ರಾಜಕೀಯರಾಜ್ಯ

ಮಧ್ಯಪ್ರಾಚ್ಯ ಸಂಘರ್ಷ ಮುಂದುವರಿದರೆ ತೈಲ ಬೆಲೆ ಹೆಚ್ಚಾಗುತ್ತದೆ: ವಿದೇಶಾಂಗ ಸಚಿವ ಜೈಶಂಕರ್

Oil prices will rise if Middle East conflict continues: External Affairs Minister Jaishankar

  • ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದರೆ, ತೈಲ ಬೆಲೆಗಳು ಹೆಚ್ಚಾಗುವುದರಿಂದ ಭಾರತದ ಮೇಲೆ ದೊಡ್ಡ ಪರಿಣಾಮ ಉಂಟುಮಾಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಹಿರಿಯ ಸಂಪಾದಕರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಜೈಶಂಕರ್ ಅವರು, “ಮಧ್ಯಪ್ರಾಚ್ಯ ಸಂಘರ್ಷದಿಂದ ಆಮದು ವೆಚ್ಚಗಳು, ಶಿಪ್ಪಿಂಗ್ ವೆಚ್ಚಗಳು, ವಿಮಾ ವೆಚ್ಚಗಳು, ಇಂಧನ ವೆಚ್ಚಗಳು ಮತ್ತು ಮತ್ತೆ ತೈಲ ಬೆಲೆಗಳು ಹೆಚ್ಚಾಗಲಿವೆ” ಎಂದರು.

ಕಚ್ಚಾ ತೈಲ ಬೆಲೆ ಹೆಚ್ಚಳದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗಲಿವೆ. ಚಿಲ್ಲರೆ ಹಣದುಬ್ಬರಕ್ಕೆ ಇದು ಕಾರಣವಾಗುತ್ತದೆ. ಇದು ಬಿಜೆಪಿಯ ಭವಿಷ್ಯದ ಮೇಲೆ ಮತ್ತು ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸ ಜೈಶಂಕರ್ ಅವರು, “ನಾವು ಈಗಾಗಲೇ ಮತದಾನಕ್ಕೆ ಹತ್ತಿರವಾಗಿದ್ದೇವೆ …. ಇನ್ನೂ ಕೆಲವೇ ವಾರಗಳಲ್ಲಿ ಚುನಾವಣೆ ಇದೆ. ಆದರೆ ಇದು ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾವಿಸುತ್ತೇನೆ ” ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಉಚಿತ ಪಡಿತರ, ವಸತಿ, ವಿದ್ಯುತ್, ನೀರು ಮತ್ತು ರಸ್ತೆಗಳನ್ನು ಜನ ನೋಡುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ಜನರು ಕಾಂಗ್ರೆಸ್‌ನ ಭರವಸೆಗಳನ್ನು ನಂಬುವುದಿಲ್ಲ ಎಂದು ಹೇಳಿದ ಸಚಿವರು, “ನಾನು ಸುಮಾರು 50 ವರ್ಷಗಳಿಂದ ಸರ್ಕಾರದಲ್ಲಿದ್ದೇನೆ. ಆಗಾಗ ಜನ ಹೇಳುತ್ತಾರೆ, ನಮಗೂ ಒಂದು ಉತ್ತಮ ಯೋಜನೆ ಇತ್ತು ಹೇಳುತ್ತಾರೆ. ನಾನು ನನ್ನ ವೃತ್ತಿಜೀವನವನ್ನು ರಾಜ್ಯದ, ಬೆಳಗಾವಿಯಲ್ಲಿ ತರಬೇತಿ ಅಧಿಕಾರಿಯಾಗಿ ಪ್ರಾರಂಭಿಸಿದೆ. [ಆಗಿನ ಸಿಎಂ] ದೇವರಾಜ್ ಅರಸು ದಲಿತರಿಗೆ ಮನೆ ನೀಡುವ ಯೋಜನೆ ಜಾರಿಗೆ ತಂದರು. ಆದರೆ ನಿಮಗೆ ವರ್ಷದಲ್ಲಿ ಐದು ಮನೆಗಳು ಸಿಗುತ್ತಿದ್ದವು. ಇಂದು ಅದೇ ಜಾಗದಲ್ಲಿ 5000 ಮನೆಗಳು ಸಿಗುತ್ತವೆ ಎಂದರು.

ಬರ ಪರಿಹಾರ ನಿಧಿ ಮತ್ತು ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಜೈಶಂಕರ್, ರಾಜ್ಯವು ಎಸ್‌ಡಿಆರ್‌ಎಫ್‌ನಿಂದ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ಬರ ಪರಿಹಾರವನ್ನು ನೀಡಬೇಕಾಗಿದೆ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ಅಡಿಯಲ್ಲಿ ಹಣ ಬಿಡುಗಡೆ ಮಾಡಲು ಅನುಮತಿ ಕೋರಿ ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎಂದು ಹೇಳಿದರು.

ಇರಾನ್‌ನ ಕಮಾಂಡೋಗಳು 17 ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಇಸ್ರೇಲ್ ಮೂಲದ ಸರಕು ಸಾಗಣೆ ಹಡಗನ್ನು ವಶಪಡಿಸಿಕೊಂಡಿದ್ದು, ಅವರನ್ನು ಭಾರತಕ್ಕೆ ಕರೆತರುವ ಬಗ್ಗೆ ಭಾರತ ಗಮನ ಹರಿಸಿದೆ. ಇಸ್ರೇಲ್‌ ಮೇಲೆ ಸಾಕಷ್ಟು ಒತ್ತಡವಿದೆ. ಆದರೆ ಇಸ್ರೇಲ್‌ನಲ್ಲಿನ ಭಾವನೆ ಪ್ರಪಂಚದ ಉಳಿದ ಭಾಗಗಳಿಗಿಂತ ಭಿನ್ನವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ...

Back to top button
>