ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಕಾಂಗ್ರೆಸ್ ಉಚಿತ ಉಡುಗೊರೆಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿಗೆ ಈಗ ಪರಿಸ್ಥಿತಿ ಉಲ್ಟಾ ಹೊಡೆದಿದೆ. ಮಹಿಳೆಯರಿಗೆ ಉಚಿತ ಬಸ್, ಉಚಿತ ವಿದ್ಯುತ್ ಸೇರಿ 5 ಗ್ಯಾರಂಟಿಗಳನ್ನ ಸಿದ್ದರಾಮಯ್ಯ ಸರ್ಕಾರ ಅಧಿಕೃತವಾಗಿ ಜಾರಿಗೆ ತಂದಿದೆ. ಈ ಬಗ್ಗೆ ಟ್ವೀಟ್ ಮಾಡಿ ಬಿಜೆಪಿ ನಾಯಕರನ್ನ ಕೆಣಕಿ ನಿಮಗೂ ಕರೆಂಟ್ ಫ್ರೀ ಎಂದಿದೆ ಕಾಂಗ್ರೆಸ್!
ಹೌದು, ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಕೇವಲ 66 ಸ್ಥಾನ ಪಡೆದು ಹೀನಾಯ ಸೋಲು ಕಂಡಿತ್ತು. ಕಾಂಗ್ರೆಸ್ ಬರೋಬ್ಬರಿ 135 ಸ್ಥಾನ ಪಡೆದಿದೆ. ಈ ಮೂಲಕ ಭರ್ಜರಿ ಬಹುಮತದ ಸರ್ಕಾರ ರಚಿಸಿದೆ. ಆದರೆ ಕಾಂಗ್ರೆಸ್ ಇಂತಹ ದೊಡ್ಡ ಗೆಲುವು ಸಾಧಿಸಲು ಉಚಿತ ಉಡುಗೊರೆಯ ವಾಗ್ದಾನ ಕೂಡ ಸಿಕ್ಕಾಪಟ್ಟೆ ಕೆಲಸ ಮಾಡಿತ್ತು. ಇಷ್ಟಾದರೂ ಉಚಿತ ಉಡುಗೊರೆ ಜಾರಿಯಾಗಿಲ್ಲ ಅಂತಾ ಬಿಜೆಪಿ & ವಿಪಕ್ಷ ನಾಯಕರು ಲೇವಡಿ ಮಾಡಿದ್ದರು. ಆದರೆ ಇಂದು ಅದಕ್ಕೆ ಕೊನೆ ಮೊಳೆ ಬಿದ್ದಿದೆ.
‘ಬೊಮ್ಮಾಯಿ ಅವರೇ ನಿಮ್ಮ ಮನೆಗೂ ಕರೆಂಟ್ ಫ್ರೀ’ ಸಿಎಂ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು, 5 ಗ್ಯಾರಂಟಿ ಜಾರಿಗೆ ಇಂದು ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿ,ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ ಅವರೇ, ನಿಮ್ಮ ಮನೆಗೂ ಫ್ರೀ! ಅವರೇ, ನಿಮಗೂ ಪ್ರಯಾಣ ಫ್ರೀ!,ಅವರೇ, ನಿಮ್ಮ ಮನೆಯವರಿಗೂ 2000 ಫ್ರೀ!, ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ.’ ಎಂದಿದೆ.
ಬಿಜೆಪಿ ನಾಯಕರು ಈಗ ಏನ್ ಹೇಳಬಹುದು? ಕಾಂಗ್ರೆಸ್ ತನ್ನ ಟ್ವೀಟ್ ಮೂಲಕ ಬಿಜೆಪಿ ನಾಯಕರಾದ ನಳಿನ್ ಕುಮಾರ್ ಕಟೀಲ್ ಸೇರಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಹಾಗೂ ಸಿಟಿ ರವಿ ಅವರನ್ನ ಕೆಣಕಿದೆ. ಬಿಜೆಪಿಯ ಈ ನಾಯಕರು ಇಷ್ಟುದಿನ ಕಾಲ ಕಾಂಗ್ರೆಸ್ ಗ್ಯಾರಂಟಿಗಳು ಜಾರಿ ಆಗಲ್ಲ, ಕಾಂಗ್ರೆಸ್ ಹೇಳೋದೆಲ್ಲಾ ಸುಳ್ಳು ಅಂತಿದ್ರು. ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಐದೂ ಗ್ಯಾರಂಟಿ ಜಾರಿಗೆ ತಂದಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಈಗ ಏನ್ ಹೇಳಬಹುದು? ಅಂತಾ ಕಾಂಗ್ರೆಸ್ ನಾಯಕರು ಕಾಲು ಎಳೆಯುತ್ತಿದ್ದಾರೆ.