ರಾಜಕೀಯರಾಜ್ಯ

ರಾಜ್ಯಕ್ಕೆ ಹಿಡಿದ ಗ್ರಹಣ ಬಿಡಿಸಿದ ಕನ್ನಡಿಗರಿಗೆ ಅಭಿನಂದನೆ; ಡಿಕೆಶಿ

Congratulations to the Kannadigas for breaking the grip of the state; DK

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಕರ್ನಾಟಕಕ್ಕೆ ಮೂರೂವರೆ ವರ್ಷದಿಂದ ಹಿಡಿದ ಗ್ರಹಣ ಬಿಡುಗಡೆ ಆಗಿದೆ. ಗ್ರಹಣ ಬಿಡಿಸಿದ ರಾಜ್ಯದ ಜನತೆಗೆ ಹೃದಯ ಪೂರ್ವಕ ಅಭಿನಂದನೆ. ಇದು 40 ಪರ್ಸೆಂಟ್‌ ಕಮಿಷನ್‌ ಸರ್ಕಾರದ ವಿರುದ್ಧದ ಗೆಲುವು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಭಾರತ್‌ ಜೋಡೋ ಭವನ. ಈ ಚುನಾವಣೆಯಲ್ಲಿ ಭಾರತವನ್ನು ಜೋಡಿಸುವ ಪ್ರಯತ್ನಕ್ಕೆ ಸಿಕ್ಕ ಫಲ. ಇದು ನಮ್ಮ ಗೆಲುವಲ್ಲ. ಕರ್ನಾಟಕ ಜನತೆಗೆ ಸಿಕ್ಕ ವಿಜಯ ಎಂದಿದ್ದಾರೆ.

ಕಾಂಗ್ರೆಸ್‌ ಪಕ್ಷದ ಗ್ಯಾರೆಂಟಿಗೆ ಸಿಕ್ಕ ಗೆಲುವು
ಇದು ಭ್ರಷ್ಟಾಚಾರದ ವಿರುದ್ಧ ಗೆಲುವು, ಬೆಲೆ ಏರಿಕೆ, ಬಿಜೆಪಿ ಸರ್ಕಾರ ರೈತರಿಗೆ ಕೊಟ್ಟ ಕಷ್ಟದ ವಿರುದ್ಧದ ಗೆಲುವು, ಯುವ ಸಮುದಾಯದ ನಿರುದ್ಯೋಗ ಸಮಸ್ಯೆ ವಿರುದ್ಧದ ಗೆಲುವು. ಕಾಂಗ್ರೆಸ್‌ ಪಕ್ಷದ ಗ್ಯಾರೆಂಟಿಗೆ ಸಿಕ್ಕ ಗೆಲುವು ಆಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ಗ್ಯಾರೆಂಟಿಯನ್ನು ಜಾರಿಗೊಳಿಸುವುದಕ್ಕೆ ಬದ್ಧರಾಗಿದ್ದೇವೆ. ನಾಡದೇವಿ ಚಾಮುಂಡಿಯ ಸನ್ನಿಧಿಯಲ್ಲಿ ಈ ಕುರಿತು ಭರವಸೆಯನ್ನು ನಾನು ಮತ್ತು ಸಿದ್ದರಾಮಯ್ಯ ನೀಡಿದ್ದೆವು. ಅದನ್ನು ಈಡೇರಿಸುತ್ತೇವೆ. ಕಾಂಗ್ರೆಸ್‌ ಪಕ್ಷಕ್ಕೆ ಜನಾದೇಶ ಸಿಕ್ಕಿದೆ.

ನಾಳೆ ಸಂಜೆ ಶಾಸಕಾಂಗ ಪಕ್ಷದ ಸಭೆ
ಕನ್ನಡಿಗರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ಕೆಪಿಸಿಸಿ ಅಧ್ಯಕ್ಷನಾದ ಬಳಿಕ ಎಲ್ಲ ನಾಯಕರು, ಕಾರ್ಯಕರ್ತರ ಸಹಕಾರ ಸಿಕ್ಕಿತು. ಸೋನಿಯಾ ಗಾಂಧಿ ಅವರಿಗೆ ಕೊಟ್ಟ ಮಾತು ಉಳಿಸುವ ಭಾಗ್ಯ ನನಗೆ ಸಿಕ್ಕಿದೆ. ಜನ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಕೆಲಸ ಮಾಡುತ್ತೇವೆ. ನಾಳೆ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಉಳಿದೆಲ್ಲ ವಿಚಾರ ಅಲ್ಲಿ ತೀರ್ಮಾನವಾಗಲಿದೆ ಎಂದು ಡಿಕೆ ಶಿವಕುಮಾರ್ ವಿವರಿಸಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಹೊಸ ಬೆಳಕು ತೋರಿದ ಕನ್ನಡಿಗರು
ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ, ಇಂದು ಐತಿಹಾಸಿಕ ದಿನ. ಕರ್ನಾಟಕದ ಜನತೆ ಪ್ರಜಾಪ್ರಭುತ್ವಕ್ಕೆ ಹೊಸ ಬೆಳಕು ತೋರಿದ್ದಾರೆ. ಕೇವಲ ಕರ್ನಾಟಕಕ್ಕೆ ಅಲ್ಲ, ದೇಶಕ್ಕೆ ಕೂಡ. ಕನ್ನಡಿಗರಿಗೆ ಸಿಕ್ಕ ಜಯ. ಪ್ರತಿಯೊಬ್ಬ ಕನ್ನಡಿಗನ ಜಯ, ಮತದಾರನ ಗೆಲುವು, ಕರ್ನಾಟಕದ ಸ್ವಾಭಿಮಾನಕ್ಕೆ ಸಿಕ್ಕ ವಿಜಯ, ಬ್ರ್ಯಾಂಡ್‌ ಕರ್ನಾಟಕಕ್ಕೆ ಸಿಕ್ಕ ಗೆಲುವು. ಇದು ಕಾಂಗ್ರೆಸ್‌ ಕಾರ್ಯಕರ್ತರ ಪ್ರಯತ್ನಕ್ಕೆ ಸಿಕ್ಕ ಫಲ ಎಂದು ಹೇಳಿದ್ದಾರೆ.

ಇದನ್ನೂ ಓದಿ...

Back to top button
>