ಆರೋಗ್ಯ

ನೈಸರ್ಗಿಕವಾಗಿ ನಮಗೆ ಲಭ್ಯವಿರುವ ಕೆಲವು ಪದಾರ್ಥಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಂಶಗಳಿವೆ

Some of the substances available to us naturally have immunity boosting properties

Heath and Immunity booster:ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಿಂದ ವಿವಿಧ ಋತುಮಾನಗಳಲ್ಲಿ ಕಾಡುವ ಕಾಯಿಲೆಗಳಿಂದ ದೂರ ಇರಬಹುದು. ಮಾತ್ರವಲ್ಲ ಇವು ಸೋಂಕುಗಳ ವಿರುದ್ಧವೂ ಹೋರಾಡುತ್ತವೆ.

ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ರೋಗನಿರೋಧಕ ಶಕ್ತಿಯನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಂಶಗಳಿವೆ. ಅವು ತಮ್ಮ ಆಂಟಿಆಕ್ಸಿಡೆಂಟ್‌ ಹಾಗೂ ಉರಿಯೂತ ವಿರೋಧ ಪರಿಣಾಮದೊಂದಿಗೆ ದೇಹವನ್ನು ಬಲಪಡಿಸುತ್ತವೆ ಮತ್ತು ಪೌಷ್ಟಿಕಾಂಶದ ಕೊರತೆಯನ್ನು ನಿಭಾಯಿಸುವ ಮೂಲಕ ದೀರ್ಘಕಾಲದ ಕಾಯಿಲೆಗಳನ್ನು ನಿರ್ವಹಿಸಲು ಅಥವಾ ತಡೆಯಲು ಸಹಾಯ ಮಾಡಬಹುದು.

ಹಾರ್ಮೋನುಗಳ ಅಸಮತೋಲನ, ಯಕೃತ್ತಿನ ಆರೋಗ್ಯ, ಕೊಲೆಸ್ಟ್ರಾಲ್, ಜೀರ್ಣಕಾರಿ ಆರೋಗ್ಯ, ಹೃದಯದ ಆರೋಗ್ಯದಿಂದ ಚರ್ಮ ಮತ್ತು ಕೂದಲಿನ ಆರೋಗ್ಯ, ಈ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು ಸಹಾಯ ಮಾಡುವ ನೈಸರ್ಗಿಕ ಪೂರಕಗಳಿವೆ. ಆದರೆ ಈ ಆಹಾರಗಳ ಸೇವನೆಗೂ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.

ವಿಶ್ವ ಆರೋಗ್ಯ ದಿನದ (ಏಪ್ರಿಲ್ 7) ಸಂದರ್ಭದಲ್ಲಿ, ಪೌಷ್ಟಿಕತಜ್ಞೆ ಮತ್ತು ದಿ ಹೆಲ್ತ್ ಪ್ಯಾಂಟ್ರಿಯ ಸಂಸ್ಥಾಪಕರಾದ ಖುಷ್ಬೂ ಜೈನ್ ತಿಬ್ರೆವಾಲಾ ಪ್ರತಿರಕ್ಷಣಾ ವ್ಯವಸ್ಥೆಯ ಸುಧಾರಣೆಗೆ ಪೂರಕವಾಗಿರುವ ಕೆಲವು ನೈಸರ್ಗಿಕ ಪದಾರ್ಥಗಳು ಹಾಗೂ ಅವುಗಳ ಉಪಯೋಗಗಳ ಬಗ್ಗೆ ಹಿಂದೂಸ್ತಾನ್‌ ಟೈಮ್ಸ್‌ ಜೊತೆಗೆ ಮಾತನಾಡಿದ್ದಾರೆ.

ಮಿಲ್ಕ್‌ ಥಿಸಲ್‌
ಮಿಲ್ಕ್‌ ಥಿಸಲ್‌ ಅಥವಾ ಸಿಲಿಬಮ್‌ ಮರಿಯಾನಮ್‌ ಎನ್ನುವುದು ಒಂದು ಹಸಿರೆಲೆಯ, ನೇರಳೆ ಹೂ ಬಿಡುವ ಸಸ್ಯ. ಇದರಲ್ಲಿ ಸಿಲಿಮರಿನ್‌ ಎಂಬ ಸಕ್ರಿಯ ಸಂಯುಕ್ತವಿದೆ. ಇದು ಆಂಟಿಆಕ್ಸಿಡೆಂಟ್‌ ಹಾಗೂ ಉರಿಯೂತ ನಿವಾರಣೆಯ ಅಂಶಗಳನ್ನು ಹೊಂದಿದೆ. ಯಕೃತ್ತಿನ ಉರಿಯೂತ ಮತ್ತು ಹಾನಿಯನ್ನು ತಡೆಯಲು ಇದರ ಸೇವನೆ ಉತ್ತಮ. ಇದು ಫ್ರಿ ರಾಡಿಕಲ್‌ಗಳ ಹಾನಿಯನ್ನು ತಡೆಯುತ್ತದೆ. ಮಿಲ್ಕ್‌ ಥಿಸಲ್‌ ವಯಸ್ಸಾದವರಲ್ಲಿ ಕಾಣಿಸುವ ಮೆದುಳಿನ ಕ್ರಿಯೆಯ ಸಮಸ್ಯೆಯನ್ನು ನಿವಾರಿಸುವ ಗುಣವನ್ನು ಹೊಂದಿದೆ. ಇನ್ಸುಲಿನ್‌ ಸಂವೇದನೆಯನ್ನು ನಿಧಾನಗೊಳಿಸುತ್ತದೆ. ಋತುಬಂಧದ ನಂತರದ ಮೂಳೆಯ ಸಮಸ್ಯೆಯನ್ನು ನಿವಾರಿಸುತ್ತದೆ.

ಅರಿಸಿನ
ಶತ ಶತಮಾನಗಳ ಹಿಂದಿನಿಂದಲೂ ಅರಿಸಿನವನ್ನು ಆಹಾರದಲ್ಲಿ ಬಳಸಲಾಗುತ್ತಿದ್ದು, ಇದರಿದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಅರಿಸಿನವು ದೇಹದ ಪ್ರತಿ ಅಂಗಗಳಿಗೂ ಪ್ರಯೋಜನ ನೀಡುವ ಆಹಾರಗಳಲ್ಲಿ ಒಂದಾಗಿದೆ. ಇದು ಪ್ರತಿಯೊಂದು ಅಂಗವನ್ನು ಹಾನಿಯಿಂದ ರಕ್ಷಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹೃದ್ರೋಗ, ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳ ನಿವಾರಣೆಗೂ ಇದು ಸಹಕಾರಿ. ಖಿನ್ನತೆಗೂ ಇದು ಮದ್ದು.

ಪಾಚಿ ಎಣ್ಣೆ (Algae Oil)
ಪಾಚಿ ಎಣ್ಣೆಯು ಸಸ್ಯಾಹಾರಿ ಮೂಲವಾಗಿದೆ. ಮೀನಿನೆಣ್ಣೆಯಂತೆ ಇದರಲ್ಲೂ ಒಮೆಗಾ-3 ಅಂಶ ಸಮೃದ್ಧವಾಗಿದೆ. ಒಮೆಗಾ-3 ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹಾರ್ಮೋನ್ ಸಮತೋಲನವನ್ನು ಸುಧಾರಿಸುತ್ತದೆ. ಇದರ ಸೇವನೆಯಿಂದ ದೃಷ್ಟಿ ಸುಧಾರಣೆ ಹಾಗೂ ಖಿನ್ನತೆಯನ್ನು ನಿಯಂತ್ರಿಸಬಹುದು.

ಸ್ಪಿರುಲಿನಾ
ಸ್ಪಿರುಲಿನಾ ನೀಲಿ ಹಸಿರು ಪಾಚಿಯಾಗಿದ್ದು, ಇದನ್ನು ಒಣಗಿಸಿ ಪುಡಿ ಮಾಡಿ ಸೇವಿಸಲಾಗುತ್ತದೆ. ಇದು ಪ್ರೊಟೀನ್‌ ಹಾಗೂ ತಾಮ್ರದ ಮೂಲವಾಗಿದೆ. ಇದರಲ್ಲಿ ʼಫೈಕೊಸೈನಿನ್’ ಎಂಬ ಸಕ್ರಿಯ ಸಂಯುಕ್ತವಿದ್ದು, ಇದು ಆಕ್ಸಿಡೇಟಿವ್ ಹಾನಿ, ಕೊಲೆಸ್ಟ್ರಾಲ್‌ ಹಾಗೂ ರಕ್ತದೊತ್ತಡದಂತಹ ಮೆಟಾಬಾಲಿಕ್‌ ಸಿಂಡ್ರೋಮ್‌ ಲಕ್ಷಣಗಳನ್ನು ನಿಯಂತ್ರಿಸುತ್ತದೆ. ಅಲರ್ಜಿಕ್ ರಿನಿಟಿಸ್ ಇರುವವರಿಗೆ ಇದು ತುಂಬಾ ಒಳ್ಳೆಯದು. ಸ್ನಾಯುಗಳ ಬೆಳವಣಿಗೆಗೆ ಅತ್ಯುತ್ತಮವಾಗಿದೆ.

ತ್ರಿಫಲ
ತ್ರಿಫಲವು ಹರಿತಕಿ, ಅಮಲಕಿ ಮತ್ತು ಭಿಭಿಟಕಿ ಎಂಬ 3 ಗಿಡಮೂಲಿಕೆಗಳ ಸಂಯೋಜನೆಯಾಗಿದೆ. ಈ ಪೂರಕವು ಮಲಬದ್ಧತೆ ಮತ್ತು ಆಮ್ಲೀಯತೆಯನ್ನು ನಿವಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಸುಧಾರಿಸುವುದು ಮಾತ್ರವಲ್ಲ, ಒತ್ತಡವನ್ನೂ ನಿಯಂತ್ರಿಸುತ್ತದೆ. ಯಕೃತ್ತಿನ ಹಾನಿಯನ್ನು ತಡೆಯುತ್ತದೆ. ಇದು ದೇಹದಲ್ಲಿನ ಕೊಬ್ಬು ಕರಗಲು ಸಹಕಾರಿ. ಇದನ್ನು ಯಾವಾಗಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ ಸೇವಿಸಬೇಕು.

ಬೆಳ್ಳುಳ್ಳಿ
ಬೆಳ್ಳುಳ್ಳಿ ಅಲಿಸಿನ್ ಎಂಬ ಸಕ್ರಿಯ ಸಂಯುಕ್ತವನ್ನು ಹೊಂದಿದ್ದು ಅದರಲ್ಲಿ ಹಲವು ಆರೋಗ್ಯ ಪ್ರಯೋಜನಗಳಿವೆ. ಇದು ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಝೈಮರ್ಸ್‌ನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಹೃದಯರಕ್ತನಾಳದ ಆರೋಗ್ಯ ಸುಧಾರಣೆಗೂ ಇದು ಸಹಕಾರಿ. ಒಂದು ಬೆಳುಳ್ಳಿ ಎಸಳು ಹಲವು ರೀತಿಯಲ್ಲಿ ದೇಹಾರೋಗ್ಯಕ್ಕೆ ಸಹಾಯ ಮಾಡುವುದು ಮಾತ್ರ, ಒಟ್ಟಾರೆ ಮನುಷ್ಯ ದೇಹದ ಆರೋಗ್ಯ ಸುಧಾರಿಸಿ ಆಯುಷ್ಯ ಹೆಚ್ಚುವಂತೆ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಎಸಳು ಬೆಳ್ಳುಳ್ಳಿಯೊಂದಿಗೆ ಕೆಲವು ಹನಿ ಜೇನುತುಪ್ಪ ಸೇರಿಸಿ ಸೇವಿಸುವುದು ಉತ್ತಮ.

ರೆಸ್ವೆರಾಟ್ರೋಲ್
ದ್ರಾಕ್ಷಿ, ಬೆರಿ ಹಣ್ಣುಗಳು, ಕಡಲೆ ಹಾಗೂ ಕೆಂಪುವೈನ್‌ಗಳಲ್ಲಿ ಈ ಸಂಯುಕ್ತ ಕಂಡು ಬರುತ್ತದೆ. ಇದು ರಕ್ತದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ. ಚರ್ಮ ಮತ್ತು ಮೆದುಳಿನಲ್ಲಿ ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳನ್ನು ನಿಧಾನಗೊಳಿಸುತ್ತದೆ. ಇದು ಪಿಸಿಓಎಸ್, ಟೈಪ್-2 ಡಯಾಬಿಟಿಸ್, ಫ್ಯಾಟಿ ಲಿವರ್ ಮುಂತಾದ ಇನ್ಸುಲಿನ್‌ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿನ ಉರಿಯೂತ ವಿರೋಧಿ ಅಂಶಗಳಿದ್ದು, ಇದು ರುಮಟಾಯ್ಡ್ ಸಂಧಿವಾತ ಮತ್ತು ಇತರ ಸ್ವಯಂ ನಿರೋಧಕ ಅಸ್ವಸ್ಥತೆಗಳ ಲಕ್ಷಣಗಳನ್ನು ಸಹ ಕಡಿಮೆ ಮಾಡುತ್ತದೆ.

ಇದನ್ನೂ ಓದಿ...

Back to top button
>