ರಾಜಕೀಯರಾಜ್ಯ

ಬಿಜೆಪಿ ಪ್ರಣಾಳಿಕೆ ಮೋದಿ ಪಿಕ್ನಿಕ್‌ ಆಲ್ಬಮ್ ನಂತಿದೆ: ಪ್ರಿಯಾಂಕ್‌ ಖರ್ಗೆ ವ್ಯಂಗ್ಯ

BJP manifesto is like Modi picnic album: Priyank Kharge quips

  • ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮೋದಿ ಪಿಕ್ನಿಕ್‌ ಆಲ್ಬಮ್ ನಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರು ಅವರು, ‘ಪ್ರಣಾಳಿಕೆ ಪುಸ್ತಕದಲ್ಲಿ ಮೋದಿ ಅವರು ಪಿಕ್ನಿಕ್‌ನ ತರಹೇವಾರಿ ಫೋಟೊಗಳು ಬಿಟ್ಟರೆ ಯುವಕರು,‌ ಮಹಿಳೆಯರು, ರೈತರು, ಬಡವರು, ಶ್ರಮಿಕರು ಹಾಗೂ ನಿರ್ಗತಿಕರಿಗೆ ಉಪಯೋಗ ಆಗುವಂತ ಯಾವುದೇ ಅಂಶಗಳಿಲ್ಲ. ಕೊಟ್ಟ ಆಶ್ವಾಸನೆಗಳು ಹೇಗೆ, ಯಾವಾಗ ಈಡೇರಿಸುತ್ತೇವೆ ಎನ್ನುವ ಸ್ಪಷ್ಟತೆ ಕಾಣಿಸುತ್ತಿಲ್ಲ ಎಂದು ಹೇಳಿದರು.

ಅಚ್ಚೇದಿನ್, ಅಮೃತ ಕಾಲ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಘೋಷಣೆಗಳು ಏನಾದವು? 100 ಸ್ಮಾರ್ಟ್‌ ಸಿಟಿಗಳ ಎಲ್ಲಿಗೆ ಬಂದವು? ವರ್ಷಕ್ಕೆ 2 ಕೋಟಿಯಂತೆ 20 ಕೋಟಿ ಉದ್ಯೋಗ ಸೃಷ್ಟಿಯಾಗಿವೆಯಾ? ವಾರಂಟಿಯೇ ಇಲ್ಲದ ಮೋದಿ ಗ್ಯಾರಂಟಿಗಳನ್ನು ಜನರು ನಂಬುವುದಿಲ್ಲ. ನಮ್ಮ ಸರ್ಕಾರದ ಗ್ಯಾರಂಟಿಗಳನ್ನೇ ಕಾಪಿ‌ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಕೇಂದ್ರದ ಅಂಕಿ ಅಂಶಗಳ ಪ್ರಕಾರ, ಕೇಂದ್ರದ ವಿವಿಧ ಇಲಾಖೆಗಳಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಹಣಕಾಸು ಇಲಾಖೆಯಲ್ಲಿ 9.64 ಲಕ್ಷ, ರೈಲ್ವೆಯಲ್ಲಿ 3 ಲಕ್ಷ, ಸೇನೆಯ ನಾಗರಿಕ ವಿಭಾಗದಲ್ಲಿ 2.2 ಲಕ್ಷ, ಅಂಚೆ ಇಲಾಖೆಯಲ್ಲಿ 1.20 ಲಕ್ಷ, ಕಂದಾಯ ಇಲಾಖೆಯಲ್ಲಿ 74 ಸಾವಿರ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಯಾವಾಗ ಭರ್ತಿ ಮಾಡುತ್ತಾರೆ ಎಂಬ ಪ್ರಸ್ತಾಪ ಪ್ರಣಾಳಿಕೆಯಲ್ಲಿ ಮಾಡಿಲ್ಲ ಎಂದರು.

ಇದನ್ನೂ ಓದಿ...

Back to top button
>