ರಾಜ್ಯರಾಷ್ಟ್ರೀಯವಾಣಿಜ್ಯ

ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ 171 ರೂ ಕಡಿತ, ಹೊಸ ದರದ ವಿವರ ಇಲ್ಲಿದೆ

Rs 171 reduction in LPG cylinder price, here is the new price details

ವರದಿ: ಪ್ರಿಯಲಚ್ಛಿ
ಬೆಂಗಳೂರು: ಭಾರತ ಸರ್ಕಾರದ ಅಧೀನದಲ್ಲಿರುವ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಿವೆ. ಪರಿಷ್ಕೃತ ದರ ಇಂದಿನಿಂದಲೇ (ಮೇ 1) ಜಾರಿಯಾಗಲಿದ್ದು, 19 ಕೆಜಿ ತೂಗುವ ವಾಣಿಜ್ಯ ಸಿಲಿಂಡರ್ ಬೆಲೆ 171.50 ರೂಪಾಯಿ ಕಡಿಮೆಯಾಗಲಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಬೆಂಗಳೂರಿನಲ್ಲಿ ಈವರೆಗೆ 2190.50 ರೂಪಾಯಿಗೆ 19 ಕೆಜಿಯ ವಾಣಿಜ್ಯ ಸಿಲಿಂಡರ್ ಮಾರಾಟವಾಗುತ್ತಿತ್ತು. ಇನ್ನು ಮುಂದೆ ಇದು 2019ಕ್ಕೆ ಮಾರಾಟವಾಗಲಿದೆ. ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯು 1856.50 ರೂಪಾಯಿಗೆ ಮಾರಾಟವಾಗಲಿದೆ. ಕೊಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1960.50 ಇರಲಿದೆ. ಈವರೆಗೆ ಅಲ್ಲಿ 2132 ರೂಪಾಯಿಗೆ ವಾಣಿಜ್ಯ ಸಿಲಿಂಡರ್ ಮಾರಾಟವಾಗುತ್ತಿತ್ತು. ಮುಂಬೈನಲ್ಲಿ 1808 (1980) ರೂಪಾಯಿ, ಚೆನ್ನೈನಲ್ಲಿ 2021 (2192) ರೂಪಾಯಿಗೆ ಮಾರಾಟವಾಗುತ್ತಿದೆ. ಆವರಣದಲ್ಲಿರುವುದು ಹಳೆಯ ದರಗಳು. ಕಳೆದ ಮಾರ್ಚ್ 1ರಂದು ಪೆಟ್ರೋಲಿಯಂ ಕಂಪನಿಗಳು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 350.50 ರೂಪಾಯಿಯಷ್ಟು ಹೆಚ್ಚಿಸಿತ್ತು. ಗೃಹಬಳಕೆ ಸಿಲಿಂಡರ್‌ಗಳ ಬೆಲೆ 50 ರೂಪಾಯಿ ಹೆಚ್ಚಾಗಿತ್ತು.

ಕಳೆದ ಸೆ 1ರಂದು ವಾಣಿಜ್ಯ ಸಿಲಿಂಡರ್ ಬೆಲೆ 91.50 ರೂಪಾಯಿ ಕಡಿಮೆಯಾಗಿತ್ತು. ಆಗಸ್ಟ್ 1, 2022ರಲ್ಲಿಯೂ ವಾಣಿಜ್ಯ ಸಿಲಿಂಡರ್‌ ಬೆಲೆ 36 ರೂಪಾಯಿ ಕಡಿಮೆಯಾಗಿತ್ತು. ಜುಲೈ 6, 2022ರಲ್ಲಿ 8.5 ರೂಪಾಯಿ ಕಡಿತಗೊಂಡಿತ್ತು.

ಎಲ್​ಪಿಜಿ ದರ ಪರಿಷ್ಕರಣೆಗೆ ಏನು ಮಾನದಂಡ?
ಸೌದಿ ಅರೇಬಿಯಾದ ಕಂಪನಿ ‘ಸೌದಿ ಅರಾಮ್ಕೊ’ಗೆ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಉತ್ಪಾದಕ ಕಂಪನಿ ಎಂಬ ಮೇಲ್ಮೆ ಇದು. ಈ ಕಂಪನಿಯು ನಿಗದಿಪಡಿಸುವ ಎಲ್​ಪಿಜಿ ದರವನ್ನು ಅನುಸರಿಸಿ ಭಾರತದಲ್ಲಿ ದರ ಲೆಕ್ಕ ಹಾಕಲಾಗುತ್ತದೆ. ಲೆಕ್ಕಾಚಾರದ ವೇಳೆ, ಸಾಗಾಟ ವೆಚ್ಚ, ರಿಸ್ಕ್, ಅಬಕಾರಿ ಸುಂಕ, ಬಂದರು ವೆಚ್ಚ, ವಿಮಾ ಖರ್ಚುಗಳನ್ನು ಪರಿಗಣಿಸಲಾಗುತ್ತದೆ. ಈ ಮೊದಲು ಎಲ್‌ಪಿಜಿ ದರವನ್ನು ಅಮೆರಿಕ ಡಾಲರ್ ಮೌಲ್ಯ ಮತ್ತು ವಿನಿಮಯ ದರವನ್ನೂ ಲೆಕ್ಕಕ್ಕೆ ಪರಿಗಣಿಸಲಾಗುತ್ತಿತ್ತು. ಆದರೆ ಇತ್ಥೀಚೆಗೆ ಭಾರತದ ರೂಪಾಯಿಯಲ್ಲಿಯೇ ದರ ನಿಗದಿಪಡಿಸಲಾಗುತ್ತಿದೆ.

ಪೆಟ್ರೋಲ್, ಡೀಸೆಲ್ ದರ ವಿವರ
ಬೆಂಗಳೂರು ಸೇರಿದಂತೆ ಭಾರತದ ಯಾವುದೇ ನಗರದಲ್ಲಿ ಇಂದು (ಮೇ 1) ಪೆಟ್ರೋಲ್ ಮತ್ತು ಡೀಸೆಲ್ ದರಗಳು ಬದಲಾವಣೆ ಆಗಿಲ್ಲ. ಭಾರತದಲ್ಲಿ ಸುಮಾರು 1 ವರ್ಷದಿಂದ (344 ದಿನ) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ 101.94 ರೂ ಮತ್ತು ಡೀಸೆಲ್ 87.89 ರೂಪಾಯಿಗೆ ಮಾರಾಟವಾಗುತ್ತಿದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಇಂಧನ ದರಗಳನ್ನು ಪೆಟ್ರೋಲಿಯಂ ಮಾರಾಟ ಕಂಪನಿಗಳು ಪರಿಷ್ಕರಿಸುತ್ತವೆ. ಎಲ್‌ಪಿಜಿ ದರವನ್ನು ತಿಂಗಳಿಗೆ ಒಮ್ಮೆ ಪರಿಷ್ಕರಿಸಲಾಗುತ್ತದೆ.

ವಿಶ್ವ ಮಾರುಕಟ್ಟೆಯ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ದರಕ್ಕೆ ಅನುಗುಣವಾಗಿ ಭಾರತ ಪೆಟ್ರೋಲಿಯಂ ಕಂಪನಿಗಳು ಎಲ್​ಪಿಜಿ, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಷ್ಕರಿಸುತ್ತವೆ. ಎಲ್​​ಪಿಜಿ ಬೆಲೆಯನ್ನು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಬೆಲೆ ಪರಿಷ್ಕರಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಪ್ರಭಾವ ಇರುತ್ತದೆ ಎಂಬ ಮಾತು ಬಹುದಿನಗಳಿಂದ ಕೇಳಿಬರುತ್ತಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಎಚ್‌ಟಿ ಕನ್ನಡ ವಾಟ್ಸಾಪ್ ಕಮ್ಯುನಿಟಿ ಸೇರಿ. ಫೇಸ್‌ಬುಕ್ ಪೇಜ್ ಲೈಕ್ ಮಾಡಿ, ಟ್ವಿಟರ್‌ನಲ್ಲಿ ಫಾಲೊ ಮಾಡಿ. ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ.

 

ಇದನ್ನೂ ಓದಿ...

Back to top button
>