ರಾಜಕೀಯರಾಜ್ಯ

10 ವರ್ಷಗಳಲ್ಲಿ 11 ರೈಲು ತಂದಿದ್ದೀನಿ, ಮೈಸೂರು-ರಾಮೇಶ್ವರಂ 12ನೇ ರೈಲು ಬರಲಿದೆ: ಪ್ರತಾಪ್ ಸಿಂಹ

You have brought 11 trains in 10 years, Mysore-Rameswaram 12th train will come: Pratap Simha

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಮೈಸೂರು: ನನ್ನ ಸಂಸದ ಸೇವೆ ಅವಧಿಯಲ್ಲಿ ಕರ್ನಾಟಕಕ್ಕೆ 11 ರೈಲು ಸೇವೆ ತರಿಸಿದ್ದೇನೆ. 2014ಕ್ಕೂ ಮೊದಲು ಒಂದು ರೈಲು ಬಂದಿಲ್ಲ. ಶೀಘ್ರದಲ್ಲೇ 12ನೇ ಮೈಸೂರು-ರಾಮೇಶ್ವರಂ ರೈಲು ಬರಲಿದೆ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಘೋಷಿಸಿದ್ದಾರೆ.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಇಂದು ಮೈಸೂರು ಕೊಡಗು ಲೋಕಸಭಾ ಚುನಾವಣಾ ಕಾರ್ಯಾಲಯ ಉದ್ಘಾಟನೆ ಮಾಡಿದ ಅವರು, ಈ ವೇಳೆ ಮುಂದೆ ಬೆಂಗಳೂರು ಮೈಸೂರು ಮೆಟ್ರೋ ಬರಲಿದೆ ಎಂದರು. ಚುನಾವಣೆಗೆ ಹೋಗಬೇಕಾದರೆ ಏನು ಮಾಡುತ್ತೇವೆ? ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ದೇವೆ. 10 ವರ್ಷದಲ್ಲಿ ನಾನು ಕೆಲಸ ಮಾಡಿದ ರಿಪೋರ್ಟ್ ಕಾರ್ಡ್ ನೀಡಿದ್ದೇನೆ. ಪ್ರಧಾನಿ ಮೋದಿ ಕೊಟ್ಟಿದ್ದೇನು? ಪ್ರತಾಪ್ ಸಿಂಹ ತಂದಿದ್ದೇನು? ಅನ್ನೋ ಬುಕ್‌ಲೆಟ್ ಇದರಲ್ಲಿ ಕೇಂದ್ರದ ಡಿಪಾಲ್ಟ್ ಯೋಜನೆ ಪಟ್ಟಿ ಇಲ್ಲಿ ಮಾಡಿಲ್ಲ. 2014ರ ಹಿಂದೆ ಒಂದು ಟ್ರೈನ್ ಬಂದಿಲ್ಲ. ನಾನು 11 ಟ್ರೈನ್ ತಂದಿದ್ದೇನೆ. 12ನೇ ರೈಲು ಸದ್ಯದಲ್ಲೇ ಬರಲಿದೆ ಎಂದು ತಿಳಿಸಿದರು.

ಬೊಮ್ಮಾಯಿ, ಯಡಿಯೂರಪ್ಪ ಅನುದಾನ ನೀಡಿದ್ದಾರೆ: ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಬಿ ಎಸ್ ಯಡಿಯೂರಪ್ಪನವರು ಸಾಕಷ್ಟು ಅನುದಾನ ನೀಡಿದ್ದಾರೆ. ಮುಂದೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆಗಲಿದೆ. ಮೈಸೂರು ಬೆಂಗಳೂರು ಮೆಟ್ರೋ ಬರಲಿದೆ. ಮೈಸೂರು ಚೆನ್ನೈ ಬುಲೆಟ್ ರೈಲು ಶೀಘ್ರವಾಗಿ ಆಗಲಿದೆ. ನಾನು ಮತ್ತೊಮ್ಮೆ ಆಶೀರ್ವಾದ ಕೇಳುತ್ತಿದ್ದೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. 2014, 2019ರಲ್ಲಿ ಜನ ನನ್ನನ್ನು ಗೆಲ್ಲಿಸಿದ್ದಾರೆ. ಸತತವಾಗಿ ಆಯ್ಕೆಯಾಗಿ ದಾಖಲೆ ಮಾಡಿದ್ದೇನೆ. ಪಕ್ಷ ಆಶೀರ್ವಾದ, ತೀರ್ಮಾನ ಮಾಡಿದರೆ ಜನರು ಆಶೀರ್ವಾದ ಮಾಡಿ ಮತ್ತೊಮ್ಮೆ ಮೂರನೇ ಬಾರಿಗೆ ಸಂಸದನಾಗಿ ಬರುತ್ತೇನೆ ಎಂದರು.

ಬಿಜೆಪಿ ಗೆಲುವು ನಿಶ್ಚಿತ: ಬಿಜೆಪಿ, ಜೆಡಿಎಸ್​​​ ಮೈತ್ರಿಯಾಗಿ ಕೆಲಸ ಮಾಡುವ ಜವಾಬ್ದಾರಿಯಿದೆ. ಮೈಸೂರು ಲೋಕಸಭಾ ಕ್ಷೇತ್ರವನ್ನು ನಿಶ್ಚಿತವಾಗಿ ನಾವು ಗೆಲ್ಲುತ್ತೇವೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಎಸ್​​​.ಎ ರಾಮದಾಸ್​​ ಹೇಳಿದರು.

ಇದನ್ನೂ ಓದಿ...

Back to top button
>