ಮದ್ಯ ಮಾರಾಟ ನಿಷೇಧದಿಂದ 300 ಕೋಟಿ ರೂ. ನಷ್ಟ ಸಾಧ್ಯತೆ
300 crores from liquor ban. Possibility of loss
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಫೆಬ್ರವರಿ 14 ರಂದು ರಾಜ್ಯದಲ್ಲಿ ವಿಧಾನಪರಿಷತ್ ಬೆಂಗಳೂರು ಶಿಕ್ಷಣ ಕೇತ್ರದ ಉಪ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕಾರಣ ಫೆಬ್ರವರಿ 14 ರಿಂದ ಫೆಬ್ರವರಿ 16 ರ ಮಧ್ಯರಾತ್ರಿವರೆಗೂ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. 4 ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಿದರೆ ರಾಜ್ಯಕ್ಕೆ ಅಂದಾಜು 300 ಕೋಟಿ ರೂ. ನಷ್ಟ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಬೆಂಗಳೂರು ನಗರ ಜಿಲ್ಲಾ ಮದ್ಯ ವರ್ತಕರ ಸಂಘ (ಬಿಸಿಡಿಎಲ್‌ಟಿಎ) ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಮದ್ಯ ನಿಷೇಧ ಕುರಿತು ಅಸಮಾಧಾನ ಹೊರಹಾಕಿದ್ದಾರೆ.
ಸಾಮಾನ್ಯವಾಗಿ ಪ್ರೇಮಿಗಳ ದಿನದಂದು ಮದ್ಯ ಮಾರಾಟ ಹೆಚ್ಚಾಗಿರುತ್ತದೆ. ಈ ದಿನದ ಯುವ ಜನತೆ ಆಗಾಗ್ಗೆ ರೆಸ್ಟೋರೆಂಟ್‌ಗಳು ಮತ್ತು ಪಬ್‌ಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇದರಿಂದ ಆದಾಯವು ಶೇಕಡಾ 50 ರಷ್ಟು ಹೆಚ್ಚಾಗುತ್ತದೆ. ಆದರೆ, ಮದ್ಯ ನಿಷೇಧದಿಂದಾಗಿ ಬೆಂಗಳೂರಿನಲ್ಲಿನ ಸುಮಾರು 3,700 ಸಂಸ್ಥೆಗಳಿಗೆ ಸಮಸ್ಯೆಯಾಗಲಿದ್ದು, ಅಪಾರ ನಷ್ಟ ಎದುರಾಗಲಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಮದ್ಯ ನಿಷೇಧ ಕುರಿತ ನಿರ್ಧಾರವನ್ನು ಸರ್ಕಾರ ಮತ್ತು ಚುನಾವಣಾ ಆಯೋಗ ಮರು ಪರಿಶೀಲಿಸಬೇಕು. ಚುನಾವಣೆಗೆ ಮತ ಚಲಾಯಿಲುವವರ ಸಂಖ್ಯೆ ಕೇವಲ 16,000 ಮಾತ್ರ ಇದ್ದಾರೆ. ಅವರೆಲ್ಲರೂ ವಿದ್ಯಾವಂತರು ಮತ್ತು ಬುದ್ಧಿವಂತರು. ಅಧಿಕಾರಿಗಳು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಆಹಾರ ಮತ್ತು ಪಾನೀಯ (ಎಫ್ & ಬಿ) ಉದ್ಯಮದ ಉಳಿವಿಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಅವರು ಮಾತನಾಡಿ, ಮದ್ಯ ನಿಷೇಧ ನಿರ್ಧಾರ ಅವೈಜ್ಞಾನಿಕ ಮತ್ತು ಅನಿರೀಕ್ಷಿತವಾಗಿದೆ ಎಂದು ಹೇಳಿದ್ದಾರೆ.
ಪ್ರೇಮಿಗಳ ದಿನದಂದು ನಗರದ ಅನೇಕ ರೆಸ್ಟೋರೆಂಟ್‌ಗಳು ಕಾರ್ಯಕ್ರಮಗಳನ್ನು ಏರ್ಪಡಿಸುತ್ತವೆ. ಇದೀಗ ದಿಢೀರ್ ಮದ್ಯ ನಿಷೇಧವು ಅಪಾರ ನಷ್ಟ ಹಾಗೂ ವ್ಯವಹಾರದ ಮೇಲೆ ಪರಿಣಾಮ ಬೀರುತ್ತವೆ. ನಾಲ್ಕು ದಿನಗಳಲ್ಲಿ 450 ಕೋಟಿ ರೂಪಾಯಿಗಳ ವಹಿವಾಟು ನಡೆಯುವ ನಿರೀಕ್ಷೆಯಿದೆ, ಅದರಲ್ಲಿ ಅಬಕಾರಿ ಇಲಾಖೆಯು 250 ಕೋಟಿ ರೂಪಾಯಿಗಳನ್ನು ಪಡೆಯಲಿದೆ, ಈ ಮದ್ಯ ನಿಷೇಧ ನಿರ್ಧಾರದಿಂದ ಹೋಟೆಲ್ ಮಾಲೀಕರಿಗೆ ಮಾತ್ರವಲ್ಲದೆ ಸರ್ಕಾರಕ್ಕೂ ಭಾರಿ ನಷ್ಟವಾಗುತ್ತದೆ. ಅಂಕಿಅಂಶಗಳ ಪ್ರಕಾರ, ಸರ್ಕಾರವು ದಿನಕ್ಕೆ 60 ಕೋಟಿ ಅಬಕಾರಿ ಸಂಗ್ರಹವನ್ನು ಸಂಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.