ಸಿನಿಮಾ ಸುದ್ದಿ

ಡಾ. ರಾಜ್‌ ಅವರ ವಿರುದ್ಧದ ಆಪಾದನೆಯನ್ನು ಸುಳ್ಳು ಎಂದು ಬಹಿರಂಗಪಡಿಸಿದ್ದೇನೆ’; ಪ್ರಕಾಶ್‌ ರಾಜ್‌ ಮೇಹು

Dr. I exposed the allegation against Raj as false'; Prakash Raj Mehu

Prakash Raj Mehu on Dr Raj: ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ಅವರ ಒಂದೇ ಒಂದು ಸೋಷಿಯಲ್‌ ಮೀಡಿಯಾ ಪೋಸ್ಟ್‌ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ನೆಲಮಂಗಲ ಬಳಿ ಹಿರಿಯ ನಟಿ ಲೀಲಾವತಿ ಮತ್ತು ಮಗ ವಿನೋದ್‌ ರಾಜ್‌ ವಾಸವಾಗಿದ್ದಾರೆ. ಆಗೊಮ್ಮೆ ಈಗೊಮ್ಮೆ ಸುದ್ದಿಯ ಮುನ್ನೆಲೆಗೆ ಬರುತ್ತಿರುತ್ತಾರೆ. ಇದೀಗ ಇದೇ ಕುಟುಂಬದ ಬಗ್ಗೆ ಪ್ರಕಾಶ್‌ ಮೇಹು ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ವಿನೋದ್‌ ರಾಜ್‌ ಅವರಿಗೆ ಮದುವೆ ಆಗಿಲ್ಲ, ಅಮ್ಮನೊಂದಿಗೆ ವಾಸವಿದ್ದಾರೆ ಎಂಬುದಷ್ಟೇ ಈ ವರೆಗೂ ಹೊರಜಗತ್ತಿಗೆ ಗೊತ್ತಿದ್ದ ಸತ್ಯವಾಗಿತ್ತು. ಆದರೆ, ಇದೇ ವಿನೋದ್‌ ರಾಜ್‌ಗೆ ಎದೆಯತ್ತರ ಬೆಳೆದ ಮಗನಿದ್ದಾನೆ, ಪತ್ನಿ ಇದ್ದಾರೆ ಎಂಬ ಸತ್ಯ ಯಾರಿಗೂ ತಿಳಿರಲಿಲ್ಲ. ಈಗ ಇದೇ ವಿಚಾರವನ್ನು ಕೆದಕಿ, ಸತ್ಯವನ್ನು ಹೊರಗಡವಿದ್ದೇನೆ ಎನ್ನುತ್ತಿದ್ದಾರೆ ನಿರ್ದೇಶಕ ಪ್ರಕಾಶ್‌ ರಾಜ್ ಮೇಹು. ಮುಂದುವರಿದು ಈ ಕೆಲಸ ಏಕೆ ಮಾಡಿದ್ದೇನೆ ಎಂಬುದನ್ನೂ ಅವರು ಹೇಳಿಕೊಂಡಿದ್ದಾರೆ

ರಾಜ್‌ ಕುಟುಂಬ ಅಭಿಮಾನಿ ನಾನು..

ಈ ದಾಖಲೆಗಳನ್ನು ಕಳೆದ ಆರು ತಿಂಗಳ ಹಿಂದೆಯೇ ಸಂಗ್ರಹಿಸಿದ್ದ ಪ್ರಕಾಶ್‌ ರಾಜ್‌ ಮೇಹು, ಅದನ್ನು ಬಹಿರಂಗಪಡಿಸಲು ಸರಿಯಾದ ಸಮಯಕ್ಕೆ ಕಾದಿದ್ದರಂತೆ. ಅಷ್ಟೇ ಅಲ್ಲ ಅಣ್ಣಾವ್ರ ಅಭಿಮಾನಿಯಾಗಿ ಅವರ ಮೇಲಿನ ಆಪಾದನೆ ಸುಳ್ಳು ಎಂಬುದನ್ನು ಸಾಬೀತುಪಡಿಸಲು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರಂತೆ.

“ಡಾ. ರಾಜ್‌ ಅವರ ವಿರುದ್ಧದ ಆಪಾದನೆಯನ್ನು ಸುಳ್ಳು ಎಂದು ನಿರೂಪಿಸಬೇಕಿತ್ತು. ಆ ಕಾರಣಕ್ಕೆ ನಾನು ಈ ಕೆಲಸ ಮಾಡಿದೆ. ಇದರಿಂದ ನನಗೆ ಒಂದು ಪೈಸೆಯೂ ಲಾಭ ಇಲ್ಲ. ನಾನೊಬ್ಬ ಅಭಿಮಾನಿಯಾಗಿ, ಅಣ್ಣಾವ್ರಿಗೆ ನಾನು ಮಾಡಬೇಕಾದ ಕರ್ತವ್ಯವಿದು. ನಾನು 1996ರಲ್ಲಿ ಜನುಮದ ಜೋಡಿ ಸಿನಿಮಾದಿಂದ ಸಹ ನಿರ್ದೇಶಕನಾಗಿ ಡಾ. ರಾಜ್‌ ಕುಟುಂಬದ ಜತೆಗೆ ಒಡನಾಟ ಶುರುವಾಯಿತು. ಸಹ ನಿರ್ದೇಶಕನಾಗಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಆಗ ಲೀಲಾವತಿಯವ್ರು ಡಾ. ರಾಜ್‌ ಮನೆಗೆ ಬರುತ್ತಿರಲಿಲ್ಲ. ಭೇಟಿಯನ್ನೂ ಮಾಡಿಲ್ಲ. ಅದೇ ರೀತಿ ಲೀಲಾವತಿ ಅವರ ಯಾವ ಸಿನಿಮಾಗಳಿಗೂ ನಾನು ಕೆಲಸ ಮಾಡಿಲ್ಲ. ವೈಯಕ್ತಿಕವಾಗಿ ನನಗೆ ಅವರು ಪರಿಚಯವೂ ಇಲ್ಲ, ದ್ವೇಷವೂ ಇಲ್ಲ” ಎಂದಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಾಶ್‌ ಮೇಹು ಪೋಸ್ಟ್‌..

ಇದುವರೆಗಿನ ವಿವಾದಕ್ಕೆ ಎಷ್ಟೇ ಸ್ಪಷ್ಟನೆ ಕೊಟ್ಟರೂ ಕೆಲವರು ಒಪ್ಪುತ್ತಿರಲಿಲ್ಲ ಅಂತವರಿಗೆ ಇದು ಸತ್ಯ ಸಾಕ್ಷಿ!

ಮೊದಲನೆಯ ವಿಷಯ: ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಅನ್ನುವುದು.ಇದು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದೆ ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ!!

ಎರಡನೆಯ ವಿಷಯ: ವಿನೋದ್ ರಾಜ್ ಮದುವೆಯನ್ನೇ ಆಗದೆ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಮಾಹಿತಿ. ಈ ಕೆಳಗಿನ ಫೋಟೋದಲ್ಲಿ ಸೋಫಾಮೇಲೆ ಕುಳಿತಿರುವವರು ವಿನೋದ್ ರಾಜ್ ಹೆಂಡತಿ ಮತ್ತು ಮಗ, ಚೆನ್ನೈನಲ್ಲಿದ್ದಾರೆ ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ!!!

ಈ ಫ್ಯಾಮಿಲಿ ಫೋಟೋ ನನಗೆ ಸಿಕ್ಕಿ ಆರು ತಿಂಗಳ ಮೇಲಾಯ್ತು, ಆಗೇನಾದರೂ ಈ ಫೋಟೋ ಪ್ರಕಟಿಸಿದ್ದರೆ ಅವರು ಖಂಡಿತ “ಅವರು ಯಾರೋ ಅಭಿಮಾನಿಗಳು” ಅಂದು ಬಿಡುತ್ತಿದ್ದರು ಅದಕ್ಕಾಗಿ ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೆ ಇಂದು ಗೆಳೆಯರೊಬ್ಬರು ಚೆನ್ನೈನಿಂದ ಈ Marks Card ಮತ್ತು ಆಸ್ತಿ ದಾಖಲೆ ಪತ್ರ ಕಳುಹಿಸಿ ಕೊಟ್ಟರು ಆದ್ದರಿಂದ ಇಂದು ಇವನ್ನು ಬಹಿರಂಗ ಪಡಿಸಿದ್ದೇನೆ…

ವಿನೋದ್ ರಾಜ್ ಅವರ ಹೆಂಡತಿ ಅನು ಮನೆ ಕೆಲಸದ ಹುಡುಗಿಯಲ್ಲ ಆಕೆಯ ಅಣ್ಣ ತಮಿಳುನಾಡಿನಲ್ಲಿ ಒಬ್ಬ ಉನ್ನತ ಅಧಿಕಾರಿ! ಮತ್ತು ಇವರಿಬ್ಬರ ಮದುವೆ ನಡೆದದ್ದು ತಿರುಪತಿಯಲ್ಲಿ ವಿಶೇಷವೆಂದರೆ ಆ ಮದುವೆಲ್ಲಿ ಫೋಟೋಗಳನ್ನೆ ತೆಗೆಸಿಲ್ಲ ಅದರ ಉದ್ದೇಶ ಏನಿರಬಹುದು???

ಇದನ್ನೂ ಓದಿ...

Back to top button
>