳ ವಿಶ್ಲೇಷಣೆ ಮತ್ತು ವಿಪಕ್ಷಗಳ ವಿರುದ್ಧವೂ ಕಿಡಿಕಾರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇದನ್ನೂ ಓದಿ...

Back to top button
>