ಅಡುಗೆಆರೋಗ್ಯ

ಮೂಲಂಗಿ ಸೇವನೆಯ ಉಪಯೋಗಗಳು; ತೂಕ ಇಳಿಕೆ ಹೃದಯ ಸಂಬಂಧಿ ಸಮಸ್ಯೆಗೆ ಪರಿಹಾರ ಇನ್ನೂ ಅನೇಕ

Benefits of Consuming Radishes; There are many other solutions for weight loss heart related problems

ವರದಿ: ಪ್ರಿಯಲಚ್ಛಿ
ನೀವು ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ ನಿಮಗೆ ಮೂಲಂಗಿ ಬೆಸ್ಟ್‌ ಆಯ್ಕೆಯಾಗಿದೆ. ಮೂಲಂಗಿಯಲ್ಲಿ ನಾರಿನ ಅಂಶ ಅಧಿಕವಾಗಿರುತ್ತದೆ. ಇದು ಸುಲಭವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳನ್ನು ಸಹ ಒಳಗೊಂಡಿದೆ. ಇದರಲ್ಲಿ ಕಡಿಮೆ ಕೊಬ್ಬು ಮತ್ತು ಕಡಿಮೆ ಕ್ಯಾಲೋರಿ ಇದೆ.
ನಾವು ಪ್ರತಿದಿನ ಬಳಸುವ ಅನೇಕ ತರಕಾರಿಗಳಲ್ಲಿ ಆರೋಗ್ಯವನ್ನು ಉತ್ತಮಗೊಳಿಸುವ ಅನೇಕ ಅಂಶಗಳುಂಟು. ಆದ್ದರಿಂದಲೇ ವೈದ್ಯರು ಪ್ರತಿದಿನ ಹೆಚ್ಚು ತರಕಾರಿ ಬಳಸಿ ಎಂದು ಸಲಹೆ ನೀಡುತ್ತಾರೆ. ನಮ್ಮ ದೇಹಕ್ಕೆ ಉತ್ತಮ ಪೋಷಕಾಂಶ ಒದಗಿಸುವ ತರಕಾರಿಗಳಲ್ಲಿ ಮೂಲಂಗಿ ಕೂಡಾ ಒಂದು. ಮೂಲಂಗಿ ಸೇವನೆಯಿಂದ ಕೂಡಾ ನಮಗೆ ಅನೇಕ ಆರೋಗ್ಯ ಲಾಭಗಳಿವೆ.

ಆಯುರ್ವೇದ ಔಷಧಿಯಾಗಿ ಕೂಡಾ ಮೂಲಂಗಿಯನ್ನು ಬಳಸಲಾಗುತ್ತದೆ. ಮೂಲಂಗಿಯಲ್ಲಿ ಹೆಚ್ಚಿನ ನೀರಿನ ಅಂಶವಿದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಇದೆ. ಪ್ರೋಟೀನ್‌, ಫೈಬರ್‌, ಕಾರ್ಬೋಹೈಡ್ರೇಟ್‌, ವಿಟಮಿನ್ ಸಿ ಮತ್ತು ಬಿ ಅಂಶ ಸಮೃದ್ಧವಾಗಿದೆ. ಮೂಲಂಗಿ ಸೇವನೆಯಿಂದ ಏನೆಲ್ಲಾ ಉಪಯೋಗ ಇದೆ ನೋಡೋಣ.

ಮೂಲಂಗಿಯ ನಿಯಮಿತ ಸೇವನೆಯಿಂದ ಕ್ಯಾನ್ಸರ್ ಅಪಾಯ ಕಡಿಮೆ ಆಗುತ್ತದೆ. ಮೂಲಂಗಿಯಲ್ಲಿ ಗ್ಲುಕೋಸಿನೋಲೇಟ್‌ಗಳು, ಸಲ್ಫರ್ ಸಂಯುಕ್ತಗಳಲ್ಲಿ ಸಮೃದ್ಧವಾಗಿದ್ದು ಇದು ಕ್ಯಾನ್ಸರ್‌ಗೆ ಕಾರಣವಾಗುವ ಆನುವಂಶಿಕ ರೂಪಾಂತರಗಳಿಂದ ಕೋಶಗಳನ್ನು ರಕ್ಷಿಸುತ್ತದೆ. ಇದು ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ಕೂಡಾ ಕಡಿಮೆ ಮಾಡುತ್ತದೆ.

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯದ ಸಮಸ್ಯೆ; ಕಾರಣಗಳು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಜ್ಞರ ಸಲಹೆ ಹೀಗಿದೆ

ಮೂಲಂಗಿಯಲ್ಲಿ ನಾರಿನ ಅಂಶ ಅಧಿಕವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದನ್ನು ಸೇವಿಸುವುದರಿಂದ ಕರುಳಿನಲ್ಲಿರುವ ತ್ಯಾಜ್ಯವನ್ನು ಹೊರ ಹಾಕುತ್ತದೆ. ಮಲಬದ್ಧತೆ ಸಮಸ್ಯೆ ಕಡಿಮೆ ಆಗುತ್ತದೆ. ಕರುಳಿನ ಹುಣ್ಣು ಮತ್ತು ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಮೂಲಂಗಿಯಲ್ಲಿ ಆಂಥೋಸಯಾನಿನ್ ಅಧಿಕವಾಗಿರುತ್ತದೆ. ಇವು ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ. ಇವು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಂತೆಯೇ, ಈ ಆಂಥೋಸಯಾನಿನ್‌ಗಳು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತವೆ. ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತ ಕಡಿಮೆಯಾಗುತ್ತದೆ ಅಷ್ಟೇ ಅಲ್ಲ ಹೃದಯದ ಆರೋಗ್ಯ ಕೂಡಾ ಸುಧಾರಿಸುತ್ತದೆ.

ಮೂಲಂಗಿ ಸೇವನೆಯಿಂದ ಮಧುಮೇಹ ನಿವಾರಣೆಯಾಗುತ್ತದೆ. ಮೂಲಂಗಿಯಲ್ಲಿರುವ ಮಧುಮೇಹ ವಿರೋಧಿ ಗುಣಲಕ್ಷಣಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಮೂಲಂಗಿಯಲ್ಲಿ ಪೊಟ್ಯಾಶಿಯಂ ಅಧಿಕವಾಗಿರುತ್ತದೆ. ಇದನ್ನು ಸೇವಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ರಕ್ತನಾಳಗಳ ಸರಿಯಾದ ಕಾರ್ಯ ನಿರ್ವಹಣೆಯಲ್ಲಿ ಪೊಟ್ಯಾಸಿಯಮ್ ಪ್ರಮುಖ ಪಾತ್ರ ವಹಿಸುತ್ತದೆ. ಮೂಲಂಗಿ ಸೇವಿಸುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ.

ಕೋವಿಡ್‌-19, ಎಚ್‌3ಎನ್‌2 ನಡುವಿನ ವ್ಯತ್ಯಾಸ ತಿಳಿಯುವುದು ಹೇಗೆ? ಗೊಂದಲ ಪರಿಹಾರಕ್ಕೆ ಇಲ್ಲಿದೆ ತಜ್ಞರ ಉತ್ತರ
ನೀವು ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ ನಿಮಗೆ ಮೂಲಂಗಿ ಬೆಸ್ಟ್‌ ಆಯ್ಕೆಯಾಗಿದೆ. ಮೂಲಂಗಿಯಲ್ಲಿ ನಾರಿನ ಅಂಶ ಅಧಿಕವಾಗಿರುತ್ತದೆ. ಇದು ಸುಲಭವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳನ್ನು ಸಹ ಒಳಗೊಂಡಿದೆ. ಇದರಲ್ಲಿ ಕಡಿಮೆ ಕೊಬ್ಬು ಮತ್ತು ಕಡಿಮೆ ಕ್ಯಾಲೋರಿ ಇದೆ. ಆದ್ದರಿಂದ ಮೂಲಂಗಿ ಸೇವಿಸುವುದರಿಂದ ನೀವು ಸುಲಭವಾಗಿ ತೂಕ ಇಳಿಸಬಹುದು.

ಇದನ್ನೂ ಓದಿ...

Back to top button
>