ರಾಜಕೀಯರಾಜ್ಯ

ಆನ್‌ಲೈನ್‌ನಲ್ಲೂ ನಾಮಪತ್ರ ಸಲ್ಲಿಕೆಗೆ ಅವಕಾಶ

Online nomination also allowed

ಸುವಿಧಾ ತಂತ್ರಾಂಶದ ಮೂಲಕ ಆನ್‍ಲೈನ್‌ನಲ್ಲಿ ನಾಮಪತ್ರಗಳನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ವಿವಿಧ ಚುನಾವಣಾ ಪರವಾನಗಿ ಪಡೆಯಲು ಅವಕಾಶ ನೀಡಲಾಗಿದೆ.

ಮೊದಲ ದಿನ 221 ನಾಮಪತ್ರ ಸಲ್ಲಿಕೆ
ರಾಜ್ಯ ವಿಧಾನಸಭಾ ಚುನಾವಣೆಯ ಅಧಿಸೂಚನೆ ಇಂದು ಪ್ರಕಟವಾಗಿದೆ. ನಾಮಪತ್ರ ಸಲ್ಲಿಕೆ ಕೂಡ ಇಂದೇ ಶುರುವಾಗಿದೆ. ಏ.20 ನಾಮಪತ್ರ ಸಲ್ಲಿಕೆಗೆ ಕೊನೇ ದಿನ. ಮೊದಲ ದಿನ 221 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ರಾಜ್ಯ ವಿಧಾನಸಭಾ ಚುನಾವಣೆಯ ಅಧಿಕೃತ ಪ್ರಕ್ರಿಯೆ ಶುರುವಾಗಿದೆ. ನಾಮಪತ್ರ ಸಲ್ಲಿಕೆ ಕೂಡ ಆರಂಭವಾಗಿದೆ. ಎಲೆಕ್ಷನ್‌ಗೆ ಸ್ಪರ್ಧಿಸಬೇಕು ಅಂತ ಕನಸು ಕಾಣ್ತಿದ್ದೀರಾ? ಕನಸಲ್ಲ ನನಸೂ ಮಾಡಬಹುದು. ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಏನು ಎಂಬುದು ಅರ್ಥವಾಗದೇ ತಲೆಕೆಡಿಸಿಕೊಂಡಿದ್ದೀರಾ? ಆ ಪ್ರಕ್ರಿಯೆಯನ್ನು ಸರಳವಾಗಿ ವಿವರಿಸುವ ಪ್ರಯತ್ನ ಮಾಡಿದ್ದೇವೆ ನೋಡಿ.

ಭಾರತದಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು, ಸ್ಪರ್ಧಿಸುವಂಥವರು ಭಾರತದ ಪ್ರಜೆಯಾಗಿರಬೇಕು. ರಾಜ್ಯ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಬೇಕಾದರೆ 30 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. ಸಂಸದೀಯ, ರಾಜ್ಯ ಅಸೆಂಬ್ಲಿ ಅಥವಾ ವಾರ್ಡ್ ಮಟ್ಟದ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರಬೇಕು. ಒಬ್ಬರು ಸೇರ್ಪಡೆಗೊಳ್ಳಬೇಕಾಗುತ್ತದೆ.

ಇನ್ನು, ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಅಭ್ಯರ್ಥಿಯಾಗುವವರು ಮಾಡಬೇಕಾದ ಪೇಪರ್‌ ವರ್ಕ್‌ ಬಹಳಷ್ಟು ಇರುತ್ತದೆ. ಚುನಾವಣಾ ಆಯೋಗದ ನಿಯಮಾವಳಿ ಪ್ರಕಾರ, ಅಭ್ಯರ್ಥಿಯು ತನ್ನ ಹಿನ್ನೆಲೆ, ಆಸ್ತಿ-ಪಾಸ್ತಿ ವಿವರ, ಸಂಪತ್ತಿನ ವಿವರ, ಠೇವಣಿ ವಿವರ, ಚಿನ್ನಾಭರಣ ವಿವರ, ಕೇಸ್‌ಗಳಿದ್ದರೆ, ಕ್ರಿಮಿನಲ್‌ ಹಿನ್ನೆಲೆ ಇದ್ದರೆ ಅವುಗಳ ವಿವರ ಮತ್ತು ದಾಖಲೆಗಳನ್ನು ನಾಮಪತ್ರದ ಜತೆಗೆ ಒದಗಿಸಬೇಕು. ಇದು ಕಡ್ಡಾಯ. ಇದರ ಜತೆಗೆ ಇನ್ನೂ ಕೆಲವು ದಾಖಲೆಗಳನ್ನೂ, ವಿವರಗಳನ್ನು ಒದಗಿಸಬೇಕು.

ಅಸೆಂಬ್ಲಿ ಚುನಾವಣೆಗೆ…
ರಾಜ್ಯ ಅಸೆಂಬ್ಲಿ ಚುನಾವಣೆಗೆ, ಆಕಾಂಕ್ಷಿ ಅಭ್ಯರ್ಥಿಯು ಫಾರ್ಮ್ 2 ಬಿ, ಮತದಾರರ ಪಟ್ಟಿ ಪ್ರಮಾಣೀಕೃತ ಸಾರ, ಜಾತಿ ಪ್ರಮಾಣಪತ್ರ, ಫಾರ್ಮ್ ಎ ಮತ್ತು ಬಿ (ಅವರು ರಾಜಕೀಯ ಪಕ್ಷದಿಂದ ಸ್ಪರ್ಧಿಸಿದ್ದರೆ), ಮತ್ತು ಮುಖ್ಯವಾಗಿ, ನಮೂನೆ 26. ನಮೂನೆ 26 ಮುಂತಾದ ಆಯಾ ನಮೂನೆಗಳನ್ನು ಭರ್ತಿ ಮಾಡಬೇಕಾಗುತ್ತದೆ.

ಇದರ ಜತೆಗೆ, ಅಭ್ಯರ್ಥಿಯ ಹಿನ್ನೆಲೆ – ಶಿಕ್ಷಣ, ಜಾತಿ, ಮತ್ತು ಅವರ ಆಸ್ತಿಗಳು ಮತ್ತು ಹೊಣೆಗಾರಿಕೆಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುವ ಅಫಿಡವಿಟ್ ಕೂಡ ಸಲ್ಲಿಸಬೇಕು.

ಇಷ್ಟಕ್ಕೇ ಆಯಿತೆಂದುಕೊಳ್ಳಬೇಡಿ. ಇನ್ನೂ ಇದೆ. ನಾಮನಿರ್ದೇಶನ ಪ್ರಕ್ರಿಯೆಯ ಭಾಗವಾಗಿ ಅಭ್ಯರ್ಥಿಯು 10,000 ರೂಪಾಯಿ ಭದ್ರತಾ ಠೇವಣಿಯನ್ನೂ ಸಲ್ಲಿಸಬೇಕಾಗುತ್ತದೆ. ಅವರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ (SC/ST) ಹಿನ್ನೆಲೆಯಿಂದ ಬಂದವರಾಗಿದ್ದರೆ, ಭದ್ರತಾ ಠೇವಣಿ 5,000 ರೂಪಾಯಿ.

ನಾಮನಿರ್ದೇಶನ ಪತ್ರಗಳನ್ನು ಸಲ್ಲಿಸಿದ ನಂತರ, ಅಂದರೆ- ಅದರ ಸ್ವರೂಪವನ್ನು ಭಾರತೀಯ ಸಂವಿಧಾನದ 3 ನೇ ಷೆಡ್ಯೂಲ್‌ನಲ್ಲಿ ಸೂಚಿಸಲಾಗಿದೆ – ಚುನಾವಣಾ ಅಧಿಕಾರಿ (RO) ಅಥವಾ ಸಹಾಯಕ ಚುನಾವಣಾಧಿಕಾರಿ (ARO) ಅವರ ಮುಂದೆ ವ್ಯಕ್ತಿಯು ಪ್ರಮಾಣ ಮಾಡಬೇಕು.

ಅಭ್ಯರ್ಥಿ ಅಥವಾ ಆತನ/ಆಕೆಯ ಚುನಾವಣಾ ಏಜೆಂಟ್‍, ಆತ/ಆಕೆ ಅಭ್ಯರ್ಥಿಯಾಗಿ ನಾಮನಿರ್ದೇಶಿತನಾದ ದಿನಾಂಕದಿಂದ ಚುನಾವಣಾ ಫಲಿತಾಂಶ ಘೋಷಣೆ ದಿನಾಂಕದವರೆಗೆ ಆತನಿಂದ ಅಥವಾ ಆತನ ಚುನಾವಣಾ ಏಜೆಂಟಿನಿಂದ ಮಾಡಲಾದ ಎಲ್ಲ ವೆಚ್ಚಗಳ ಪ್ರತ್ಯೇಕ ಮತ್ತು ಸರಿಯಾದ ಲೆಕ್ಕವನ್ನು ಆಯೋಗ ನಿಗದಿಪಡಿಸಿದ ರಿಜಿಸ್ಟರ್‌ಗಳಲ್ಲಿ ನಿರ್ವಹಿಸಬೇಕು ಎಂಬುದು ಕಡ್ಡಾಯ ನಿಯಮ.

 

ಇದನ್ನೂ ಓದಿ...

Back to top button
>