ಬೆಂಗಳೂರು: ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾನಗರದ ಬಳಿ ರಕ್ತಚಂದನ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಚಿನಕುರುಳಿ ಹೋಬಳಿ ಡಿಂಕಾ ಗ್ರಾಮದ ಕೃಷ್ಣ(35) ಬಂಧಿತ ಆರೋಪಿ.
‘ಬಂಧಿತ ಸ್ಥಳದಲ್ಲಿ ಮಾರಾಟ ಮಾಡುತ್ತಿದ್ದ 2 ಕೆಜಿ 100 ಗ್ರಾಂನಷ್ಟು ರಕ್ತಚಂದನವನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಬಳಿಕ ಆತ ಬನಶಂಕರಿ 3ನೇ ಹಂತ, ಸಪ್ತಗಿರಿಲೇಔಟ್, ಟಾಟಾ ಪ್ರಮೌಂಟ್ ಅಪಾರ್ಟ್‌ಮೆಂಟ್ ಬಳಿ ಹಾಗೂ ಹನುಮಗಿರಿ ಬೆಟ್ಟದ ನೀಲಗಿರಿ ತೋಪಿನಲ್ಲಿ ಬಚ್ಚಿಟ್ಟಿದ್ದ 124 ಕೆ.ಜಿ ತೂಕದ ಒಟ್ಟು 14 ರಕ್ತಚಂದದ ಮರದ ತುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.