ರಾಜಕೀಯರಾಜ್ಯ

ದೆಹಲಿಯಲ್ಲಿ ಪ್ರತಿಪಕ್ಷಗಳ ಸಮಾವೇಶ: ಚುನಾವಣಾ ಆಯೋಗಕ್ಕೆ INDIA ಮೈತ್ರಿಕೂಟದ ನ 5 ಬೇಡಿಕೆಗಳು ಇಂತಿವೆ…

Opposition Conference in Delhi: Here are 5 demands of the INDIA Alliance to the Election Commission...

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ನವದೆಹಲಿ: ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರತಿಪಕ್ಷಗಳ ಸಮಾವೇಶ ಇಂದು ನಡೆದಿದ್ದು, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಆಮ್ ಆದ್ಮಿ ಪಕ್ಷ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು.

ಮದ್ಯ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಸಿಎಂ ಕೇಜ್ರಿವಾಲ್ ಹಾಗೂ ಭೂಹಗರಣದ ಸಂಬಂಧ ಬಂಧನಕ್ಕೆ ಒಳಗಾಗಿರುವ ಜಾರ್ಖಂಡ್ ನ ಮಾಜಿ ಸಿಎಂ ಹೇಮಂತ್ ಸೊರೇನ್ ಅವರನ್ನು ಬಂಧಮುಕ್ತಗೊಳಿಸಬೇಕೆಂದು ಪ್ರತಿಪಕ್ಷಗಳು ಈ ಸಭೆಯಲ್ಲಿ ಒತ್ತಾಯಿಸಿವೆ.

ದೇಶದ ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಾಯಕರು, ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಬಿಜೆಪಿ ಪ್ರತಿಪಕ್ಷಗಳನ್ನು ನಾಶಮಾಡುತ್ತಿದೆ ಎಂದು ಆರೋಪಿಸಿದರು. ಈ ಸಮಾವೇಶದ ಬಗ್ಗೆ ಲೇವಡಿ ಮಾಡಿರುವ ಪ್ರತಿಪಕ್ಷ ಬಿಜೆಪಿ, ರ್ಯಾಲಿಯು ಪ್ರಜಾತಂತ್ರವನ್ನು ಉಳಿಸುವ ಉದ್ದೇಶದಿಂದ ನಡೆದಿಲ್ಲ ಬದಲಾಗಿ “ಕುಟುಂಬವನ್ನು ಉಳಿಸಿ” ಮತ್ತು “ಭ್ರಷ್ಟಾಚಾರವನ್ನು ಮರೆಮಾಡಿ” ಎಂಬ ಉದ್ದೇಶದಿಂದ ನಡೆದಿದೆ ಎಂದು ಹೇಳಿದೆ.

ಇದೇ ವೇಳೆ ಕಾಂಗ್ರೆಸ್ ನ ನಾಯಕಿ ಪ್ರಿಯಾಂಕ ವಾಧ್ರ ಪ್ರತಿಪಕ್ಷಗಳ 5 ಬೇಡಿಕೆಗಳನ್ನು ಚುನಾವಣಾ ಆಯೋಗದ ಮುಂದೆ ಇಟ್ಟಿದೆ.

ಬೇಡಿಕೆಗಳೇನು ಎಂದರೆ…

1. ಎಲ್ಲರಿಗೂ ಸಮಾನ ಅವಕಾಶಗಳಿರುವುದನ್ನು ಚುನಾವಣಾ ಆಯೋಗ ಖಾತ್ರಿಪಡಿಸಿಕೊಳ್ಳಬೇಕು.

2. ಜಾರಿ ನಿರ್ದೇಶನಾಲಯ, ಸಿಬಿಐ, ಐಟಿ ಗಳು ವಿಪಕ್ಷ ನಾಯಕರನ್ನು ಗುರಿಯಾಗಿಸಿಕೊಳ್ಳುತ್ತಿರುವುದನ್ನು ತಡೆಯಬೇಕು

3. ಹೇಮಂತ್ ಸೊರೇನ್ ಹಾಗೂ ಅರವಿಂದ್ ಕೇಜ್ರಿವಾಲ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು

4. ವಿಪಕ್ಷಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಯತ್ನಗಳನ್ನು ನಿಲ್ಲಿಸಬೇಕು

5. ಚುನಾವಣಾ ಬಾಂಡ್ ಗಳ ಮೂಲಕ ಬಿಜೆಪಿ ಹಣ ಗಳಿಸಿರುವುದರ ಬಗ್ಗೆ ಎಸ್ ಐಟಿ ರಚಿಸಿ ತನಿಖೆ ನಡೆಸಬೇಕು

ಇದನ್ನೂ ಓದಿ...

Back to top button
>