ರಾಜಕೀಯರಾಜ್ಯ

ಬರ ಪರಿಸ್ಥಿತಿ: ಕೇಂದ್ರದಿಂದ ಅನುದಾನ ತರದ ಬಿಜೆಪಿ ವಿರುದ್ಧ ಡಿಕೆಶಿ ಕಿಡಿ

Drought situation: DKshi sparks against BJP for not getting funds from the centre

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರು ರಾಜ್ಯದಲ್ಲಿನ ಬರದ ಬಗ್ಗೆ ಕೇಂದ್ರದ ನಾಯಕರನ್ನು ಒಂದು ದಿನವೂ ಭೇಟಿ ಮಾಡಿಲ್ಲ. ರಾಜ್ಯದ ಬಗ್ಗೆ ಬದ್ಧತೆ ಇಲ್ಲದವರು ನಮ್ಮ ವಿರುದ್ಧ ಮಾತನಾಡುತ್ತಾರೆಂದು ಬಿಜೆಪಿ ವಿರುದ್ಧ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಭಾನುವಾರ ಕಿಡಿಕಾರಿದರು.

ಮೋಹನ್ ಸಿಂಗ್ ಸರ್ಕಾರದಲ್ಲಿ ಆದ ತಾರತಮ್ಯದ ಬಗ್ಗೆ ಬಿಜೆಪಿ ದಾಖಲೆ ಬಿಡುಗಡೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮನಮೋಹನ್ ಸಿಂಗ್ ಸರ್ಕಾರ ಹೋಗಿ 10 ವರ್ಷ ಆಗಿದೆ. ಇದನ್ನೂ ಕೇಳುವವರಿಗೆ ಜ್ಞಾನ ಇರಬೇಕು. ಬುದ್ಧಿವಂತಿಕೆ ಇರಬೇಕು. ಈಗ ಅಧಿಕಾರ ನಿಮ್ಮ ಕೈಯಲ್ಲಿದೆ. ನೀವು ಮಾತೆತ್ತಿದರೆ ಡಬಲ್ ಎಂಜಿನ್ ಸರ್ಕಾರ ಅಂತಿದ್ರಿ. ಡಬಲ್ ಎಂಜಿನ್ ಸರ್ಕಾರ ಮಾಡಿದ್ರಿ. ಡಬಲ್ ಎಂಜಿನ್ ಸರ್ಕಾರ ರಾಜ್ಯಕ್ಕೆ ಏನು ತಂದಿತ್ತು. ಅದು ಬಹಳ ಮುಖ್ಯ ಎಂದು ಹೇಳಿದರು.

27 ಸಂಸದರನ್ನು ಇಟ್ಟುಕೊಂಡು ಬರಗಾಲದ ಮೀಟಿಂಗ್ ಮಾಡಿಸಲು ಸಾಧ್ಯವಾಗಿಲ್ಲ. ಸಭೆ ನಡೆಸಿ ಹಣ ಬಿಡುಗಡೆ ಮಾಡಿಸಿಲ್ಲ. ರಾಜ್ಯ ಸರ್ಕಾರ ಏನು ಕೊಟ್ಟಿಲ್ಲ ಅಂತಾರೆ, ಮೊದಲ ಬಾರಿಗೆ ನಮ್ಮ ರಾಜ್ಯ ಸರ್ಕಾರ ರೈತರ ಖಾತೆಗೆ ಬರ ಪರಿಹಾರಕ್ಕೆ ಸಂಬಂಧಿಸಿದಂತೆ 2000 ಹಣ ಜಮೆ ಮಾಡಿದ್ದೇವೆ. ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ನಾವು ದೆಹಲಿಗೆ ಹೊರಟಿದ್ದೇವೆಂದು ಇದೀಗ ಕೇರಳದವರು ಹೊರಟಿದ್ದಾರೆ.

ಕರ್ನಾಟಕಕ್ಕೆ ಅನ್ಯಾಯ ಆಗಿದೆ, ಅದರಲ್ಲಿ ಅನುಮಾನವೇ ಇಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯ ತಾರತಮ್ಯ ಹೊರ ತೆಗೆಯುತ್ತೇವೆ ಅಂದರೆ, ಬಿಜೆಪಿಯವರು ಅನ್ಯಾಯ ಮಾಡಿದೆ ಅಂತ ಒಪ್ಪಿಕೊಂಡ ಹಾಗೆ ಆಯಿತಲ್ಲ. ಈಗ ಸರಿ ಮಾಡಬೇಕಿತ್ತಲ್ಲ’ ಎಂದು ಪ್ರಶ್ನಿಸಿದರು.

ಈಗ ರಾಜ್ಯದ ಪರವಾಗಿ ಧ್ವನಿ ಎತ್ತದ ಬೇರೆ ದಾರಿ ಇಲಲ. ಹೀಗಾಗಿ ನಮ್ಮ ಪ್ರತಿಭಟೆಗೆ ಕೈಜೋಡಿಸುವಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೂ ಆಹ್ವಾನ ನೀಡುತ್ತೇನೆ. ನಮ್ಮ ಜೊತೆ ಫೆ.7ರಂದು ದೆಹಲಿಯಲ್ಲಿ ಆ ಪಕ್ಷಗ ನಾಯಕರೂ ಪ್ರತಿಭಟನೆಯಲ್ಲಿ ಭಾಗಿಯಾಗಿ ರಾಜ್ಯಕ್ಕೆ ನ್ಯಾಯ ಕೇಳಲಿ ಎಂದರು.

‘ಕಳೆದ ಬಾರಿಯ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಡುತ್ತೇವೆ ಎಂದು ಘೋಷಿಸಿದ್ದರೋ ಇಲ್ಲವೋ?. ಆ ಪೈಕಿ ಒಂದು ರೂಪಾಯಿ ಬಿಡುಗಡೆ ಮಾಡಿದ್ರಾ?. ಮೆಟ್ರೋ ವಿಚಾರದಲ್ಲಿ ಏನು ಮಾಡಿದ್ರು? ಸುಮ್ಮನೆ ಏನೇನೋ ಮಾತನಾಡುತ್ತಾರೆ’ ಎಂದು ಟೀಕಿಸಿದರು.

ಮೋದಿ ಗ್ಯಾರಂಟಿ ಶ್ರೇಷ್ಠ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಏಳು ತಿಂಗಳಿಗೆ ಅವರು ಒಳ್ಳೆಯ ಲಾಟರಿ ಹೊಡೆದಿದ್ದಾರೆ. ಪಕ್ಷದ ಅಧ್ಯಕ್ಷರಾಗಿದ್ದಾರೆ, ತಂದೆಯವರಿಂದ ಅವರಿಗೆ ಪಾಲು ಸಿಕ್ಕಂತಾಗಿದೆ. ನನ್ನದೇನು ಅಭ್ಯಂತರ ಇಲ್ಲ. ಹೊಸದಾಗಿ ಏನೋ ಮಾತನಾಡುತ್ತಾರೆ. ಅದಕ್ಕೆ ಡಿಸ್ಕರೇಜ್ ಮಾಡಲ್ಲ. ಗ್ಯಾರಂಟಿ ಬಗ್ಗೆ ಮೋದಿಯವರು ಏನು ಹೇಳಿದರು. ಈಗ ಕಾಂಗ್ರೆಸ್ ಗ್ಯಾರಂಟಿ ಪದವನ್ನು ಮೋದಿ ಗ್ಯಾರಂಟಿ ಎಂದು ಬಳಸುತ್ತಿದ್ದಾರಲ್ಲ ಎಂದರು

ಇದನ್ನೂ ಓದಿ...

Back to top button
>