ಸಿನಿಮಾಸಿನಿಮಾ ಸುದ್ದಿ

ಪ್ರಿಯಾಂಕಾ ಉಪೇಂದ್ರ ನಟನೆಯ ʻಕಮರೊಟ್ಟು 2ʼ ಹಾರರ್ ಥ್ರಿಲ್ಲರ್ ಟ್ರೈಲರ್ ಔಟ್‌!

Priyanka Upendra Starrer ``Kamarottu 2'' Horror Thriller Trailer Out!

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ‘ಕಮರೊಟ್ಟು ಚೆಕ್ ಪೋಸ್ಟ್ʼ ಕಥೆ ಹೇಳಿ ಸಿನಿ ಪ್ರೇಮಿಗಳನ್ನು ರಂಜಿಸಿದ್ದ ನಿರ್ದೇಶಕ ಪರಮೇಶ್ ನಾಲ್ಕು ವರ್ಷದ ಬಳಿಕ ಸೀಕ್ವೆಲ್ ಕಥೆ ಹೇಳುವುದಕ್ಕೆ ನಿಮ್ಮ ಮುಂದೆ ಬರುತ್ತಿದ್ದಾರೆ. ‘ಕಮರೊಟ್ಟು 2’ ಸಿನಿಮಾದ ಟ್ರೈಲರ್ ಇದೀಗ ರಿಲೀಸ್ ಆಗಿದೆ. ಬೆಂಗಳೂರಿನ ಲೂಲು ಮಾಲ್‌ನಲ್ಲಿ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿರ್ದೇಶಕ ಪರಮೇಶ್ ಅವರ ಪ್ರಯತ್ನಕ್ಕೆ ಗೆಳೆಯ ಅಜಯ್ ರಾವ್ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ N.M.ಸುರೇಶ್ ರವರು ಸಾತ್ ಕೊಟ್ಟು ‘ಕಮರೊಟ್ಟು 2’ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದರು.

ಬಳಿಕ ಮಾತನಾಡಿದ ಅಜಯ್ ರಾವ್ ಅವರು ʻʻʻಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಪ್ರೇಕ್ಷಕರು ಸೀಟಿನ ತುತ್ತ ತುದಿಯಲ್ಲಿ ಕುಂತು ನೋಡುವಂತಹ ಥ್ರಿಲ್ಲರ್ ಸಿನಿಮಾ ಇದಾಗಿದೆ, ಕೆಲವೊಂದು ದೃಶ್ಯಗಳು ಟೆಕ್ನಿಕಲಿ ಅದ್ಭುತವಾಗಿ ಮೂಡಿ ಬಂದಿದ್ದು ಇದನ್ನು ಹೇಗೆ ಚಿತ್ರಣ ಮಾಡಿದ್ದಾರೆ ಎಂಬ ಕುತೂಹಲ ನನಗೆ ಮೂಡಿದೆ,. ಹಾಗಾಗಿ ಪರಮೇಶ್ ಒಳ್ಳೆಯ ನಿರ್ದೇಶಕ ಎಂದು ಪ್ರತಿಯೊಂದು ದೃಶ್ಯದಲ್ಲೂ ಕಾಣುತ್ತದೆ. ಸಿನಿಮಾ ಬಹಳ ಇಷ್ಟವಾಗಿದೆ.
ಈ ಒಂದು ಸಂದರ್ಭದಲ್ಲಿ ಅಜಯ್ ರಾವ್ ಅವರು ಸಿನಿಮಾವನ್ನು ನೋಡಿದ ಮೇಲೆ ಪ್ರಿಯಾಂಕಾ ಅವರು ಅದ್ಭುತವಾಗಿ ಕಾಣುತ್ತಿದ್ದು ನಾನು ಅವರ ದೊಡ್ಡ ಅಭಿಮಾನಿಯಾದೆ. ಎಷ್ಟೋ ಜನ ಸುಂದರ ನಟಿಯರಲ್ಲಿ ಪ್ರಿಯಾಂಕ ಮೇಡಂ ಮೊದಲಿಗರಲ್ಲಿ ನಿಲ್ಲುತ್ತಾರೆʼʼ ಎಂದರು.
ʻʻಒಟ್ಟಾರೆ ಕಮರೊಟ್ಟು 2 ಸಿನಿಮಾ ಅದ್ಭುತವಾಗಿ ಮೂಡಿ ಬಂದಿದ್ದು ಜನರ ಮನಸ್ಸನ್ನು ಗೆದ್ದೇ ಗೆಲ್ಲುತ್ತದೆ, ಈ ಚಿತ್ರಕ್ಕೆ ಜನ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ನನಗಿದೆ. ಹೀರೋ ಬೇಗ ಪ್ರಚಾರಕ್ಕೆ ಬರುತ್ತೇವೆ ಆದರೆ ತೆರೆ ಹಿಂದೆ ಕೆಲಸ ಮಾಡುವ ಇಂತಹ ಟೆಕ್ನಿಷಿಯನ್ ಗಳು ಮುಂದೆ ಬರುವುದಿಲ್ಲ ಪರಮೇಶ್ ಅವರಲ್ಲಿ ಸಿನಿಮಾ ಪ್ರೀತಿ ಹೆಚ್ಚಿದೆ ಅವರು ಒಬ್ಬ ರೈತರು ಕೂಡ ಯಾವುದೇ ಬೆಂಬಲವಿಲ್ಲದೆ ಅವರು ಬೆಳೆದು ಬಂದಿದ್ದಾರೆ ಇಂದು ಈ ಚಿತ್ರ ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಡುತ್ತದೆ ಎಂಬ ನಂಬಿಕೆ ನನಗಿದೆ ನನ್ನ ಗೆಳೆಯ ಪರಮೇಶ್ ರವರಿಗೆ ಶುಭವನ್ನು ಹಾರೈಸುತ್ತಿದ್ದೇನೆʼʼ ಎಂದಿದ್ದಾರೆ.

ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ N.M.ಸುರೇಶ್ ರವರು ಸಿನಿಮಾದ ಟ್ರೈಲರ್ ನೋಡಿ ಒಂದೊಂದು ದೃಶ್ಯವು ಹಾಲಿವುಡ್ ಸಿನಿಮಾದಂತೆ ಕಾಣುತ್ತಿದ್ದು ಪರಮೇಶ್ ಕೆಲಸ ಮನಮುಟ್ಟುವಂತಿದೆ. ಅವರಿಗೆ ಯಶಸ್ವಿಗಲಿ ಎಂದು ಹಾರೈಸಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ ʻʻಈ ಸಿನಿಮಾದಲ್ಲಿ ನನಗೆ ಸೂಕ್ತವಾದ ಪಾತ್ರ ಮಾಡಿಸಿದ್ದಾರೆ. ಎಷ್ಟರ ಮಟ್ಟಿಗೆ ಮಾಡಿದ್ದೇನೆ ಅನ್ನೋದನ್ನ ನೀವು ನೋಡಿ ಹೇಳಬೇಕು. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ನಮ್ಮ ನಿರ್ದೇಶಕ ಪರಮೇಶ್ ನನ್ನ ಮನಸ್ಸಿಗೆ ಯಾಕೆ ಹತ್ತಿರ ಅಂದರೆ, ನಮ್ಮ ತಂದೆ ತೀರಿ ಹೋದಾಗ ಅವತ್ತಿನ ದಿನ ಹೇಗಿತ್ತು ಅನ್ನೋದು ನಿಮಗೆ ಗೊತ್ತು. ಸೆಕ್ಷನ್ 144 ಜಾರಿಯಲ್ಲಿತ್ತು ಅಲ್ಲಿ ಸೆರೆ ಹಿಡಿಯಲು ಕ್ಯಾಮೆರಾ ಮ್ಯಾನ್ ಆಗಿ ಬಂದಿದ್ದರು, ಆಗ ನನಗೆ ಪರಿಚಯ ಆದರು. ಇಂದು ಇಡೀ ನಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದಾರೆ ನನ್ನ ಗೆಳೆಯನು ಹೌದು. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿʼʼ ಎಂದರು.

ಪ್ರಿಯಾಂಕಾ ಉಪೇಂದ್ರ ಅವರು ಮಾತನಾಡಿ ʻʻಅಜಯ್ ಅವರು ತುಂಬಾ ಪಾಸಿಟಿವ್ ಆಗಿ ಇರ್ತಾರೆ. ಅವರು ಟ್ರೈಲರ್ ಲಾಂಚ್‌ಗೆ ಬಂದಿದ್ದು ಖುಷಿ ಕೊಟ್ಟಿದೆ. ನಾನು ಜಾಸ್ತಿ ಮಾತಾಡಲ್ಲ. ನನ್ನ ಮೂವಿಗಳನ್ನು ನೋಡಿರ್ತೀರ. ಈ ಚಿತ್ರ ಒಪ್ಪಲು ನಿರ್ದೇಶಕ ಪರಮೇಶ್ ಅವರು ಕಾರಣ. ನನಗೆ 3 ಗಂಟೆ ನರೇಷನ್ ಕೊಟ್ಟರು. ಡೀಟೇಲ್ ಆಗಿ ನನ್ನ ಪಾತ್ರದ ಬಗ್ಗೆ ಹೇಳಿ ಕೊಟ್ಟರು. ಅವರಲ್ಲಿ ಒಬ್ಬ ಅದ್ಭುತವಾದ ನಿರ್ದೇಶಕನನ್ನು ನೋಡಿದೆ. ಫೈನಲ್ ಔಟ್‌ಪುಟ್‌ ನೋಡಿ ನನಗೆ ಬಹಳ ಖುಷಿಯಾಗಿದೆʼʼಎಂದರು. ಸದ್ಯಕ್ಕೆ ಸಿನಿಮಾದ ಟ್ರೈಲರ್ ಎ2 ಮ್ಯೂಸಿಕ್‌ನಲ್ಲಿ ಇದ್ದು, ಪ್ರೇಕ್ಷಕರಿಗಾಗಿ ಆದಷ್ಟು ಬೇಗ ಚಿತ್ರಮಂದಿರಕ್ಕೆ ಬರುವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ...

Back to top button
>