ಅಡುಗೆ

ಎಂದಾದರೂ ಈ ಕಾಂಬಿನೇಷನ್‌ ಪಾನಿ ಪುರಿ ಟ್ರೈ ಮಾಡಿದ್ದೀರಾ?; ಇಲ್ನೋಡಿ ಪುರಿ ಜತೆ ಮಾವಿನ ರಸಾಯನ

Have you ever tried this combination pani puri?; Look at the chemistry of mango with puri

ವರದಿ: ಪ್ರಿಯಲಚ್ಛಿ
ಬೀದಿ ಬದಿ ತಿಂಡಿ ತಿನಿಸು ಇಷ್ಟಪಡುವವರಿಗೆ ಪಾನಿ ಪುರಿ (pani puri) ಮೊದಲ ಆಯ್ಕೆ. ಬಹುತೇಕರು ಈ ತಿಂಡಿಯನ್ನು ಹೆಚ್ಚು ಇಷ್ಟ ಪಡ್ತಾರೆ. ಸಿಕ್ಕ ಸಿಕ್ಕ ಕಡೆಗಳಲ್ಲಿ ಸಿಗುವ ಈ ಖಾದ್ಯಕ್ಕೆ ಅದರದೇ ಆದ ಅಭಿಮಾನ ಬಳಗವಿದೆ. ಬೆಳಗ್ಗೆಯಾದ್ರೂ ಸೈ, ಮಧ್ಯಾಹ್ನ ಸಿಕ್ಕರೂ ಜೈ.. ಹಾಗೆ ಬ್ಯಾಟಿಂಗ್‌ ಮಾಡುವವರಿದ್ದಾರೆ. ಅದರಲ್ಲೂ ಮಹಿಳೆಯರಂತೂ ಪಾನಿಪುರಿಗೆ ಜೀವಾನೇ ಬಿಡ್ತಾರೆ. ಹೀಗಿರುವಾಗ ಇದೇ ಪಾನಿಪುರಿಯಲ್ಲಿ ಮಾರಾಟಗಾರರು ಸಾಕಷ್ಟು ಪ್ರಯೋಗ ಮಾಡಿದ ಉದಾಹರಣೆಗಳಿವೆ. ಇದೀ ಮಾವಿನ ಸೀಸನ್‌ ಶುರುವಾಗಿದೆ. ಇಲ್ಲೊಬ್ಬ ಮಾರಾಟಗಾರ ಮಾವಿನ ರಸಾಯನದ ಪಾನಿ ಪುರಿ ಪ್ರಯೋಗಕ್ಕೆ ಮುಂದಾಗಿದ್ದಾನೆ.

ಮುಂಬೈನಲ್ಲಿ ಬೀದಿ ಬದಿಯ ವ್ಯಾಪಾರಿಯೊಬ್ಬ ಇದೀಗ ಪಾನಿ ಪುರಿಗೆ ಮಾವಿನ ಹಣ್ಣಿನ ಟೇಸ್ಟ್‌ ನೀಡಿದ್ದಾನೆ. ಪುರಿಗೆ ಬಟಾಣಿ, ಸಿಹಿ ಹುಳಿಯ ಪಾನಿಯ ಜತೆಗೆ ಸಿಹಿಯಾದ ಮಾವಿನ ರಸಾಯನವನ್ನೂ ಸೇರಿಸಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾನೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಮಾವಿನ ಪಾನಿಪುರಿ ವಿಡಿಯೋ ಹರಿದಾಡುತ್ತಿದ್ದು, ನೋಡುಗರು ಬೆರಗುಗಣ್ಣಿನಿಂದಲೇ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಈ ಟೇಸ್ಟ್‌ ಅದೆಷ್ಟು ಕೆಟ್ಟದಾಗಿರಬೇಡ ಎಂದರೆ, ಮತ್ತೆ ಕೆಲವರು ನಿನ್ನ ಕೈ ಮುಗೀತಿನಿ ಹೀಗೆ ಮಾಡಬೇಡ ಎಂದಿದ್ದಾರೆ.

ಮನೆಯಲ್ಲೇ ಮಾಡಿ ಬಂಗಾರಪೇಟೆ ಪಾನಿಪುರಿ ರೆಸಿಪಿ..
ಈಗಂತೂ ಬಂಗಾರಪೇಟೆ ಪಾನಿಪುರಿ ಹೆಚ್ಚು ಫೇಮಸ್ ಆಗ್ತಿದೆ. ಈ ಚಾಟ್ಸ್ ಸ್ಪೆಷಲ್ ಎಂದರೆ ಅದು ಪಾನಿ. ನೋಡಲು ನೀರಿನಂತೆ ಕಾಣುವ ಈ ಪಾನಿಯೊಂದಿಗೆ ಆಲೂಗಡ್ಡೆ, ಈರುಳ್ಳಿ, ಸೇವ್, ಫಿಲ್ ಮಾಡಿದ ಪೂರಿ ತಿನ್ನುತ್ತಿದ್ದರೆ, ಅಬ್ಬಾ! ನಾಲಿಗೆ ಎಷ್ಟು ಪುಣ್ಯ ಮಾಡಿತ್ತೋ ಎನಿಸದೆ ಇರದು. ಆದರೆ ಪಾನಿಪುರಿ ತಿನ್ನಬೇಕು ಎಂದರೆ ಹೊರಗೆ ಹೋಗಬೇಕು. ಈಗಂತೂ ಎಲ್ಲೆಡೆ ಮಳೆ ಸುರಿಯುತ್ತಿದೆ. ಛತ್ರಿ ಹಿಡಿದು ಹೊರಗೆ ಹೋಗಿ ಹರಸಾಹಸ ಪಡುವುದಕ್ಕಿಂತ ಮನೆಯಲ್ಲೇ ಈ ಸುಲಭವಾದ ರೆಸಿಪಿ ತಯಾರಿಸಿದರೆ ಹೇಗೆ…? ಚೈತ್ರಾಸ್ ಅಭಿರುಚಿಯ ಚೈತ್ರ, ಎಲ್ಲರ ಮೆಚ್ಚಿನ ಸ್ಪೆಷಲ್ ಬಂಗಾರಪೇಟೆ ಪಾನಿಪುರಿ ರೆಸಿಪಿಯನ್ನು ನಿಮಗಾಗಿ ಹೇಳಿಕೊಡ್ತಿದ್ದಾರೆ ನೋಡಿ.

ಬೇಕಾಗುವ ಸಾಮಗ್ರಿಗಳು
ಪಾನಿ ಮಾಡಲು
ನೀರು – 1 ಲೀಟರ್
ಹಸಿಮೆಣಸಿನಕಾಯಿ – 10
ಶುಂಠಿ – 2 ಇಂಚು
ಪುದೀನಾ – ಒಂದು ಹಿಡಿ
ಕಡ್ಡಿಸಹಿತ ಕೊತ್ತಂಬರಿ ಸೊಪ್ಪು – 1 ಹಿಡಿ
ನಿಂಬೆ ಹಣ್ಣು – 1
ಉಪ್ಪು- ರುಚಿಗೆ ತಕ್ಕಷ್ಟು
ಪೂರಿ ತಯಾರಿಸಲು
ಉಪ್ಪಿಟ್ಟು ರವೆ – 1 ಕಪ್
ಮೈದಾಹಿಟ್ಟು – 1 ಕಪ್
ಸೋಡಾ – ಚಿಟಿಕೆ
ಉಪ್ಪು- ರುಚಿಗೆ ತಕ್ಕಷ್ಟು
ಫಿಲ್ಲಿಂಗ್​​​​​​ ತಯಾರಿಸಲು
ಬೇಯಿಸಿದ ಆಲೂಗಡ್ಡೆ – 2
ಬೇಯಿಸಿದ ಬಟಾಣಿ – 1 ಕಪ್
ಹೆಚ್ಚಿದ ಈರುಳ್ಳಿ – 1 ಕಪ್
ಹೆಚ್ಚಿದ ಟೊಮ್ಯಾಟೋ – 1/2 ಕಪ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 1/2 ಕಪ್
ಸೇವ್​​ – 1 ಕಪ್

ತಯಾರಿಸುವ ವಿಧಾನ
ನೀರಿಗೆ ಹಸಿಮೆಣಸಿನಕಾಯಿ, ಶುಂಠಿ, ಪುದೀನಾ, ಕೊತ್ತಂಬರಿ ಸೊಪ್ಪು ಸೇರಿಸಿ ಸುಮಾರು 8 ಗಂಟೆಗಳ ಕಾಲ ನೆನೆಯಲು ಬಿಡಿ.

ಒಂದು ಪ್ಲೇಟ್​​​ನಲ್ಲಿ ರವೆ, ಮೈದಾಹಿಟ್ಟು, ಸೋಡಾ, ಉಪ್ಪು ಸೇರಿಸಿ ಮಿಕ್ಸ್ ಮಾಡಿ, ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಹಿಟ್ಟು ತಯಾರಿಸಿ ಬದಿಗಿಡಿ
5 ನಿಮಿಷಗಳ ನಂತರ ಮತ್ತೆ ಹಿಟ್ಟನ್ನು ನಾದಿಕೊಂಡು ಚಪಾತಿ ರೀತಿ ಲಟ್ಟಿಸಿಕೊಳ್ಳಿ
ಬಾಟಲಿಯ ಮುಚ್ಚಳದ ಸಹಾಯದಿಂದ ಸಣ್ಣ ಸಣ್ಣ ಪೂರಿ ಆಕಾರಕ್ಕೆ ಕಟ್ ಮಾಡಿಕೊಳ್ಳಿ
ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಿಟ್ಟು ಪೂರಿಗಳನ್ನು ಉಬ್ಬುವಂತೆ ಕರಿಯಿರಿ

ಪಾನಿ ತಯಾರಿಸುವ ವಿಧಾನ
8 ಗಂಟೆಗಳ ಕಾಲ ನೆನೆಸಿದ ಕೊತ್ತಂಬರಿ, ಪುದೀನಾ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ ಸ್ಟೋವ್ ಮೇಲಿಟ್ಟು 10 ನಿಮಿಷಗಳ ಕಾಲ ಕುದಿಸಿ.

ಸ್ಟೋವ್ ಆಫ್ ಮಾಡಿ ಶೋಧಿಸಿ ಬಿಸಿ ಇರುವಾಗಲೇ ನಿಂಬೆ ರಸ ಬೆರೆಸಿ ಮಿಕ್ಸ್ ಮಾಡಿ (ತಣ್ಣಗಾದಾಗ ನಿಂಬೆರಸ ಮಿಕ್ಸ್ ಮಾಡಿದರೆ ಪಾನಿ ನೀರಿನ ಬಣ್ಣ ಬರುವುದಿಲ್ಲ)

ಈಗ ಪುರಿಗಳ ಮಧ್ಯಭಾಗವನ್ನು ಕ್ರಷ್ ಮಾಡಿ, ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ, ಬೇಯಿಸಿದ ಬಟಾಣಿ, ಕತ್ತರಿಸಿದ ಈರುಳ್ಳಿ, ಟೊಮ್ಯಾಟೋ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಸೇವ್​​​​ ಸೇರಿಸಿ
ಸ್ಪೆಷಲ್ ಪಾನಿಯೊಂದಿಗೆ ಪೂರಿಯನ್ನು ಎಂಜಾಯ್ ಮಾಡಿ

ಇದನ್ನೂ ಓದಿ...

Back to top button
>