ರಾಜಕೀಯರಾಜ್ಯ

ಸುಖ ನಿದ್ರೆಗೆ ‘ಅಕ್ಕ ಇವತ್ತು ಒನ್ ಪೆಗ್‌ ಎಕ್ಸ್‌ಟ್ರಾ ಹಾಕಬೇಕಾಗುತ್ತೆ’: ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಸಂಜಯ್ ಪಾಟೀಲ್ ವ್ಯಂಗ್ಯ

'Akka will have to put one peg extra today' for a good night's sleep: Sanjay Patil's sarcasm on Lakshmi Hebbalkar

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ಸಿಕ್ಕ ಬೆಂಬಲ ನೋಡಿದರೆ ‘ಅಕ್ಕ’ ನಿದ್ದೆಗೆಡುತ್ತಾರೆ. ಸುಖ ನಿದ್ರೆಗೆ ಇಂದು ನಿದ್ದೆ ಮಾತ್ರೆ ಇಲ್ಲವೇ ಒಂದು ಪೆಗ್‌ ಎಕ್ಸ್ರಾ ಹಾಕಬೇಕಾಗುತ್ತದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ ಅವರು, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೆಸರು ಹೇಳದೇ ಮೂದಲಿಸಿದರು.

ಸಮೀಪದ ಹಿಂಡಲಗಾದಲ್ಲಿ ಶನಿವಾರ ನಡೆದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಅಕ್ಕನ ಕ್ಷೇತ್ರದಲ್ಲಿಯೇ ಬಿಜೆಪಿ ಸಮಾವೇಶದಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಸೇರಿದ್ದಾರೆ. ಅಕ್ಕ ನಿದ್ದೆಗೆಡುವುದು ಗ್ಯಾರಂಟಿ’ ಎಂದು ಹೇಳಿದ್ದಾರೆ.

ಸಂಜಯ್ ಪಾಟೀಲ್ ಅವರ ಈ ಹೇಳಿಕೆಗ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. ನೀಚತನದ ಹೇಳಿಕೆ ಬಿಜೆಪಿಯ ಹಿಡನ್ ಅಜೆಂಡಾ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಚಾರಕ್ಕಾಗಿ ನೀಚತನದ, ಕೀಳು ಮಟ್ಟದ ಹೇಳಿಕೆ ನನ್ನ ಬಗ್ಗೆ ಸಂಜಯ್ ಪಾಟೀಲ್‌ ನೀಡಿದ್ದಾರೆ. ಕರ್ನಾಟಕ ರಾಜ್ಯದ ಮಹಿಳೆಯರು ಮಕ್ಕಳನ್ನು‌‌ ನಿಭಾಯಿಸುವ ಸಚಿವೆಗೆ ಇವರು ಈ ರೀತಿ ಹೇಳಿಕೆ‌ ನೀಡುತ್ತಾರೆ. ಈ ಮೂಲಕ ಬಿಜೆಪಿಯವರಿಗೆ ಮಹಿಳೆಯರು ಮತ್ತು‌‌ ಮಹಿಳಾ ಕುಲದ ಬಗ್ಗೆ ಇರು ಗೌರವ ಎಷ್ಟು ಎನ್ನುವುದು ತೋರಿಸುತ್ತೆ. ಬಿಜೆಪಿಯವರ ಅಜೆಂಡಾ ಏನು ಎನ್ನುವುದು ಈ ಮೂಲಕ ಗೊತ್ತಾಗುತ್ತೆ ಎಂದರು.

ಬರೀ ಮಾತಲ್ಲಿ ರಾಮ ಅಂತಾರೆ ಭೇಟಿ ಬಚಾವೋ, ಭೇಟಿ ಪಡಾವೋ ಅಂತಾರೆ. ಪ್ರತಿಯೊಬ್ಬ ಮಹಿಳೆಯನ್ನು ಗೌರವ ನೀಡುವುದು ಹಿಂದೂ ಸಂಸ್ಕ್ರತಿ. ಸಂಜಯ್ ಪಾಟೀಲ್ ಅವರ ಈ ಹೇಳಿಕೆ ಲಕ್ಷ್ಮೀ ಹೆಬ್ಬಾಳಕರ್ ಅಷ್ಟೆ. ರಾಜ್ಯದ ಹಾಗೂ ದೇಶದ‌ ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ. ನಾನು ರಾಜ್ಯದ ಮಹಿಳೆಯರಿಗೆ ಕರೆ‌ ನೀಡ್ತಿನಿ ಇಂತಹ ಹಿಡನ್ ಅಜೆಂಡಾ ಇಟ್ಟುಕೊಂಡಿರುವ ಬಿಜೆಪಿಗೆ ಧಿಕ್ಕಾರ ಕೂಗಬೇಕು. ಸಂಜಯ್ ಪಾಟೀಲ್ ಅವರ ಹೇಳಿಕೆಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಸಂಸದೆ ಮಂಗಳಾ‌ ಅಂಗಡಿ ನಕ್ಕರು. ಇದು ಬಿಜೆಪಿಯ ಹಿಡನ್ ಅಜೆಂಡಾ ಎಂಬುದನ್ನು ತೋರಿಸುತ್ತೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಸಂಜಯ್ ಪಾಟೀಲ್ ಅವರ ಹೇಳಿಕೆಯನ್ನು ವೇದಿಕೆ ಮೇಲೆಯೇ ಬಿಜೆಪಿ ನಾಯಕರು ಖಂಡಿಸಬೇಕಿತ್ತು. ಖಂಡಿಸಿದ್ರೆ ಬಿಜೆಪಿಯವರು ಹೆಣ್ಣಿಗೆ ಗೌರವ ಕೊಡ್ತಾರೆ ಎಂದಾಗುತ್ತಿತ್ತು. ಆದರೆ ಇವತ್ತು ಬಿಜೆಪಿಯವರ ಮುಖವಾಡ ಕಳಚಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ...

Back to top button
>