ರಾಜಕೀಯರಾಜ್ಯ

I.N.D.I.A ಒಕ್ಕೂಟ ಗೆಲ್ಲುವುದಿಲ್ಲ ಎಂಬುದು ರಾಹುಲ್ ಗಾಂಧಿಗೂ ತಿಳಿದಿರುವ ಬಹಿರಂಗ ಸತ್ಯ: ವಿಜಯೇಂದ್ರ (ಸಂದರ್ಶನ)

I.N.D.I.A coalition will not win is an open truth even Rahul Gandhi knows: Vijayendra (Interview)

  • ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
Q
ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಹೇಳಿಕೆ ವಾಸ್ತವಿಕವೇ?
A

ಕಾಂಗ್ರೆಸ್‌ನ ಭರವಸೆ ಯೋಜನೆಗಳ ಹೊರತಾಗಿಯೂ, ಜನರು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದ ಬೆಂಗಳೂರು ಗ್ರಾಮಾಂತರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಜನರು ಬದಲಾವಣೆ ಬಯಸಿದ್ದಾರೆ. ಮೋದಿ ಅಲೆ ಮತ್ತು ಡಾ.ಸಿ.ಎನ್.ಮಂಜುನಾಥ್ ಅವರು ಅಭ್ಯರ್ಥಿಯಾಗಿರುವುದು ಬಿಜೆಪಿಗೆ ನೆರವಾಗಲಿದೆ. ನಾನು ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಸಂಚರಿಸಿದ್ದೇನೆ, ನಮಗೆ ಗೆಲ್ಲಲು ಸಾಧ್ಯವಾಗದ ಕ್ಷೇತ್ರವಿಲ್ಲ. ಜನರು ಬಿಜೆಪಿ ಜೊತೆಗಿರುವುದು ಸ್ಪಷ್ಟವಾಗಿದೆ.

Q

ಚುನಾವಣೆಯ ನಂತರ ಬಿಜೆಪಿ ನೆಲಕಚ್ಚುತ್ತದೆ ಎಂಬ ತಪ್ಪು ಕಲ್ಪನೆಯನ್ನು ಮೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆಯಲ್ಲ?

A

ರಾಜ್ಯದಲ್ಲಿ ಅಥವಾ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸವಿದ್ದರೆ, ತಮ್ಮ ಪ್ರಣಾಳಿಕೆಯಲ್ಲಿ ಮಹಿಳೆಗೆ ತಲಾ 1 ಲಕ್ಷ ರೂ. ಭರವಸೆ ನೀಡುತ್ತಿರಲಿಲ್ಲ. ಅವರ ಪ್ರಣಾಳಿಕೆಯೇ ಅವರು ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ತೋರಿಸುತ್ತದೆ. ರಾಜ್ಯದಲ್ಲಿ ಕಳೆದ 10 ತಿಂಗಳ ಸಾಧನೆಯ ಬಗ್ಗೆ ಕಾಂಗ್ರೆಸ್‌ಗೆ ಅಷ್ಟೊಂದು ವಿಶ್ವಾಸವಿದ್ದರೆ ಸುಮಾರು 10-15 ಸಚಿವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ಒಬ್ಬ ಸಚಿವರೂ ಸ್ಪರ್ಧಿಸುವ ಧೈರ್ಯ ಮಾಡಿಲ್ಲ. ಅದಕ್ಕೆ ಕಾರಣ ನರೇಂದ್ರ ಮೋದಿಯವರ ಜನಪ್ರಿಯತೆ. ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿದ್ದಾರೆ ಮತ್ತು ಭರವಸೆಗಳ ಬಗ್ಗೆ ಮಾತನಾಡುವ ಮೂಲಕ ಮತದಾರರನ್ನು ಮನವೊಲಿಸಬಹುದು ಎಂದು ಭಾವಿಸಿದ್ದಾರೆ. ಆದರೆ ಜನರು ಬುದ್ಧಿವಂತರು ಮತ್ತು ಅವರು ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳ ನಡುವೆ ಸುಲಭವಾಗಿ ವ್ಯತ್ಯಾಸ ಗುರುತಿಸುತ್ತಾರೆ. I.N.D.I.A ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ರಾಹುಲ್ ಗಾಂಧಿ ಕೂಡ ಒಪ್ಪುತ್ತಾರೆ. ಅಷ್ಟು ವಿಶ್ವಾಸವಿದ್ದರೆ ಅವರು ಅಮೇಥಿಯಿಂದ ಸ್ಪರ್ಧಿಸುತ್ತಿದ್ದರು ಹೊರತು ವಯನಾಡಿನಲ್ಲ.

Q

ಬಿಜೆಪಿ 370 ಅಥವಾ 400 ಸೀಟುಗಳನ್ನು ಗೆಲ್ಲುವ ವಿಶ್ವಾಸವಿದ್ದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಕಾರಣವೇನು?

A

ಮೈತ್ರಿಗೆ ಕಾರಣ ಎನ್ನುವುದಕ್ಕಿಂತ ಮುಖ್ಯವಾಗಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ 10 ವರ್ಷಗಳ ನಂತರವೂ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಉಳಿದುಕೊಂಡಿದೆ. ಮೋದಿಯವರ ನಾಯಕತ್ವದಲ್ಲಿ ಎಷ್ಟೊಂದು ನಂಬಿಕೆ ಮರುಕಳಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಮತ್ತು ಎನ್‌ಡಿಎ ಭಾಗವಾಗಬೇಕು ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಹೇಳಿದರೆ ನಾವು ‘ಇಲ್ಲ’ ಎಂದು ಹೇಳುತ್ತೇವೆಯೇ? I.N.D.I.A ಬ್ಲಾಕ್ ಅನ್ನು ನೋಡಿ. ಅವರೆಲ್ಲರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒಗ್ಗೂಡಿದ್ದಾರೆ ಅವರಿಗೆ ರಾಷ್ಟ್ರೀಯ ಹಿತಾಸಕ್ತಿ ಇಲ್ಲ.

Q

ತೆರಿಗೆ ಹಂಚಿಕೆ ಮತ್ತು ಬರ ಪರಿಹಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂಬುದು ಕೇಂದ್ರದ ಮೇಲಿರುವ ಪ್ರಮುಖ ಆರೋಪ. ನಿಮ್ಮ ವ್ಯಾಖ್ಯಾನವೇನು?

A

ರೈತರಿಗೆ 2000 ರೂಪಾಯಿ ನೀಡುವುದನ್ನು ಬಿಟ್ಟು ಕಾಂಗ್ರೆಸ್ ಸರ್ಕಾರ ಏನು ಮಾಡಿದ್ದಾರೆ? ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಅತಿವೃಷ್ಟಿಗೆ ಕೇಂದ್ರದ ಅನುದಾನ ಬಿಡುಗಡೆ ಮಾಡಲು ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿದ್ದರು, ಆದರೆ ಯಡಿಯೂರಪ್ಪ ಅವರು ಮನೆ ಕಳೆದುಕೊಂಡವರಿಗೆ 4 ಲಕ್ಷ ನೀಡಿದ್ದರು, ಆದರೂ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ 1 ಲಕ್ಷ ರೂ. ತೋಟಗಾರಿಕೆ ಬೆಳೆಗಳಿಗೆ ಹೆಕ್ಟೇರ್‌ಗೆ 24 ಸಾವಿರ ಹಾಗೂ ಇತರೆ ಬೆಳೆಗಳಿಗೆ 14 ಸಾವಿರ ರೂ. ನಿಗದಿ ಪಡಿಸಲಾಗಿದೆ.

ರಾಜ್ಯಕ್ಕೆ ಇನ್ನೂ ಬರ ಪರಿಹಾರ ಸಿಕ್ಕಿಲ್ಲ ನಿಜ. ಇತರ ರಾಜ್ಯಗಳು ಬರಗಾಲದಿಂದ ತತ್ತರಿಸುತ್ತಿವೆ, ಆದರೆ ಯಾವುದೇ ಸಿಎಂ ಇದನ್ನು ರಾಜಕೀಯ ವಿಷಯವಾಗಿ ಮಾಡಲು ಪ್ರಯತ್ನಿಸಲಿಲ್ಲ. ಕಾಂಗ್ರೆಸ್ ಸರ್ಕಾರ ಕೊಳಕು ರಾಜಕಾರಣ ಮಾಡಲು ಯತ್ನಿಸುತ್ತಿದೆ. ರೈತರ ರಕ್ಷಣೆಗೆ ಮುಂದಾಗುವುದು ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲವೇ? ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೀಡಿ 2000 ಕೋಟಿ ಬಿಡುಗಡೆ ಮಾಡುವ ಬಗ್ಗೆ ಸಿಎಂ ಮಾತನಾಡುತ್ತಾರೆ. ರೈತರಿಗೆ 7,000 ರಿಂದ 8000 ರೂ ಏಕೆ ನೀಡಬಾರದು? ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಅವುಗಳನ್ನು ಬಹಿರಂಗಪಡಿಸುತ್ತಿದ್ದೇವೆ.

Q

ಕೆ.ಎಸ್.ಈಶ್ವರಪ್ಪ ಸ್ವತಂತ್ರ ಅಭ್ಯರ್ಥ, ಧಾರವಾಡದಲ್ಲಿ ದಿಂಗಾಲೇಶ್ವರ ಸ್ವಾಮಿ , ಸಂಗಣ್ಣ ಕರಡಿ ಕಾಂಗ್ರೆಸ್‌ಗೆ ಸೇರ್ಪಡೆ, ಈ ಬೆಳವಣಿಗೆಗಳ ಬಗ್ಗೆ ನಿಮ್ಮ ಅಭಿಪ್ರಾಯ?

A

ಶಿವಮೊಗ್ಗದಲ್ಲಿ (ಬಿವೈ) ರಾಘವೇಂದ್ರ 2 ಲಕ್ಷಕ್ಕೂ ಅಧಿಕ ಅಂತರದಿಂದ ಗೆಲ್ಲುತ್ತಾರೆ, ಅಭಿವೃದ್ಧಿ ವಿಚಾರದಲ್ಲಿ ಶಿವಮೊಗ್ಗ ಜಿಲ್ಲೆಗೆ ಈಶ್ವರಪ್ಪ ಕೊಡುಗೆ ದೊಡ್ಡ ಶೂನ್ಯ. ಪ್ರಲ್ಹಾದ್ ಜೋಶಿ ಕೂಡ 1.5 ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲ್ಲಲಿದ್ದಾರೆ. ಸ್ವಾಮೀಜಿ ಸ್ಪರ್ಧಿಸದಂತೆ ಮನವಿ ಮಾಡಿದ್ದೆವು. ಕೊಪ್ಪಳದಲ್ಲಿ ಕರಡಿ ಸಂಗಣ್ಣ ಒಂಬತ್ತನೇ ಬಾರಿ ಪಕ್ಷ ಬದಲಾಯಿಸಿದರೂ ನಾವೇ ಗೆಲ್ಲುತ್ತೇವೆ.

Q

ಲೋಕಸಭೆ ಚುನಾವಣಾ ಫಲಿತಾಂಶಗಳು ರಾಜ್ಯ ಸರ್ಕಾರದ ಸ್ಥಿರತೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ನೀವು ಭಾವಿಸುತ್ತೀರಾ?

A

ಕರ್ನಾಟಕದ ಲೋಕಸಭಾ ಫಲಿತಾಂಶದ ಖಂಡಿತವಾಗಿಯೂ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸುತ್ತದೆ. ಡಿಕೆ ಶಿವಕುಮಾರ್ ಅವರಿಗೆ ಸಿಎಂ ಆಗಲು ನಾಲ್ಕು ವರ್ಷ ಕಾಯುವ ತಾಳ್ಮೆ ಇಲ್ಲ ಎಂದು ನನಗನಿಸುತ್ತದೆ. ಅದೇ ಸಮಯದಲ್ಲಿ ಸಿದ್ದರಾಮಯ್ಯ ಅದನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಆದರೆ ವಿರೋಧ ಪಕ್ಷದಲ್ಲಿ ಕೂರಲು ನಮಗೆ ಸಂತೋಷವಾಗಿದೆ.

ಇದನ್ನೂ ಓದಿ...

Back to top button
>