ಸಿನಿಮಾಸಿನಿಮಾ ಸುದ್ದಿ

ಕಂಗುವ ಚಿತ್ರಕ್ಕಾಗಿ ನಟ ಸೂರ್ಯ ತಯಾರಿ‌, ತೂಕ ಹೆಚ್ಚಿಸಿಕೊಳ್ಳಲು ಜಿಮ್‌ನಲ್ಲಿ ಹಗಲು ಇರುಳು ವರ್ಕೌಟ್‌

Actor Surya prepares for the film Kanguva, day and night workout in the gym to gain weight.

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ರಾಷ್ಟ್ರಪ್ರಶಸ್ತಿ ವಿಜೇತ ನಟ ಸೂರ್ಯ ಕೈಯಲ್ಲಿ ಒಳ್ಳೊಳ್ಳೆ ಸಿನಿಮಾಗಳಿವೆ. ‘ಸೂರರೈ ಪೊಟ್ರು’ ಸಿನಿಮಾಗಾಗಿ ಸೂರ್ಯ ಕಳೆದ ವರ್ಷ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಚಿತ್ರದಲ್ಲಿನ ನಟನೆಗಾಗಿ ಸೂರ್ಯಗೆ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಜೊತೆಗೆ ‘ಜೈ ಭೀಮ್‌’ ಸಿನಿಮಾ ಕೂಡಾ ಅವರಿಗೆ ಒಂದೊಳ್ಳೆ ಹೆಸರು ತಂದುಕೊಟ್ಟಿತ್ತು. ಇದೀಗ ಸೂರ್ಯ ತಮ್ಮ ಹೊಸ ಸಿನಿಮಾಗೆ ರೆಡಿ ಆಗುತ್ತಿದ್ದಾರೆ.

ಸೂರ್ಯ ಈಗ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಸಿನಿಮಾಗೆ ತಯಾರಾಗುತ್ತಿದ್ದಾರೆ. ಈ ಚಿತ್ರವನ್ನು ಸಿರುತೈ ಶಿವ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಕಂಗುವ’ ಎಂದು ಹೆಸರಿಡಲಾಗಿದೆ. ಇದೊಂದು ಫ್ಯಾಂಟಸಿ ಅಡ್ವೆಂಚರ್‌ ಸಿನಿಮಾ ಆಗಿದ್ದು ಚಿತ್ರತಂಡ ಇತ್ತೀಚೆಗೆ ಕೆಲವೊಂದು ದೃಶ್ಯಗಳನ್ನು ಚಿತ್ರೀಕರಿಸಿದೆ. ಕೊಡೈಕೆನಾಲ್‌ನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಎರಡನೇ ಶೆಡ್ಯೂಲ್‌ಗೆ ತಯಾರಿ ಮಾಡಿಕೊಳ್ಳುತ್ತಿದೆ. ಚಿತ್ರಕ್ಕಾಗಿ ಉತ್ತಮ ಸೆಟ್‌ ಹಾಗೂ ವಿಎಫ್‌ಎಕ್ಸ್‌ ಅಗತ್ಯವಿದೆ. ಚಿತ್ರ ತಂಡ ಅತ್ತ ಕೆಲವೊಂದು ತಯಾರಿ ಮಾಡಿಕೊಳ್ಳುತ್ತಿದ್ದರೆ ಇತ್ತ ನಟ ಸೂರ್ಯ ಕೂಡಾ ತಮ್ಮ ದೇಹ ದಂಡಿಸುತ್ತಿದ್ದಾರೆ.

ಸೂರ್ಯ, ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ಫೋಟೋವೊಂದು ಕಳೆದ ಎರಡು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದರಲ್ಲಿ ಸೂರ್ಯ ಬೈಸಿಪ್ಸ್‌ ನೋಡಬಹುದು. ಕಳೆದ ಸಿನಿಮಾಗಳಿಗಿಂತ ಈ ಸಿನಿಮಾದಲ್ಲಿ ಬಹಳ ವಿಭಿನ್ನವಾಗಿ ಕಾಣಲು ದೇಹವನ್ನು ಸಜ್ಜುಗೊಳಿಸುತ್ತಿದ್ದಾರೆ. ಹಾಗೇ ಸೂರ್ಯ ಕಂಗುವ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿರುವುದನ್ನು ಗಮನಿಸಬಹುದು. ಸ್ಟುಡಿಯೋ ಗ್ರೀನ್‌, ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋ ನೋಡಿ ಸೂರ್ಯ ಅಭಿಮಾನಿಗಳು ಫೈರ್‌ ಹಾಗೂ ಲವ್‌ ಎಮೋಜಿಯೊಂದಿಗೆ ಕಾಮೆಂಟ್‌ ಮಾಡುತ್ತಿದ್ದಾರೆ.

‘ಕಂಗುವ’ ಚಿತ್ರವನ್ನು ಯುವಿ ಕ್ರಿಯೇಷನ್ಸ್‌ ಹಾಗೂ ಸ್ಟುಡಿಯೋ ಗ್ರೀನ್‌ ಜೊತೆ ಸೇರಿ ನಿರ್ಮಿಸುತ್ತಿದೆ. ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿ ಬಾಲಿವುಡ್‌ ನಟಿ ದಿಶಾ ಪಟಾನಿ ನಟಿಸುತ್ತಿದ್ದಾರೆ. ಇವರೊಂದಿಗೆ ಯೋಗಿಬಾಬು, ಕೊವೈ ಸರಳ, ಅವಿನಾಶ್‌, ಆನಂದ್‌ ರಾಜ್‌ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ದೇವಿ ಶ್ರೀ ಪ್ರಸಾದ್‌ ಸಂಗೀತ ನೀಡುತ್ತಿದ್ದಾರೆ. 2024 ಸಂಕ್ರಾಂತಿ ವೇಳೆಗೆ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆ ಇದೆ.‌

 

ಇದನ್ನೂ ಓದಿ...

Back to top button
>